ಬಿಐಟಿಎಂ ವಿದ್ಯಾರ್ಥಿನಿ ಆಲಿಯಾ ಸಮಾ ರಾಷ್ಟ್ರೀಯ ದಾಖಲೆ ಬರೆದ ಸಾಧನೆ
ಬಳ್ಳಾರಿ:ಸೆ,2: ಬಳ್ಳಾರಿ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಂಡ್ ಮ್ಯಾನೇಜ್ ಮೆಂಟ್ ಸಂಸ್ಥೆಗೆ ಹೆಮ್ಮೆ ತಂದಿರುವ ವಿಶಿಷ್ಟ ಸಾಧನೆ (ಇಇಇ) 2025ನೇ ಬ್ಯಾಚ್ ವಿದ್ಯಾರ್ಥಿನಿ ఆలియా ಸಮಾ (302122001) ರಾಷ್ಟ್ರಮಟ್ಟದಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ ಎಂದು ಬಿಐಟಿಎಂ ಕಾಲೇಜಿನ ಪ್ರಾಚಾರ್ಯ ಡಾ||ಯಡವಳ್ಳಿ ಬಸವರಾಜ್ ತಿಳಿಸಿದರು.
ಸದರಿ ಕಾಲೇಜಿನಲ್ಲಿ ಇಂದು ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಬಳ್ಳಾರಿ ನಗರದ ಕಂಟೋನ್‌ಮೆಂಟ್ ಪ್ರದೇಶದ ನಿವಾಸಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಬಳ್ಳಾರಿ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಶಕೀಬ್, ತುಂಗಭದ್ರಾ ಮಂಡಳಿಯ ಅಧೀಕ್ಷಕ ಅಭಿಯಂತರರಾದ ಹಸ್ಮಖಾತುನ್ ದಂಪತಿಯ ಪುತ್ರಿ ಆಗಿದ್ದಾರೆ ಎಂದು ಅವರು ಹೇಳಿದರು.
ಸಾಧನೆಯ ವೈಶಿಷ್ಟ್ಯಗಳು: ಬಿ.ಇ. ಹಾರ್ ಡಿಗ್ರಿಯಲ್ಲಿ ವಿಶ್ವೇಶರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಿಯಮಾವಳಿಯಂತೆ ವಿದ್ಯಾರ್ಥಿಗಳು ಬಿ.ಇ. ಡಿಗ್ರಿಯಲ್ಲಿ 160 ಕ್ರೆಡಿಟ್ ಗಳಿಸಬೇಕಾಗಿದ್ದು,
ಹೆಚ್ಚುವರಿಯಾಗಿ ಕನಿಷ್ಠ 18 ಕ್ರೆಡಿಟ್‌ಗಳು ಪೂರೈಸಬೇಕು. ಆಲಿಯಾ ಸಮಾ, ಹೆಚ್ಚುವರಿಯಾಗಿ 73 ಕ್ರೆಡಿಟ್‌ಗಳನ್ನು ಪೂರೈಸಿ, ರಾಷ್ಟ್ರಮಟ್ಟದ ದಾಖಲೆಯನ್ನು ಬರೆದಿದ್ದಾರೆ. ಈ ಹಿಂದೆ ದಾಖಲೆಯು 39 ಕ್ರೆಡಿಟ್‌ಗಳು ಆಗಿದ್ದು, ಅತ್ಯುನ್ನತವಾಗಿ ಸಾಧಿಸಿದ್ದಾರೆ. ಈ ಸಾಧನೆಗಾಗಿ "ಇಂಡಿಂ-ಮಾ ಬುಕ್ ಆಫ್ ರೆಕಾರ್ಡ್ಸ್" ವತಿಯಿಂದ ಪ್ರಶಸ್ತಿ ಪತ್ರ ಮತ್ತು ಪದಕ ನೀಡಿ ಸನ್ಮಾನಿಸಲಾಗಿದೆ ಎಂದು ಪ್ರಾಂಶುಪಾಲರಾದ ಡಾ|ಯಡವಳ್ಳಿ ಬಸವರಾಜ್ ತಿಳಿಸಿದರು. ಈ ಸಂದರ್ಭದಲ್ಲಿ ಪುಥ್ವಿರಾಜ್, ಹೆಚ್ ಡಿ ಶರಣರೆಡ್ಡಿ, ಶಾಕಿಬ್, ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು