3008 ಮುತ್ತೆದಯರಿಗೆ ಉಡಿ ತುಂಬುವ ಕಾರ್ಯಕ್ರಮ : ಮೀನಳ್ಳಿ ತಾಯಣ್ಣ
ಬಳ್ಳಾರಿ, ಸೆ.21: ನಗರದ ದುರ್ಗಾಲೋನಿಯ ಪಟೇಲ್ ನಗರದ ಶ್ರೀ ಸಣ್ಣ ದುರ್ಗಮ್ಮ ದೇವಸ್ಥಾನದಲ್ಲಿ ಸೋಮವಾರದಿಂದ ಗುರುವಾರದವರೆಗೆ 10ನೇ ವರ್ಷದ ದಸರಾ ಶರನ್ನವರಾತ್ರಿ ವೈಭವ ನಡೆಯುತ್ತದೆ ಎಂದು ಶ್ರೀ ದುರ್ಗಾದೇವಿ ಟ್ರಸ್ಟ್‌ನ ಅಧ್ಯಕ್ಷರಾದ ಮೀನಳ್ಳಿ ತಾಯಣ್ಣ ಅವರು ತಿಳಿಸಿದರು.
ಈ ಕುರಿತು ಸೋಮವಾರ ಬೆಳಿಗ್ಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ದಸರಾ ವೈಭವದಲ್ಲಿ ವಿಶೇಷವಾಗಿ 3008 ಮುತ್ತೈದಯರಿಗೆ ಉಡಿ ತುಂಬುವ ಕಾರ್ಯಕ್ರಮ, ಶ್ರೀ ವೀರಾಂಜನೇಯ ದೇವಸ್ಥಾನದ ಬಾಲಕಿಯರ ಕೋಲಾಟ ಮಂಡಳಿಯಿಂದ ಕಾರ್ಯಕ್ರಮ,
ಶ್ರೀ ಬಾಲ ತ್ರಿಪುರ ಸುಂದರಿ ದೇವಿ ಅಲಂಕಾರ, ಶ್ರೀ ಲಲಿತಾ ದೇವಿ ಅಲಂಕಾರ, ಶ್ರೀ ಅನ್ನಪೂರ್ಣೇಶ್ವರಿ ದೇವಿ ಅಲಂಕಾರ, ಶ್ರೀ ಮಹಾಲಕ್ಷ್ಮಿ ದೇವಿ ಅಲಂಕಾರ ವೆಂಕಟೇಶ್ವರ ಸ್ವಾಮಿ ಅಲಂಕಾರ, ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ಕಲ್ಯಾಣೋತ್ಸವ. ಶ್ರೀ ವರಹಿ ದೇವಿ ಅಲಂಕಾರ, ಶ್ರೀ ದುರ್ಗಾದೇವಿ ಅಲಂಕಾರ, ಶ್ರೀ ಮಹಿ ಶಾಸೂರ ಮರ್ದಿನ ದೇವಿ ಆಲಂಕಾರ ಕಾರ್ಯಕ್ರಮ ನಡೆಯುತ್ತದೆ ಎಂದು ಅವರು ತಿಳಿಸಿದರು.
ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಪತ್ರಿಕಾಗೋಷ್ಠಿಯಲ್ಲಿ ಶ್ರೀ ದುರ್ಗದೇವಿ ಟ್ರಸ್ಟ್‌ನ ಗೌರವ ಅಧ್ಯಕ್ಷರಾದ ಹನುಮಂತಪ್ಪ ಸಿಎಸ್.ಸತ್ಯನಾರಾಯಣ ಮತ್ತು ಟ್ರಸ್ಟ್‌ನ ಸಂತೋಷ್ ಸ್ವಾಮಿ, ಜಿಎಸ್ ವೆಂಕಟೇಶ್ ಹನುಮಂತಪ್ಪ, ರಾಧಮ್ಮ ಯರಿಸ್ವಾಮಿ, ಸುನಿಲ್, ಕೃಷ್ಣ, ರಮೇಶ್, ವಿಜಯ್ ಉಪಸ್ಥಿತರಿದ್ದರು.
[video width="1280" height="720" mp4="https://news9today.in/wp-content/uploads/2025/09/VN20250921_194031.mp4"][/video]