Web Stories
News 9 Today
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಾಂಗ್ರೆಸ್ಸಿನ ಮತ್ತೊಂದು ವಿಕೆಟ್ ಪತನ

ಕಾಂಗ್ರೆಸ್ಸಿನ ಮತ್ತೊಂದು ವಿಕೆಟ್ ಪತನ

*'ಸ್ವಾಭಿಮಾನಕ್ಕೆ ಧಕ್ಕೆ ಬಂದ್ರೆ ಪಕ್ಷದಲ್ಲಿರುವ ಕುರುಬ ನಾನಲ್ಲ'*

*ಕೊಳಗಲ್ಲು ಅಂಜೀನಿ ಕೆಆರ್'ಪಿಪಿಗೆ ಸೇರ್ಪಡೆ*

ಬಳ್ಳಾರಿ : ಹಿರಿಯ ರಾಜಕಾರಣಿ, ಕಾಂಗ್ರೆಸ್ ಅಂದರೆ ಕೊಳಗಲ್ಲು ಅಂಜಿನಿ, ಕೊಳಗಲ್ಲು ಅಂಜಿನಿ ಅಂದರೆ ಕಾಂಗ್ರೆಸ್ ಎನ್ನುವ ಮಟ್ಟದಲ್ಲಿ ಅವರ ನರನಾಡಿಗಳು ಕೂಡ ಕಾಂಗ್ರೆಸ್ ಕಾಂಗ್ರೆಸ್ ಎಂದು ಶಬ್ದ ಮಾಡುತ್ತಿದ್ದವು.

ಬಳ್ಳಾರಿಗೆ 10 ಕಿಲೋಮಿಟರ್ ದೂರದಲ್ಲಿ ಇರುವ ಕೊಳ್ಳಗಲ್ಲು ಗ್ರಾಮದವರು. ಹೆಚ್ಚಿನ ಸಂಖ್ಯೆಯಲ್ಲಿ ಕುರುಬ ಸಮಾಜ ಇರುವ ಗ್ರಾಮವದು.

ಅಂತಹ ಗ್ರಾಮದಿಂದ ರಾಜಕೀಯವಾಗಿ ರಾಜ್ಯದ ಮಟ್ಟದಲ್ಲಿ ಬೆಳೆದು ಸಿದ್ದರಾಮಯ್ಯ ಅಂತಹ ಲೀಡರ್ಗಳು ಕೂಡ ಕೊಳಗಲ್ಲು ಅಂಜಿನಿ ಎಂದು ಗುರುತಿಸಿ ಲಕ್ಷಾಂತರ ಜನರ ಮದ್ಯದಲ್ಲಿ ಇದ್ದರೆ ಕೂಡ, ಸಿದ್ದರಾಮಯ್ಯ ಅವರು ಇವರನ್ನು ಅಂಜಿನಿ, ಅಂಜಿನಿ ಎಂದು ಕೂಗಿ ಕೂಗಿ ಕರೆಯುತ್ತಿದ್ದರು.

ಸಣ್ಣ ವಯಸ್ಸಿನಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಬಹುದೊಡ್ಡ ನಾಯಕರ ಮಟ್ಟದಲ್ಲಿ ಬೆಳೆದು ನಿಂತಿದ್ದರು.

ಕೊಳಗಲ್ಲು ಅಂಜೀನಿ ಅವರ ಸ್ಟೈಲೇ ವಿಭಿನ್ನ, ಎಂದಿಗೂ ಖಾದಿ ಬಟ್ಟೆ ಕೂಲಿಂಗ್ ಗ್ಲಾಸ್ ಇಲ್ಲದೆ ಹೊರಗಡೆ ಬರುವ ಜಯಮಾನ ಅಲ್ಲವೇ ಅಲ್ಲ.

ಜನರಿಗೆ ಸಹಾಯ ಸಹಕಾರ ಮಾಡುವ ಗುಣವನ್ನು ಹೊಂದಿರುವ ಲೀಡರ್ ಕೊಳಗಲ್ಲು ಅಂಜೀನಿ ಅಂದರೆ ತಪ್ಪಾಗಲಾರದು.

ಯಾವುದೇ ಲೀಡರ್'ಗಳು ಬಾಗಿಲುಗಳಗೆ ಸೆಕ್ಯೂರಿಟಿ ಗಾರ್ಡ್ ಕೆಲಸವನ್ನು ಮಾಡಲಿಲ್ಲ.

ನೇರ ದಿಟ್ಟ ನಿರಂತರ ಇಂತಹ ಲೀಡರ್ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಗೌರವ ಇಲ್ಲದೆ ಇರುವ ಪಕ್ಷದಲ್ಲಿ ಇರಲು ಸಾಧ್ಯವಿಲ್ಲ ಎಂದು ಗುರುವಾರ ತಮ್ಮ ಅಪಾರ ಅಭಿಮಾನಿಗಳ ಜೊತೆಯಲ್ಲಿ ಕೆ.ಆರ್.ಪಿ.ಪಿ ಗಾಲಿ ಜನಾರ್ದನ ರೆಡ್ಡಿಯವರ ಪಕ್ಷವನ್ನು ನಗರದ ಅಭ್ಯರ್ಥಿ ಗಾಲಿ ಲಕ್ಷ್ಮಿ ಅರುಣಾ ಜನಾರ್ದನ ರೆಡ್ಡಿಯವರ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಮಾತನಾಡಿದ ಕೊಳಗಲ್ಲು ಅಂಜಿನಿಯವರು, ಪ್ರಸ್ತುತ ಕಾಂಗ್ರೆಸ್ ಪಕ್ಷದಲ್ಲಿ ಜಿಲ್ಲೆಯ ಕೆಲ ನಾಯಕರ ನಡತೆಗಳು ಸರಿಯಾಗಿ ಇಲ್ಲದ ಕಾರಣ ಕಾಂಗ್ರೆಸ್‌ ಗ್ರಾಮೀಣ ಅಭ್ಯರ್ಥಿಯಾಗಿರವ ನಾಗೇಂದ್ರ ಅವರಿಂದ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇಂತಹ ನಾಯಕರ ಸಮಕ್ಷಮದ ಪಕ್ಷದಲ್ಲಿ ಇದ್ದು, ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಕಿಡಿ ಕಾರಿದರು.

ಈಗಾಗಲೇ ಗ್ರಾಮೀಣ ಕ್ಷೇತ್ರದಲ್ಲಿ ರಾಜ್ಯದ ಪ್ರಭಾವಿ ನಾಯಕರಾಗಿರುವ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರ ಸ್ಪರ್ಧೆ ದಿನ ದಿನಕ್ಕೆ ಗೆಲುವಿನತ್ತ ಪ್ರಯಾಣ ಮಾಡುತ್ತಿದೆ.

ಇಂತಹ ಸಂದರ್ಭದಲ್ಲಿ ನಾಗೇಂದ್ರ ಏನಾದರೂ, ಕಾಂಗ್ರೆಸ್ ಅಭ್ಯರ್ಥಿಯಾಗಿ, ಪಕ್ಷಕ್ಕೆ ಏನಾದರೂ...??ಹಿನ್ನಡೆ ಆಗುವ ಪ್ರಯತ್ನ ಮಾಡಿರಬಹುದು ಅನ್ನುವ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ಕಾಣುತ್ತವೆ.

ಇಂತಹದನ್ನು ನೋಡಿದ ಅಂಜೀನಿಯವರು ವಿರೋಧ ಮಾಡಿರಬಹುದು.

ನಗರದಲ್ಲಿ ಕೂಡ ಅಂಜೀನಿ ಪ್ರಭಾವಿ ನಾಯಕರು ಆಗಿದ್ದಾರೆ. ನಗರದ ಅಭ್ಯರ್ಥಿ ಅಗಿರವ ಭರತ್ ರೆಡ್ಡಿ ಅವರ ಪರ ವಾತಾವರಣ ಕೂಡ ಸರಿಯಾಗಿ ಇಲ್ಲ.

ನಾಯಕರ ಅಸಮಾಧಾನ ದಿನ ದಿನಕ್ಕೆ ಉಸಿರು ಕಟ್ಟುವಂತೆ ಮಾಡುತ್ತಿದೆ.

ಫುಟ್ಬಾಲ್ ಗೆಲ್ಲುವ ಪಕ್ಷ ಎಂದು ತಿಳಿದುಕೊಂಡ ಅಂಜೀನಿ ಅವರು ಕೆಆರ್'ಪಿಪಿ ಪಕ್ಷಕ್ಕೆ ಸೇರ್ಪಡೆಯಾಗಿರಬಹುದು.

(ಕೆ.ಬಜಾರಪ್ಪ ವರದಿಗಾರರು.ಕಲ್ಯಾಣ ಕರ್ನಾಟಕ.)

Author
News 9 Today
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಚೇರಿ ಗಳು ವೀಕ್ಷಣೆ ಮಾಡಿದ, ಜಿಲ್ಲಾಧಿಕಾರಿ. ಬೇಸಿಗೆ,ಸಂದರ್ಭದಲ್ಲಿ ಜನರು ಕಚೇರಿಗಳು ಸುತ್ತ ಬಾರದು, ನಿರ್ಲಕ್ಷ ಮಾಡಿದರೆ,ಕ್ರಮ.ಬಡವರಿಗೆ ಸಮಯ ನೀಡಬೇಕಿತ್ತು: ಶ್ರೀರಾಮುಲುಮಹಿಳಾ ಮೀಸಲು ಮಸೂದೆ ಸ್ವಾಗತಾರ್ಹ; ಆದರೆ ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ: ನಾರಾ ವೈಜಯಂತಿ ರೆಡ್ಡಿ ಅಂಬೇಡ್ಕರ್ ಜಯಂತಿ ಆಚರಣೆ.ಅಂಬೇಡ್ಕರ್ ಜಯಂತಿ ಆಚರಣೆ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.