ಬಳ್ಳಾರಿ ಪಾಲಿಕೆ ಇಂಜಿನೀಯರ್ ಮೇಲೆ ದಾಳಿಕಾರ್ಪೊರೇಟರ್ ವಿರುದ್ಧ ಆರೋಪ.
ಬಳ್ಳಾರಿ(3)ನಗರದಲ್ಲಿ ಆತಂಕ ಮೂಡಿಸಿರುವ ಘಟನೆ ಯೊಂದರಲ್ಲಿ ಬಳ್ಳಾರಿ ಮಹಾನಗರ ಪಾಲಿಕೆಯ ಇಂಜಿನೀಯರ್ ವೀರೇಶ್ ಅವರ ಮೇಲೆ ಕಾರ್ಪೊರೇಟರ್ ಒಬ್ಬರಿಂದ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಕೆಲಸದ ವಿಚಾರವಾಗಿ ಉಂಟಾದ ವಾಗ್ವಾದದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ವಾಗ್ವಾದ ತೀವ್ರಗೊಂಡಾಗ ಕಾರ್ಪೊರೇಟರ್ ಹಾಗೂ ಅವರ ಬೆಂಬಲಿಗರು ಇಂಜಿನೀಯರ್ ವೀರೇಶ್ ಅವರ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಘಟನೆಯ ಬಳಿಕ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಸಹೋದ್ಯೋಗಿ ಗಳು ಮತ್ತು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಗಾಯಗೊಂಡಿರುವ ಇಂಜಿನೀಯರ್ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆಗೆ ಸಂಬಂಧಿಸಿ ಪಾಲಿಕೆ ಅಧಿಕಾರಿಗಳು ತೀವ್ರ ಖಂಡನೆ ವ್ಯಕ್ತಪಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುವ ಸಾಧ್ಯತೆ ಇದ್ದು, ತನಿಖೆ ಮುಂದುವರಿದಿದೆ.
ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ಅಧಿಕಾರಿಗಳ ಮೇಲೆ ಇಂತಹ ದಾಳಿಗಳು ನಡೆಯುತ್ತಿರುವುದು ಖಂಡನೀಯ ಎಂದು ನಾಗರಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವೀರೇಶ್ ಹಲವಾರು ವರ್ಷ ಗಳ ದಿಂದ ಪಾಲಿಕೆ ಯಲ್ಲಿ ಕೆಲಸ ಮಾಡುತಾ ಇದ್ದಾರೆ.ಸ್ವಲ್ಪ ಓವರ್ ಆಕ್ಟಿಂಗ್ ಮಾಡುವ ಅಧಿಕಾರಿ ಅನ್ನುವ ಆರೋಪ ಕೂಡ ಇತ್ತು. ಅಧಿಕಾರ ವ್ಯಾಪ್ತಿಯನ್ನು ಮೇರಿ, ಪಬ್ಲಿಕ್ ಗೆ ವಿನಾಕಾರಣ ಸಮಸ್ಯೆ ಮಾಡೋದು, ಇತನ ನಡೆ ನುಡಿ, ಇತಿ ಮಿತಿ ಮೀರಿ ಇದ್ದವು, ಅನ್ನೋದು ಇತ್ತು.ಅಪ್ಪಟ ಚಿನ್ನ ಏನು ಅಲ್ಲ. ಪಬ್ಲಿಕ್ ನಲ್ಲಿ ಬೇಸರ, ತೊಂದ್ರೆ ಉಂಟುಮಾಡುವ, ಅಧಿಕಾರಿ ಅನ್ನುವ ಆರೋಪ ಇದೇ. ಏನೇ ಆಗಲಿ ಅಧಿಕಾರಿಗಳ ಮೇಲೆ ಹಲ್ಲೆ ಮಾಡೋದು,ಪದ್ಧತಿ ಅಲ್ಲ. ಪಾಲಿಕೆ ಆಡಳಿತ ಸಂಪೂರ್ಣ ಹಾಳು ಆಗಿದೆ. ಕಮಿಷನರ್ ಉತ್ತಮ ಅಧಿಕಾರಿಗಳು ಆಗಿದ್ದರು, ಮೇಯರ್, ಮತ್ತು ರಾಜಕಾರಣಗಳ ದಿಂದ, ಇಂತಹ ವಾತಾವರಣ ಸೃಷ್ಟಿ ಆಗಿದೆ.