ಹೈ ಡ್ರಾಮಾ ನಡುವೆ ಶೆಡ್ ಗಳು,ತೆರುವು, ಜನ ಪ್ರತಿ ನಿಧಿಗಳನ್ನು ತರಾಟೆಗೆ. ಮೋಸ ಮಾಡಿದ ಪಾಲಿಕೆ ಸದಸ್ಯ!!,ಶಾಸಕರು ಕೈ ಹಿಡಿಯಲಿಲ್ಲ ಜನರ ಆಕ್ರೋಶ.!! ಶ್ರೀರಾಮುಲು ಬರಲೇ ಇಲ್ಲ..
:-ಜನರ ಆಕ್ರೋಶ ವಿಡಿಯೋ ದಲ್ಲಿ ನೋಡಬೇಕು
ಬಳ್ಳಾರಿ(12) ನಗರದ, ತಾಳೂರು ರಸ್ತೆಯ ಶ್ರೀನಗರದ ಸಣ್ಣ ಕಾಲುವೆ ಗೋವಿಂದಪ್ಪ ಕಲ್ಯಾಣ ಮಂಟಪ ಹಿಂದುಗಡೆ ಕೆಲ ವರ್ಷ ಗಳು ಹಿಂದೆಯಿಂದ ಸರ್ಕಾರದ ಕಾಲುವೆ ಸ್ಥಳ ದಲ್ಲಿ, ನಾಲ್ಕು ಶೀಟ್ ಶೆಡ್ ನಿರ್ಮಾಣ, ಮಾಡಿಕೊಂಡು ಅದರಲ್ಲಿ ಕೆಲ ಕುಟುಂಬ ಗಳು ಇದ್ದಾವೆ.
ಅದರ ಪಕ್ಕ ದಲ್ಲಿ ಕೆಲ ಲೇಔಟ್ ಗಳು ಆಗಿದ್ದಾವೆ, ಇದರಿಂದ ಅಲ್ಲಿಯ ಶೆಡ್ ಖಾಲಿ ಮಾಡಿಸಬೇಕು ಅನ್ನುವುದು, ಕೆಲವರ ಆಲೋಚನೆ, ಆಗಿದೆ, ಆದರೇ ಈಹಿಂದೆ ಒಮ್ಮೆ ನ್ಯಾಯಲಯ ದಿಂದ ಅನುಮತಿ ಪಡೆದು ತೆರುವು ಮಾಡಲಾಗಿತ್ತು.
ಅಸಮಯದಲ್ಲಿ ಬಿಜೆಪಿ ಶ್ರೀ ರಾಮುಲು ಅವರು, ಪ್ರವೇಶ ಮಾಡಿ, ಅಲ್ಲಿಯಾ ನಿವಾಸಿಗಳು, ರಕ್ಷಣೆ ಕೊಟ್ಟು, ಮತ್ತೆ ಅದೇ ಪ್ರದೇಶ ದಲ್ಲಿ, ಶೆಡ್ ಗಳು, ಹಾಕಿಕೊಂಡು ವಾಸ ಮಾಡಲು, ಬೆಂಬಲ ಮಾಡಿದ್ದರು.
ಮತ್ತೆ ಇತ್ತೀಚೆಗೆ ಅದೇ ದೂರು ಲೋಕಾಯುಕ್ತ ಕ್ಕೆ ಹೋಗಿದ್ದು, ಮತ್ತೆ ತೆರುವು ಮಾಡಲು, ಆದೇಶ ಬಂದಿದೆ. ಶನಿವಾರ, ನೀರಾವರಿ ಡಿಪಾರ್ಟ್ಮೆಂಟ್, ಪೊಲೀಸ್ ರು,ತೆರುವು ಮಾಡಲು ಬೆಳ್ಳಿಗೆ ದಿಂದ ಹರಸಾಹಸ ಮಾಡಿದ್ದರು, ನಿವಾಸಿಗಳ ವಿರೋಧ ಕೂಡ ಅದೇ ಮಟ್ಟದಲ್ಲಿ ಇತ್ತು.
ನಿವಾಸಿಗಳು ಪರವಾಗಿ ಶ್ರೀರಾಮುಲು ಬರುತ್ತಾರೆ ಎಂದು, ಅವರ ಆಪ್ತರಿಂದ ಕಾಲ್ ಬಂದಿತ್ತು, ಅಧಿಕಾರಿಗಳನ್ನು ಅವರ ಮನೆ ಹತ್ತಿರ ಬನ್ನಿ ಎಂದು ಹೇಳಿದರು, ಆದರೇ ಅಧಿಕಾರಿಗಳು ಡ್ಯೂಟಿ ಯಲ್ಲಿ ಇದ್ದಿವಿ, ಆರ್ಡರ್ ಇದೇ, ನಾವು ಬರಲು ಆಗಲ್ಲ ಎಂದು ದೂರವಾಣಿ ಯಲ್ಲಿ ತಿಳಿಸಿದ್ದರು, ಅವರೇ ಬರುತ್ತಾರೆ, ತೆರುವು ಮಾಡಬೇಡಿ ಎಂದು ಹೇಳಿದರು, ಬರಲಿ ಎಂದು 1.ಗಂಟೆ ವರೆಗೆ,ಕಾಯುತ ಇದ್ದರು, ರಾಮುಲು ಅವರು ಬರಲೇ ಇಲ್ಲ, ಪೂಜೆಯಲ್ಲಿ ಇದ್ದಾರೆ, ಎಂದರು, ಅವರ ಪೂಜೆ ಮುಗಿಯಲಿಲ್ಲ, ಅವರು ಬರಲಿಲ್ಲ, ಕಾದು ಕೂತ ಅಧಿಕಾರಿಗಳು, ಜೆಸಿಬಿ ಮೂಲಕ, ಘರ್ಜನೆ ಮಾಡಿ ತೆರುವು ಮಾಡಿದರು.
ಶೆಡ್ ಮಾಲೀಕರು, ಪಾಲಿಕೆ ಸದಸ್ಯ ಶ್ರೀನಿವಾಸ್ ಮೋತ್ಕರ್ ದಿಂದ ಮೋಸ ಹೋಗಿದ್ದಿವಿ ಎಂದು,ಲೇ ಔಟ್ ಮಾಲೀಕರು ದಿಂದ ಹಣ ಸೈಟ್ ಪಡೆದು, ನಮಗೆ ವಂಚನೆ ಮಾಡಿದ್ದಾರೆ ಎಂದು, ಈವರ ಇಂದಲೇ ಕೋರ್ಟ್ ಗೆ ಹೋಗಿದ್ದು ಅಲ್ಲಿ ಕೂಡ ನಮಗೆ ಏನು ತಿಳಿಯದಂತೆ, ಕಳ್ಳ ಆಟ ಮಾಡಿದ್ದರೆ ಎಂದು, ಆಕ್ರೋಶವಾಗಿ,ಏಕವಚನ ದಿಂದ ನಿಂದನೆ ಮಾಡಿದ್ದಾರೆ. ಪಾಲಿಕೆ ಸದಸ್ಯ ಮನೆಯಲ್ಲಿ ಮುಸುರೆ, ಪಾಯಿಕಾನೆ ಸ್ವಚ್ಛ ಮಾಡಬೇಕು ಅಂತೆ, ಇಲ್ಲದಿದ್ದರೆ, ನಿಮ್ಮ ಶೆಡ್ ಮಟಾಷ್ ಎಂದು ಹೇಳಿದ್ದರು ಅದೇ ಮಾಡಿದ್ದಾರೆ ಎಂದು, ಈ ಹಿಂದೆ ಕೂಡ, ಪೊಲೀಸ್ ರಿಗೆ ಬಿರಿಯಾನಿ ಊಟ ಮಾಡಿಸಿ ತಿನ್ನಿಸಿದ್ದು,, ರಾಮುಲು ಬಂದರೆ ಏನು ಮಾಡುತ್ತಾರೆ, ನಿಮ್ಮ ಶೆಡ್ ಹೋಗಲೇ ಬೇಕು ಅಂದಿದ್ದಾರೆ ಎಂದು, ದೂರಿದ್ದಾರೆ.
ನಗರ ಶಾಸಕರು ಮನೆ ಬಳಿ ಹೋಗಿದ್ದು, ಅವರು ಕೂಡ ನಮ್ಮನ್ನು ಕೈ ಹಿಡಿಯಲಿಲ್ಲ, ಜಿಲ್ಲಾ ಆಸ್ಪತ್ರೆ ಪಕ್ಕದ ರೂಮ್ ಗಳ ಬಳಿ ಇರಲು ಹೇಳುತ್ತಾರೆ, ಹಣ ಬಿಸ ಹಾಕಿದ್ರೆ ಓಟು ಹಾಕುತ್ತಾರೆ, ಹೋಗಿ ನಾವು ಏನು ಮಾಡಬೇಕು ಎಂದು ವಾಪಸ್ಸು ಕಳಿಸಿದ್ದಾರೆ, ಸೊಕ್ಕಿನ ಮಾತು ಗಳು, ಮಾತಾಡಿದ್ದಾರೆ ಎಂದು ಸಮಯ ಬರಬೇಕು ಹೇಳುತ್ತೀವಿ, ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ನಾಲ್ಕುಶೆಡ್ ಗಳ ಹಿಂದೆ ಏನೋ ಮರ್ಮ ಇದೇ. ನೊಂದ ಕುಟುಂಬ ಕೆಲ ಪ್ಲಾನ್ ಮಾಸ್ಟರ್ ಗಳ ಹೆಸರು ಹೇಳಿದ್ದಾರೆ, ಅಲ್ಲಿ ಇರುವ ಲೇ ಔಟ್ ಮಾಲೀಕರು ಮೇಲೆ ಅನುಮಾನ ಗಳು ಹುಟ್ಟುಕೊಂಡಿವೆ, ಇವರ ದಾಖಲೆ ಗಳು ಸರ್ಕಾರ ಪರಿಶೀಲನೆ ಮಾಡಬೇಕು ಆಗಿದೆ. ಬಹುತೇಕ ಲೇ ಔಟ್ ಗಳು, ಸರ್ಕಾರ ಜಾಗ ಪಕ್ಕದಲ್ಲಿ ಇದ್ದರೆ, ಅದನ್ನು ಒತ್ತುವರಿ ಮಾಡಿಕೊಂಡಿದ್ದಾರೆ.
ಅದುಕುಡಾ ತೆರುವು ಆಗಬೇಕು, ಸರ್ಕಾರ ಜಾಗ ದಲ್ಲ ಓತ್ತುವರಿ ಆಗಿದ್ದಾರೆ ಯಾರೇ ಆಗಲಿ ಬೇಡಬಕು.
ಶನಿವಾರ ನಡೆದ ಘಟನೆ, ಅಲ್ಲಿಯಾ ನಿವಾಸಿಗಳು, ಸ್ವಲ್ಪ ಅಪಾಯದ ವಾತಾವರಣ ಸೃಷ್ಟಿ ಮಾಡಿದ್ದರು, ಕೌಲ್ ಬಜಾರ್ ಠಾಣೆಯ ಅಧಿಕಾರಿ ಸುಭಾಷ್ ಧೈರ್ಯ, ಸಾಹಸ ದಿಂದ ಯಾವದೇ ಸಮಸ್ಯೆ ಆಗಲಿಲ್ಲ. ಯಲ್ಲರೂ ಚನ್ನಾಗಿ ಮಾಡಿದ್ದಾರೆ.
ನಿವಾಸಿಗಳ ಆಕ್ರೋಶ ವಿಡಿಯೋ ಗಳಲ್ಲಿ ನೋಡಬೇಕು, ಪ್ರತಿ ಕ್ಷಣ ಸರ್ಕಾರದ ಅಧಿಕಾರಿಗಳು ವಿಡಿಯೋ ಮಾಡುತಾ ಇದ್ದರು.
ಈ ನಾಲ್ಕು ಶೆಡ್ ಗಳ ಹಿಂದೆ ಏನೋ
ಅಸಲಿ ಮರ್ಮ ಇದೇ..!!.
[video width="1280" height="720" mp4="https://news9today.in/wp-content/uploads/2025/10/VN20251012_195413.mp4"][/video]
[video width="720" height="1280" mp4="https://news9today.in/wp-content/uploads/2025/10/VN20251012_195838.mp4"][/video]
[video width="720" height="1280" mp4="https://news9today.in/wp-content/uploads/2025/10/VN20251012_200003.mp4"][/video]
[video width="1280" height="720" mp4="https://news9today.in/wp-content/uploads/2025/10/VN20251012_200907.mp4"][/video]