ಮುಸ್ಲಿಂ ಸಮುದಾಯಕ್ಕೆ ಮೇಯರ್ ಸ್ಥಾನ ನೀಡದ ಕಾಂಗ್ರೆಸ್ ಪಕ್ಷದ ನಿರ್ಧಾರ
ಸಮುದಾಯದಲ್ಲಿ ಅಸಮಾಧಾನದ ಗಾಳಿ ಬಲವಾಗಿ ಬೀಸುತ್ತಿದೆ.
ಬಳ್ಳಾರಿ (16)ಗಣಿನಾಡು ಬಳ್ಳಾರಿ ಮಹಾನಗರ ಪಾಲಿಕೆಯ ಇತ್ತೀಚಿನ ಮೇಯರ್ ಚುನಾವಣೆ, ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ದಶಕಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಅತೀ ಪ್ರಮುಖ ಬೆಂಬಲವಾಗಿರುವ ಮುಸ್ಲಿಂ ಸಮುದಾಯಕ್ಕೆ ಮತ್ತೆ ಮೇಯರ್ ಸ್ಥಾನ ದೊರೆಯದಿರುವುದು ವ್ಯಾಪಕ ಅಸಮಾಧಾನಕ್ಕೆ ದಾರಿ ಮಾಡಿಕೊಟ್ಟಿದೆ.
ಬಳ್ಳಾರಿ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ, "ಚುನಾವಣೆಗೆ ಮಾತ್ರ ಮುಸ್ಲಿಮರ ಮತ ಬೇಕು… ಆದರೇ ಅಧಿಕಾರಕ್ಕೆ ಮುಸ್ಲಿಮರೇ ಬೇಡವಾ?"
ಎಂಬ ಪ್ರಶ್ನೆಗಳು ಈಗ ಬಜಾರ್ ಬದಿ, ಚಾಯ್ ಅಂಗಡಿ, ಗಲ್ಲೀ, ಗಲ್ಲಿಗಳಲ್ಲಿ ಹಬ್ಬಿಕೊಂಡಿವೆ.
ಮಹಾನಗರ ಪಾಲಿಕೆಯ ಮೇಯರ್ ಸ್ಥಾನ ಮುಸ್ಲಿಂ ಸಮುದಾಯಕ್ಕೆ ಸಿಗಬಹುದು ಎಂಬ ವದಂತಿಗಳು ಕೆಲ ದಿನಗಳಿಂದ ಹರಿದಾಡುತ್ತಿದ್ದರೂ, ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಈ ಬಾರಿ ಆ ಗದ್ದುಗೆ ನೀಡದ ನಿರ್ಧಾರ ಕೈಗೊಂಡಿದೆ.
ಇದರಿಂದ ಸಮುದಾಯದ ಒಳಗಡೆ ನಿರೀಕ್ಷೆಯಗಳು ತಣ್ಣೀರು ಸಿಂಪಡಿಸಿದಂತಾಗಿದೆ.
ಮುಸ್ಲಿಂ ಸಮುದಾಯವು ಬಳ್ಳಾರಿ ನಗರ–ಗ್ರಾಮಾಂತರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ವರ್ಷಗಳಿಂದ “ಅಪಾತ್ತು ಬಾಂಧವ” ರೀತಿಯಲ್ಲಿ ಬೆಂಬಲ ನೀಡಿ ಹಲವು ಶಾಸಕರನ್ನು ಗೆಲ್ಲಿಸಿದೆ.
ಆದರೇ ಅಧಿಕಾರ ಹಂಚಿಕೆ ವಿಚಾರ ಬಂದಾಗ “ಕೈಗೆ ಖಾಲಿ ಚಿಪ್ಪು” ಸಿಗುತ್ತದೆ ಎಂಬ ಅಳಲು ತೀವ್ರವಾಗುತ್ತಿದೆ,
ಸಾರ್ವಜನಿಕ ವಲಯ ದಲ್ಲಿ ಕೇಳಿ ಬರುತ್ತದೇ.!!.
“ರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿರುವ ನಮ್ಮವರಾದ ಅವರು ನಮ್ಮ ಸಮುದಾಯದ ಪರ ನಿಲ್ಲುತ್ತಾರಾ ಎಂದುಕೊಂಡಿದ್ದೇವೆ,ಆದರೇ,ನಮಗೆ "ಟೋಪಿ" ಹಾಕಿದ್ದಾರೆ ಅನ್ನುವ ಅಸಮಾಧಾನ ಹುಟ್ಟು ಕೊಂಡಿದೆ..
ಆದರೆ ಚುನಾವಣೆ ಬಂದಾಗ ಮಾತ್ರ ನಮ್ಮನ್ನು ಬಳಸಿಕೊಳ್ಳುತ್ತಾರೆ, ಯಾರೋ ಕೆಲವರ ಲೀಡರಗಳ ಮಾತುಗಳು ಕೇಳಿ ಬಕೆಟ್ ಇಡಿಯುವರ ಒತ್ತಾಯಕ್ಕೆ ಮಣಿದು ನಮ್ಮ ಸಮುದಾಯಕ್ಕೆ ಮೇಯರ್ ಸ್ಥಾನ ತಪ್ಪಿಸಿದ್ದಾರೆ.”
“ಕಾಂಗ್ರೆಸ್ ಪಕ್ಷಕ್ಕೆ ನಾವೇ ಗೆಲುವು ತಂದುಕೊಟ್ಟರೂ, ಪ್ರತಿಫಲವಾಗಿ ನಮಗೆ ಗೌರವದ ಸ್ಥಾನ ನೀಡುವಲ್ಲಿ ಅವರು ಹಿಂದೆ ಸರಿಯುತ್ತಾರೆ,
ಈ ಅನ್ಯಾಯಕ್ಕೆ ತಕ್ಕ ಪಾಠ ಕಲಿಸುವ
ಸಮಯ ಬಂದಿದೆ” ಎಂದು ಸಮುದಾಯಗಳು,ಗುಪ್ತ ವಾಗಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಮುಸ್ಲಿಂ ಸಮುದಾಯದ ಅಸಮಾಧಾನ ಮುಂದಿನ ದಿನಗಳಲ್ಲಿ ಯಾವ ರೀತಿಯ ರಾಜಕೀಯ ಬದಲಾವಣೆಗಳಿಗೆ ಕಾರಣವಾಗುತ್ತದೆ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಹೆಚ್ಚಾಗಿದೆ. ಇಲ್ಲದಿದ್ದರೆ, ಹ ಮಾಮು, ಹ ಭಯ್ಯ, ಅಂದು ಗಲ್ಲ ಹಿಡಿದು ಕೊಡಲೇ, ದಾರಿ ತಪ್ಪಿ ಮೂಲೆ ಗುಂಪು ದಾರಿ ಹಿಡಿದು, ಹಳ್ಳದ ಪಾಲು ಆಗಬಹುದೇ,ಈವರ "ಪ್ರತಾಪ" ಇದೇ ರೇತಿ ಯಲ್ಲಿ, ಇರಬಹುದೇ ಅನ್ನವದು ಕಾದು ನೋಡಬೇಕು ಆಗಿದೆ. ಯಾವದೇ ಪಕ್ಷ ಕ್ಕೆ ಇದೇ ಸಮುದಾಯದ ಮತ ಗಳು, "ಹಾಟ್ " ಇದ್ದಂತೆ.. ಕಾದು ನೋಡಬೇಕು ಆಗಿದೆ, ಕಾಲಘಟ್ಟ ದಲ್ಲಿ.