ಪೆಹಲ್ಗಾಮ್ ಪ್ರವಾಸಿಗರ ಮೇಲಾದ ಉಗ್ರರ ದಾಳಿ ಖಂಡಿಸಿ ಡಿಸಿಸಿ(ನಗರ) ವತಿಯಿಂದ ಪ್ರತಿಭಟನಾ ಮೆರವಣಿಗೆ
ಬಳ್ಳಾರಿ (25)ಜಮ್ಮು ಕಾಶ್ಮೀರದ ಪೆಹಲ್ಗಾಮನಲ್ಲಿ ಪ್ರವಾಸಿಗರ ಮೇಲೆ ದಾಳಿ ಮಾಡಿ 27 ಜನ ಅಮಾಯಕರ ಬಲಿ ಪಡೆದ ಉಗ್ರರ ಹೇಯ ಕೃತ್ಯ ಖಂಡಿಸಿ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಸಮಿತಿ (ನಗರ) ವತಿಯಿಂದ ಇಂದು ದಿನಾಂಕ: 25.04.2025 ಶುಕ್ರವಾರ ಸಂಜೆ 5.30ಕ್ಕೆ ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಇರುವ ಮಹಾತ್ಮ ಗಾಂಧೀಜಿ ಪುತ್ಥಳಿಯ ಸ್ಥಳದಿಂದ ಗಡಿಗಿ ಚೆನ್ನಪ್ಪ ವೃತ್ತದವರೆಗೆ ಮೇಣದ ಬತ್ತಿ ಹಿಡಿದು ಮೆರವಣಿಗೆ ನಡೆಸಿದರು.
ಈ ಪ್ರತಿಭಟನಾ ಮೆರವಣಿಗೆಯಲ್ಲಿ ಶಾಸಕ ಭರತ್ ರೆಡ್ಡಿ ಮುಂಡ್ರಿಗಿ ನಾಗರಾಜ್ ರಾಜೇಶ್ವರಿ ಸುಬ್ಬರಾಯಡು ಹುಮಾ ಯನ್ ಖಾನ್, ಮೇಯರ್, ಪಾಲಿಕೆ ಸದಸ್ಯರು ಹಾಗೂ ಪಕ್ಷದ ಪದಾಧಿಕಾರಿಗಳು ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.