ಜಾತಿ ಸಮೀಕ್ಷೆ – "ಕುರುಬ" ಎಂದು ಬರೆಯಲು ಕೆ.ಮೋಹನ್ ಕರೆ
ಬಳ್ಳಾರಿ,ಸೆ.19:ಜಾತಿ ಸಮೀಕ್ಷೆಯ ವೇಳೆ ಕುರುಬ ಎಂಬುದನ್ನು ಸ್ಪಷ್ಟವಾಗಿ ದಾಖಲಿಸಬೇಕು ಎಂದು ಜಿಲ್ಲಾ ಕುರುಬರ ಸಂಘದ ಕೆಾರ್ಯದರ್ಶಿ ಕೆ.ಮೋಹನ್ ಅವರು ತಮ್ಮ ಸಮುದಾಯದರಿಗೆ ಕರೆ ನೀಡಿದ್ದಾರೆ.
ರಾಜ್ಯ ಸರ್ಕಾರದ ನೇತೃತ್ವದಲ್ಲಿ ರಾಜ್ಯದಾದ್ಯಂತ ನಡೆಯುತ್ತಿರುವ ಜಾತಿ ಸಮೀಕ್ಷೆಯು ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7, 2025ರವರೆಗೆ ನಡೆಯಲಿದ್ದು, ಕುರುಬ ಸಮುದಾಯದ ಸರ್ವ ಸದಸ್ಯರು ಸಮೀಕ್ಷಾಧಿಕಾರಿಗಳಿಗೆ ತಮ್ಮ ಜಾತಿ ‘ಕುರುಬ’ ಎಂದು ತಿಳಿಸಲು ಮುಂದಾಗಬೇಕು ಎಂದು ಸಂಘದ ಕೆಾರ್ಯದರ್ಶಿ ಕೆ.ಮೋಹನ್ ಮನವಿ ಮಾಡಿದ್ದಾರೆ.
ಶಿಕ್ಷಣ,ಉದ್ಯೋಗ,ರಾಜಕೀಯ ಹಾಗೂ ಸಾಮಾಜಿಕ ಹಕ್ಕುಗಳ ಕಾಯ್ದಿರಿಸಿಕೊಳ್ಳಲು ಸಮುದಾಯದ ಸಮಗ್ರ ಶಕ್ತಿ ಏಕೀಕೃತವಾಗಿ ದಾಖಲಾಗುವುದು ಅಗತ್ಯ.
ಸಮೀಕ್ಷೆಯಲ್ಲಿ ತಪ್ಪಾಗಿ ಬರೆಸಿಕೊಳ್ಳದಂತೆ ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು.
ಕುರುಬ ಸಮುದಾಯಕ್ಕೆ ಸಂಬಂಧಿಸಿದ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಆರ್ಥಿಕ ಹಕ್ಕುಗಳನ್ನು ಭದ್ರಪಡಿಸಲು ಈ ಸಮೀಕ್ಷೆ ಮುಖ್ಯವಾದದ್ದು ಒತ್ತಿ ಹೇಳಲಾಯಿತು.
ಸಮುದಾಯದ ಪ್ರತಿಯೊಬ್ಬರು ಸಮೀಕ್ಷಾಧಿಕಾರಿಗಳಿಗೆ ತಾವು ಕುರುಬ ಸಮುದಾಯದವರೇ ಎಂಬುದಾಗಿ ನಿಖರವಾಗಿ ದಾಖಲಿಸಬೇಕು.ಸಮುದಾಯದ ಬಲವರ್ಧನೆಗೆ ಇದು ಒಂದು ಮಹತ್ವದ ಹೆಜ್ಜೆಯಾಗುತ್ತದೆ
📌 ಜಾತಿ ಕಾಲಂ ಸಂಖ್ಯೆ:9
📌 ಜಾತಿ:ಕುರುಬ
📌 ಕೋಡ್ ಸಂಖ್ಯೆ: A-0809
ಈ ಕುರಿತು ಸಂಘದ ಮುಖಂಡರು, “ಜಾತಿ ಸಮೀಕ್ಷೆಯಲ್ಲಿ ಸರಿಯಾದ ಮಾಹಿತಿ ನೀಡುವುದರಿಂದ ಮಾತ್ರ ಸಮುದಾಯಕ್ಕೆ ಬರುವ ಹಕ್ಕುಗಳನ್ನು ಸಂಪೂರ್ಣವಾಗಿ ಪಡೆಯಲು ಸಾಧ್ಯ.ಆದ್ದರಿಂದ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಪಾಲ್ಗೊಳ್ಳಬೇಕು” ಪತ್ರಿಕಾ ಪ್ರಕಟಣೆ ಮೂಲಕ ಸಂಘದ ಕೆಾರ್ಯದರ್ಶಿ ಕೆ.ಮೋಹನ್ ಮನವಿ ಮಾಡಿದ್ದಾರೆ.