ಮುಖ್ಯಮಂತ್ರಿ ಗಳು ಗೆ ದೂರು.ಕರ್ನಾಟಕ ಪತ್ರಕರ್ತರ ಸಂಘ ದಿಂದ ಪ್ರತಿಭಟನೆ
ವಿಜಯನಗರ/ಬಳ್ಳಾರಿ.(14)
ನಗರದ ಪುನೀತ್ ರಾಜಕುಮಾರ್ ವೃತ್ತದಲ್ಲಿ ಕರ್ನಾಟಕ ಪತ್ರಕರ್ತರ ಸಂಘದಿಂದ ಪತ್ರಕರ್ತನ ಮೇಲೆ ಹಲ್ಲೆಗೆ ಖಂಡಿಸಿ ಕರ್ನಾಟಕ ರಾಜ್ಯದ ಕೆಎಂಎಫ್ ಅಧ್ಯಕ್ಷ ಎಸ್. ಭೀಮನಾಯ್ಕ್ ವಿರುದ್ಧ ಪ್ರತಿಭಟನೆಯನ್ನು ಪತ್ರಕರ್ತರು ಮಾಡಿದರು.
ಫೆಬ್ರವರಿ 10, 2025 ರಂದು ವಿಜಯನಗರ ಜಿಲ್ಲಾ ಹೊಸಪೇಟೆ ತಾಲೂಕಿನ ಕೋರ್ಟ್ ಆವರಣದಲ್ಲಿ ಮಧ್ಯಾಹ್ನ 3 ರಿಂದ 4 ಗಂಟೆಯಲ್ಲಿ ಪತ್ರಕರ್ತರಾದ ಮೊಹಮ್ಮದ್ ಗೌಸ್ ಮತ್ತು ಈಟಿವಿ ಭಾರತ್ ಇಬ್ಬರು ವರದಿಗಾರರು ಹೊಸಪೇಟೆಯ ರಾಣಿ ಪೇಟೆಯಲ್ಲಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆಯನ್ನು ಪ್ರಕಟಣೆ ಮಾಡುತ್ತಿರುವ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ನಾವು ಅಲ್ಲಿ ಸುದ್ದಿಗಾಗಿ ಕಾಯುತ್ತಿದ್ದೆವು ಅಷ್ಟರಲ್ಲೇ ಭೀಮನಾಯಕ್ ಟೊಯೋಟಾ ಕಂಪನಿಯ ಕಾರು ಅಲ್ಲಿ ನಿಂತಿರುವುದು ಮತ್ತು ಭೀಮನಾಯ್ಕ್ ಎಂಎಲ್ಎ ಹಗರಿಬೊಮ್ಮನಹಳ್ಳಿ ಕ್ಷೇತ್ರ ಎಂದು ಬರೆದಿರುವ ಕಾರು ವಾಹನದ ಪಾಸ್ ಇರುವುದನ್ನು ಕಂಡು ನಮ್ಮ ಪತ್ರಕರ್ತರು ವಿಡಿಯೋ ಮಾಡಲು ಆರಂಭ ಮಾಡಿದಾಗ, ಕಾರಿನಿಂದ ಇಳಿದು ನಮ್ಮ ಪತ್ರಕರ್ತರಾದ ಮಹಮ್ಮದ್ ಗೌಸ್ ಮೇಲೆ ಹಲ್ಲೇ ಮಾಡಿ, ಕೈ ತಿರುಚಿದರು ಮೊಬೈಲ್ ಕಸಿದುಕೊಂಡು, ಗನ್ ಮ್ಯಾನ್ ಮತ್ತು ಬೆಂಬಲಿಗರು ನಮ್ಮ ಪತ್ರಕರ್ತನಿಗೆ ಅವಾಚ್ಯ ಶಬ್ದದಿಂದ ಬೈದು ನಮ್ಮ ಪತ್ರಕರ್ತರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಇದನ್ನು ಖಂಡಿಸಿ ಪತ್ರಕರ್ತರು ಒಟ್ಟಾಗಿ ನಮ್ಮ ಸಂಘದ ಸದಸ್ಯರ ಮೇಲೆ ಆಗಿರುವ ಈ ಒಂದು ಕೃತ್ಯಕ್ಕೆ ನಾವು ಖಂಡಿಸಿ ಅವರ ವಿರುದ್ಧ ಪ್ರತಿಭಟನೆಗೆ ನಡೆಸಿ ಏಳು ದಿನಗಳ ಒಳಗಾಗಿ ಕ್ಷಮೆಯಾಚಿಸಬೇಕು, ಇಲ್ಲದಿದ್ದರೇ ರಾಜ್ಯದಂತ ಪ್ರತಿಭಟನೆ ಮಾಡಲಾಗುತ್ತದೆ ಎಂದರು.
ಇದನ್ನು ರಾಜ್ಯದ ಮುಖ್ಯಮಂತ್ರಿಗಳಾದ ಸಿಎಂ ಸಿದ್ದರಾಮಯ್ಯ ಅವರ ಗೆ ಹೊಸಪೇಟೆ ತಹಶಿಲ್ದಾರರ ಅವರ ಮೂಲಕ ಮನವಿಯನ್ನು ಸಲ್ಲಿಸಿದ್ದೆವೆ ಎಂದು ಮಾಧ್ಯಮಕ್ಕೆ ತಿಳಿಸಿದರು.