Web Stories
News 9 Today
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಟೀಕೆ,ಟಿಪ್ಪಣಿ ಗಳುಗೆ ಗುರಿಯಾದ ಕಾಂಗ್ರೆಸ್ ಸಮಾವೇಶ.!!. ಯಾರಡು ವರ್ಷದ ಸಮಾವೇಶ, ಮುಗಿಬಿದ್ದ,ಬಿಜೆಪಿ

ಟೀಕೆ,ಟಿಪ್ಪಣಿ ಗಳುಗೆ ಗುರಿಯಾದ ಕಾಂಗ್ರೆಸ್ ಸಮಾವೇಶ.!!.
ಯಾರಡು ವರ್ಷದ ಸಮಾವೇಶ, ಮುಗಿಬಿದ್ದ,ಬಿಜೆಪಿ.

ಬಳ್ಳಾರಿ (21)ಕನ್ನಡಿಗರ ಬದುಕಿಗೆ ಶಾಪವಾದ ಕಾಂಗ್ರೆಸ್ ಆಡಳಿತ ರಾಜ್ಯದ ಸಮಗ್ರ ದುಸ್ಥಿತಿ

ಕಳೆದ ಎರಡು ವರ್ಷಗಳ ಕಾಂಗ್ರೆಸ್ ಆಡಳಿತ ರಾಜ್ಯವನ್ನು ಹಿಂದೆಂದೂ ಕಾಣದ ದುಸ್ಥಿತಿಗೆ ದೂಡಿದೆ. ಇದು ಆಡಳಿತ ನಡೆಸುವ ಸರ್ಕಾರವಲ್ಲ, ಕೇವಲ "ವಸೂಲಿ ಸರ್ಕಾರ".

ಕಾಂಗ್ರೆಸ್ ಆಡಳಿತ ಕನ್ನಡಿಗರ ಬದುಕಿಗೆ ಶಾಪವಾಗಿದೆ. ಜನನ ಪ್ರಮಾಣಪತ್ರದಿಂದ ಮರಣ ಪ್ರಮಾಣಪತ್ರದವರೆಗೂ ಪ್ರತಿಯೊಂದರಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ನೆಮ್ಮದಿಯಿಂದ ಬದುಕಲು ಅಥವಾ ಸಾಯಲು ಸಹ ಬಿಡದ ಕ್ರೂರ ಭ್ರಷ್ಟತೆ ರಾಜ್ಯವನ್ನು ಆವರಿಸಿದೆ.

ರಾಜ್ಯ ಇಂದು ಆರ್ಥಿಕ ದಿವಾಳಿ, ಶೂನ್ಯ ಅಭಿವೃದ್ಧಿ, ಕುಸಿದ ಕಾನೂನು ಸುವ್ಯವಸ್ಥೆ, ಸಾಮಾಜಿಕ ನ್ಯಾಯದ ಕಗ್ಗೋಲೆ ಮತ್ತು ವ್ಯಾಪಕ ಭ್ರಷ್ಟಾಚಾರದಿಂದ ನರಳುತ್ತಿದೆ. ಇದು ಜನಾದೇಶಕ್ಕೆ ಮಾಡಿದ ದ್ರೋಹ ಮತ್ತು ರಾಜ್ಯಕ್ಕೆ ತಂದ ಅಪಚಾರ.

II. ಭ್ರಷ್ಟಾಚಾರದ ಬ್ರಹ್ಮಾಂಡ - 'ವಸೂಲಿ ಸರ್ಕಾರ' ಮತ್ತು ಹಗರಣಗಳ ಸರಮಾಲೆ

ಕಾಂಗ್ರೆಸ್ ಸರ್ಕಾರ ಎಂದರೆ ಭ್ರಷ್ಟಾಚಾರದ ಕೂಪ. ಇದು ಸ್ಪಷ್ಟವಾಗಿ "ಕಮಿಷನ್ ಸರ್ಕಾರ", "60% ಸರ್ಕಾರ", ಪ್ರತಿಯೊಂದು ಯೋಜನೆಯಲ್ಲೂ, ಪ್ರತಿ ಟೆಂಡರ್‌ಲ್ಲೂ ಕಮಿಷನ್ ದಂಧೆ ನಡೆಯುತ್ತಿದೆ.

ರಾಜ್ಯವನ್ನು ಕಾಂಗ್ರೆಸ್ ಪಕ್ಷದ "ಎಟಿಎಂ" ಆಗಿ ಪರಿವರ್ತಿಸಿದ್ದಾರೆ. ಕರ್ನಾಟಕದಲ್ಲಿ ಲೂಟಿ ಮಾಡಿದ ಕೋಟ್ಯಂತರ ಹಣವನ್ನು ಪಕ್ಷದ ಹೈಕಮಾಂಡ್‌ಗೆ ಮತ್ತು ಇತರ ರಾಜ್ಯಗಳ ಚುನಾವಣೆಗಳಿಗೆ ಅಕ್ರಮವಾಗಿ ಸಾಗಿಸುತ್ತಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುಟುಂಬದ ಮೇಲೆ ಮುಡಾ ನಿವೇಶನ ಹಗರಣ.

ಕಾಂಗ್ರೆಸ್ ನಾಯಕರೇ ಭ್ರಷ್ಟಾಚಾರದ ಕಿಂಗ್‌ಪಿನ್‌ಗಳು ವಾಲ್ಮೀಕಿ ನಿಗಮದ ₹187 ಕೋಟಿ ಲೂಟಿ ಇದು ಪರಿಶಿಷ್ಟ ಪಂಗಡ ಸಮುಧಾಯಕ್ಕೆ ಮಾಡಿದ ಘೋರ ವಂಚನೆ. ಸ್ಮಾರ್ಟ್ ಮೀಟರ್ ಹೆಸರಿನಲ್ಲಿ ₹15,568 ಕೋಟಿ ಹಗರಣದ ಶಂಕೆ -ಇದರಲ್ಲಿ ಸಚಿವ ಜಾರ್ಜ್ ಪಾತ್ರ.

ಸಚಿವ ಪ್ರಿಯಾಂಕ್ ಖರ್ಗೆ ಸಹೋದರರ ಟ್ರಸ್ಟ್ಗೆ ಮೌಲ್ಯಯುತ ರಕ್ಷಣಾ ಏರೋಸ್ಪೇಸ್ ಪಾರ್ಕ್‌ನಲ್ಲಿ KIADB ಭೂಮಿ ಅಕ್ರಮ ಮಂಜೂರು. ಕಾರ್ಮಿಕ ಮಕ್ಕಳ ಪೌಷ್ಟಿಕಾಂಶ ಕಿಟ್‌ಗಳಖರೀದಿಯಲ್ಲಿ ₹75 ಕೋಟಿ ಭಾರಿ ಹಗರಣ ನೇರ ಹೊಣೆ. ಕಾರ್ಮಿಕ ಸಚಿವ ಸಂತೋಷ್ ಲಾಡ ಇದರ

ಗುತ್ತಿಗೆದಾರರ "60% ಕಮಿಷನ್ ಆರೋಪ ಗುತ್ತಿಗೆದಾರರು ಬಿಲ್ ಪಾಸ್ ಆಗಲು ಲಂಚ ನೀಡದೆ ಕಾಮಗಾರಿ ಮಾಡಲು ಸಾಧ್ಯವಾಗುತ್ತಿಲ್ಲ. ಇದು ಕೇವಲ ಆರೋಪವಲ್ಲ, ಕಾಂಗ್ರೆಸ್ ಸರ್ಕಾರದ ವ್ಯವಸ್ಥಿತ ಲೂಟಿ.

ರಾಜ್ಯದಲ್ಲಿನ ಗಂಭೀರ ಪ್ರಕರಣಗಳ ತನಿಖೆಗೆ ಅಃಖೆ ಗೆ ನೀಡಿದ್ದ ಮುಕ್ತ ಸಮ್ಮತಿಯನ್ನು ಸರ್ಕಾರ ಹಿಂಪಡೆದಿದೆ. ಇದು ಭ್ರಷ್ಟರನ್ನು ರಕ್ಷಿಸಲು ಮತ್ತು ನಡೆದ ಹಗರಣಗಳನ್ನು ಮುಚ್ಚಿಹಾಕಲು ನಡೆಸುತ್ತಿರುವ ವ್ಯವಸ್ಥಿತ ಹುನ್ನಾರ.

III. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ವಿರೋಧಿ ನೀತಿಗಳು ಮತ್ತು ಮುಸ್ಲಿಂ ತುಷ್ಟಿಕರಣ

ಈ ಸರ್ಕಾರ ಸಂವಿಧಾನದ ಆಶಯಗಳಿಗೆ ದ್ರೋಹ ಬಗೆಯುತ್ತಿದೆ. ಉಪಮುಖ್ಯಮಂತ್ರಿಗಳೇ ಬಹಿರಂಗವಾಗಿ 'ಸಂವಿಧಾನ ಬದಲಾಗಲಿದೆ'' ಎಂದು ಹೇಳುವ ಮೂಲಕ ಅಲ್ಪಸಂಖ್ಯಾತರ ಓಲೈಕೆಗಾಗಿ ಸಂವಿಧಾನವನ್ನೇ ಅಪಮಾನಿಸಿದ್ದಾರೆ.

SC/ST ಸಮುದಾಯಕ್ಕೆ ಕಾಂಗ್ರೆಸ್ ಸರ್ಕಾರದಿಂದ ಘೋರ ವಂಚನೆ ಮತ್ತು ಅನ್ಯಾಯ. ಅವರ ಅಭಿವೃದ್ಧಿ ಮತ್ತು ಏಳಿಗೆಗೆ ಮೀಸಲಾದ SCSP-TSP ನಿಧಿಯನ್ನು ಕೊಳ್ಳೆ ಹೊಡೆದು ಬೇರೆ ಉದ್ದೇಶಗಳಿಗೆ ಬಳಸಿದ್ದಾರೆ.

ದಲಿತ ಸಂಘಟನೆಗಳೇ ಸರ್ಕಾರದ ವಿರುದ್ಧ "ಕಾಂಗ್ರೆಸ್ ಹಠಾವೋ ದಲಿತ ಬಚಾವೋ" ಎಂದು ಬೀದಿಗಿಳಿದು ಪ್ರತಿಭಟಿಸುತ್ತಿವೆ. ದಲಿತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ನೆರವಾಗುತ್ತಿದ್ದ ವಿದೇಶಿ ಶಿಷ್ಯವೇತನ ಯೋಜನೆಯನ್ನು ಸಹ ನಿಲ್ಲಿಸಿದ್ದಾರೆ.

ಒಂದೆಡೆ SC/ST ಸಮುದಾಯವನ್ನು ನಿರ್ಲಕ್ಷಿಸಿ ವಂಚಿಸುತ್ತಿರುವ ಸರ್ಕಾರ ಇನ್ನೊಂದೆಡೆ ಕೇವಲ ಮುಸ್ಲಿಂ ಓಲೈಕೆಗೆ ಆದ್ಯತೆ ನೀಡುತ್ತಿದೆ.

ವಿಧಾನಸೌಧದಂತಹ ಪವಿತ್ರ ಸ್ಥಳದಲ್ಲೇ "ಪಾಕಿಸ್ತಾನ್ ಜಿಂದಾಬಾದ್' ಎಂಬ ದೇಶದ್ರೋಹಿ ಘೋಷಣೆಗಳು ಕೇಳಿಬಂದರೂ, ಸರ್ಕಾರ ಅದನ್ನು ಮರೆಮಾಚಲು ಪ್ರಯತ್ನಿಸುವ ಮೂಲಕ ರಾಷ್ಟ್ರ ವಿರೋಧಿಗಳಿಗೆ ಬೆಂಬಲ ನೀಡುತ್ತಿದೆ.

ಇವರದು ಕೇವಲ ಮುಸ್ಲಿಂ ಓಲೈಕೆಯ 'ಹಲಾಲ್ ಬಜೆಟ್'. ಹಿಂದೂಗಳ ತೆರಿಗೆ ಹಣವನ್ನು ಕೇವಲ ಓಲೈಕೆಗಾಗಿ ವಕ್ಸ್, ಉರ್ದು ಶಾಲೆ, ಇಮಾಮ್ಗಳಿಗೆ ಕೋಟಿ ಕೋಟಿ ಅನುದಾನ. ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿಗೆ ಸಾವಿರ ಕೋಟಿ ವ್ಯಯಿಸುತ್ತಿದ್ದಾರೆ.

ಸರ್ಕಾರಿ ಗುತ್ತಿಗೆ ಕಾಮಗಾರಿಗಳಲ್ಲೂ ಹಿಂದೂಗಳಿಗೆ ಅನ್ಯಾಯ - ಮುಸ್ಲಿಮರಿಗೆ ಶೇ.4 ರಷ್ಟು ಮೀಸಲಾತಿ ಜಾರಿ ಮಾಡಿ ತಾರತಮ್ಯ ಎಸಗಿದ್ದಾರೆ.

ವಕ್ಸ್ ಬೋರ್ಡ್ ಮೂಲಕ ಹಿಂದೂ-ರೈತರುಗಳ ಆಸ್ತಿಗಳ ಮೇಲೆ ಅಕ್ರಮ ನೋಟಿಸ್ ನೀಡಲು ಕುಮ್ಮಕ್ಕು, ಅಕ್ರಮ ಗೋಹತ್ಯೆಗೆ ಕುಮ್ಮಕ್ಕು, ಗಲಭೆಕೋರರಿಗೆ ರಕ್ಷಣೆ, ಹಿಂದೂ ಹಬ್ಬಗಳಿಗೆ ಅನುದಾನ ವಿಳಂಬ, ದೇವಾಲಯಗಳ ಬಳಿ ಮದರಸಾ ಅನುಮತಿ, ವಕ್ಸ್ ಅಕ್ರಮಗಳಿಗೆ ಬೆಂಬಲ,ಮುಸ್ಲಿಂ ಮೀಸಲಾತಿ ಹೆಚ್ಚಳಕ್ಕೆ ಹುನ್ನಾರ - ಇವೆಲ್ಲವೂ ಸರ್ಕಾರದ ಹಿಂದೂ ವಿರೋಧಿ ನೀತಿಗಳ ಸ್ಪಷ್ಟ ನಿದರ್ಶನಗಳು.

ಪಹಲ್ಟಾಮ್ ದಾಳಿಯಂತಹ ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ಸಚಿವರು ಅಸಂವೇದನಾಶೀಲ ಹೇಳಿಕೆ ನೀಡಿದ್ದಾರೆ. ಶಾಸಕರು ಸೈನಿಕರಿಗೆ ಅಪಮಾನ ಮಾಡುವ ಮೂಲಕ ದೇಶದ್ರೋಹದ ಪರಮಾವಧಿ ತಲುಪಿದ್ದಾರೆ. ಪಾಕಿಸ್ತಾನದಲ್ಲಿ ಸಿದ್ದರಾಮಯ್ಯ 'ವಝೀರ್-ಏ-ಆಲ' ಎಂದೇ ಫೇಮಸ್ ಆಗಿದ್ದಾರೆ.

IV. ಹದಗೆಟ್ಟ ಕಾನೂನು ಸುವ್ಯವಸ್ಥೆ – ಮಹಿಳೆಯರು ಮತ್ತು ನಾಗರಿಕರಿಗೆ ಅಭದ್ರತೆ

ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕ ರಾಜ್ಯವು ಅರಾಜಕತೆಯ ಕೂಪವಾಗಿ ಮಾರ್ಪಟ್ಟಿದೆ. ಅಭದ್ರತೆಯಲ್ಲಿ ಜನಸಾಮಾನ್ಯರ ನಿತ್ಯ ಬದುಕು.

ಗೃಹ ಸಚಿವರು 'ನನಗೇನೂ ಮಾಹಿತಿ ಇಲ್ಲ' ಎಂದು ಜಾರಿಕೊಳ್ಳುವ 'ದೊಡ್ಡ ನಗರಗಳಲ್ಲಿ ಇದು ಸಾಮಾನ್ಯ' ಉಡಾಫೆ ಹೇಳಿಕೆಗಳ ಬೇಜವಾಬ್ದಾರಿತನವನ್ನು ಪ್ರದರ್ಶಿಸಿದ್ದಾರೆ. ಮೂಲಕ ತಮ್ಮ ನಿಷ್ಕ್ರಿಯತೆ ಮತ್ತು ఎంబ

ಹಿಂದೂ ಕಾರ್ಯಕರ್ತರ ಹತ್ಯೆ, ಜೈನಮುನಿ ಹತ್ಯೆ, ನೇಹಾ ಹಿರೇಮಠ ಕೊಲೆ ಸೇರಿದಂತೆ ಕೊಲೆ. ಸುಲಿಗೆ, ಅತ್ಯಾಚಾರಗಳು ಮಿತಿಮೀರಿವೆ. ಲವ್ ಜಿಹಾದ್ ಹಾವಳಿ ಹೆಚ್ಚಾಗಿದೆ.

ಡ್ರಗ್ಸ್ ಮಾಫಿಯಾ ಮತ್ತೆ ಸಕ್ರಿಯವಾಗಿದೆ. ನಿಷೇಧಿತ PFI ನಂತಹ ಸಂಘಟನೆಗಳ ಚಟುವಟಿಕೆಗಳು ಮತ್ತೆ ಶುರುವಾಗಿವೆ. ಪೊಲೀಸರ ಮೇಲೆಯೇ ಮಾಫಿಯಾಗಳು ಹಲ್ಲೆ ನಡೆಸುವ ಮಟ್ಟಿಗೆ ಕಾನೂನು ಸುವ್ಯವಸ್ಥೆ ಕುಸಿದಿದೆ.

ರಾಜ್ಯದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚುತ್ತಿವೆ. ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಘಟನೆ ಇದಕ್ಕೆ ಒಂದು ಉದಾಹರಣೆ. ಸ್ವೀಪ‌ರ್ ಸೆಲ್‌ಗಳು ಸಕ್ರಿಯವಾಗಿವೆ ಎಂಬ ಭಯ ಜನರನ್ನು ಕಾಡುತ್ತಿದೆ. ಕೋಮು ಗಲಭೆಗಳು ಹೆಚ್ಚುತ್ತಿವೆ. ಸರ್ಕಾರ ಇವುಗಳನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ.

ಸರ್ಕಾರದ ಓಲೈಕೆ ನೀತಿಯಿಂದಾಗಿ ಮತಾಂಧ 'ಬ್ರದರ್ಸ್'ಗಳ ಅಪರಾಧಗಳಿಗೆ "ಫ್ರೀ ಪಾಸ್" ಸಿಕ್ಕಿದೆ.

V. ಕಾಂಗ್ರೆಸ್ ಸರ್ಕಾರದ ದುರಾಡಳಿತ.

ರಾಜ್ಯ ಆರ್ಥಿಕ ದಿವಾಳಿಯ ಅಂಚಿನಲ್ಲಿದೆ. ಕಾಂಗ್ರೆಸ್ ಸರ್ಕಾರದ ದುರಾಡಳಿತ ಮತ್ತು ವ್ಯಾಪಕ ಭ್ರಷ್ಟಾಚಾರದಿಂದಾಗಿ ರಾಜ್ಯದ ಹಣಕಾಸು ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ ಎಂದು ಸ್ವತಃ ಉಪಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ.

ಸರ್ಕಾರದ ಜನವಿರೋಧಿ ನೀತಿಗಳಿಂದಾಗಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಹಾಲು, ನೀರು, ವಿದ್ಯುತ್, ಡೀಸೆಲ್ ಬೆಲೆ ಏರಿಕೆ. ವಿವಿಧ ತೆರಿಗೆ ಮತ್ತು ಶುಲ್ಕಗಳ ವಿಪರೀತ ಹೆಚ್ಚಳದಿಂದಾಗಿ ಬಡವರು ಮತ್ತು ಮಧ್ಯಮ ವರ್ಗದ ಜನರು ತೀವ್ರ ಸಂಕಷ್ಟದಲ್ಲಿದ್ದಾರೆ. ಜನಸಾಮಾನ್ಯರ ಬದುಕನ್ನು ಸಂಪೂರ್ಣವಾಗಿ ದುಸ್ತರಗೊಳಿಸಿದ್ದಾರೆ.ಕಾಂಗ್ರೆಸ್ ಆಡಳಿತದಲ್ಲಿ ರೈತರಿಗೆ, ಸರ್ಕಾರದ ವಂಚನೆ, ನಿರ್ಲಕ್ಷ್ಯದಿಂದ ತೀವ್ರ ಸಂಕಷ್ಟದಲ್ಲಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರ ನೀಡುತ್ತಿದ್ದ ಕಿಸಾನ್ ಸಮ್ಮಾನ್ ನಿಧಿಗೆ ರಾಜ್ಯದ ಪಾಲು 24000 ಸ್ಥಗಿತ. ಗೊಬ್ಬರ-ಬೀಜ-ಉಪಕರಣಗಳ ಬೆಲೆ ಏರಿಕೆ. ವಿವಿಧ ಬೆಳೆಗಾರರಿಗೆ ಬೆಂಬಲ ಬೆಲೆ ನೀಡದೆ ರೈತರ ಆರ್ಥಿಕತೆಗೆ ಕೊಡಲಿಪೆಟ್ಟು.

ಆಡಳಿತದ ಮೊದಲ 10 ತಿಂಗಳಲ್ಲೇ 692 ರೈತರ ಆತ್ಮಹತ್ಯೆ. 'ಪರಿಹಾರಕ್ಕಾಗಿಯೇ ಸಾಯುತ್ತಿದ್ದಾರೆ' ಎಂಬ ಸಚಿವ ಶಿವಾನಂದ ಪಾಟೀಲರ ಅಮಾನವೀಯ ಹೇಳಿಕೆ. ರಾಜ್ಯದ ನೀರನ್ನು ಪರ ರಾಜ್ಯಗಳಿಗೆ ಹಂಚಿ, ಸಣ್ಣ ನೀರಾವರಿ ಯೋಜನೆಗಳಿಗೆ ಅನುದಾನ ಕಡಿತಗೊಳಿಸಿ ಜಲವಂಚನೆ. ಹಕ್ಕುಗಳಿಗಾಗಿ ಪ್ರತಿಭಟಿಸುವ ರೈತರ ಬಂಧನ.

ಯುವಜನರ ಭವಿಷ್ಯವನ್ನ ಕತ್ತಲೆಗೆ ದೂಡಿದ್ದಾರೆ. ಶಿಕ್ಷಣ ಪ್ರಾಧಿಕಾರಗಳು ಭ್ರಷ್ಟಾಚಾರ. ಅವ್ಯವಸ್ಥೆಯ ಕೂಪ. ಪರೀಕ್ಷೆಗಳಲ್ಲಿ ನಿರಂತರ ಆಕ್ರಮ, ಗೊಂದಲ. ನೇಮಕಾತಿಗಳಲ್ಲಿ ಅಕ್ರಮ: ಯುವ ಆಕಾಂಕ್ಷಿಗಳ ಭವಿಷ್ಯದೊಂದಿಗೆ ಸರ್ಕಾರ ಚೆಲ್ಲಾಟವಾಡುತ್ತಿದೆ.

ರಾಜ್ಯದ ಆರೋಗ್ಯ ವ್ಯವಸ್ಥೆಯನ್ನು ಸಂಪೂರ್ಣವಾಗಿ ಹದಗೆಡಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗಳು ಸಾವಿನ ಮನೆಯಾಗಿವೆ. ಗರ್ಭಿಣಿಯರು ಮತ್ತು ಬಾಣಂತಿಯರ ಜೀವ ಉಳಿಸುವಲ್ಲಿ ಸಂಪೂರ್ಣ ವಿಫಲ. ಆರೋಗ್ಯ ಇಲಾಖೆಯಲ್ಲಿ 2.600 ವೈದ್ಯರು-ಸಿಬ್ಬಂದಿ ಹುದ್ದೆಗಳು ಖಾಲಿ ಇದ್ದರೂ ಭರ್ತಿ ಮಾಡಿಲ್ಲ.

ಆಸ್ಪತ್ರೆಗಳಲ್ಲಿ ಆಗತ್ಯ ಸೌಲಭ್ಯಗಳ ಕೊರತೆ. ಕೇಂದ್ರದ 'ಪ್ರಧಾನಮಂತ್ರಿ ಜನೌಷಧಿ' ಕೇಂದ್ರಗಳನ್ನು ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಮುಚ್ಚಲು ಪ್ರಯತ್ನ.

VI. "ಬ್ರಾಂಡ್ ಬೆಂಗಳೂರು" ಭ್ರಮೆ - ರಾಜಧಾನಿಯ ದುಸ್ಥಿತಿ

ಕರ್ನಾಟಕದ ಹೆಮ್ಮೆಯ ರಾಜಧಾನಿ ಬೆಂಗಳೂರನ್ನು, ಸಮಸ್ಯೆಗಳ ಆಗರವಾಗಿಸಿದೆ. ಗ್ರೇಟರ್ ಬೆಂಗಳೂರು" ಹೆಸರಿನಲ್ಲಿ ಪ್ರಜಾಪ್ರಭುತ್ವದ ಕಗ್ಗೋಲೆ. ಗುಂಡಿಬಿದ್ದ ರಸ್ತೆ, ಕಸದ ದುರ್ನಾತ, ಕುಡಿಯುವ ನೀರಿಲ್ಲದೆ ರಾಜಧಾನಿ ನಲುಗಿದೆ. "ಬ್ರಾಂಡ್ ಬೆಂಗಳೂರು" ಕೇವಲ ಪೊಳ್ಳು ಘೋಷಣೆ.

BBMP ಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ, ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಅಪರಾಧ (ಕೊಲೆ, ಅತ್ಯಾಚಾರ, ಡ್ರಗ್ಸ್ ಹಾವಳಿ), ಮಹಿಳೆಯರು-ಮಕ್ಕಳಿಗೆ ರಕ್ಷಣೆ ಶೂನ್ಯ.

2024ರ ಮೊದಲ ಏಳು ತಿಂಗಳಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಬೆಂಗಳೂರಿನಲ್ಲಿ (499 ಪ್ರಕರಣಗಳು) ದಾಖಲಾಗಿವೆ.

ಬಸ್, ಮೆಟ್ರೋ, ನೀರು, ವಿದ್ಯುತ್, ಕಸದ ಸೆಕ್ಸ್, ಪಾಕಿರ್ಂಗ್ ಶುಲ್ಕ, ಸ್ಮಾರ್ಟ್ ವಿದ್ಯುತ್ ಮೀಟರ್, ಡೀಸೆಲ್ ಬೆಲೆ ಏರಿಕೆಗಳಿಂದ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ ಎಂದು ಬಳ್ಳಾರಿ ಬಿಜೆಪಿ ಘಟಕ ಸೋಮವಾರ ಅವರ ಸಾಧನೆ ಏನು ಎಂದು ಪಟ್ಟಿ ಬಿಡುಗಡೆ ಮಾಡಿ ಪತ್ರಿಕಾ ಗೋಷ್ಠಿ ಮಾಡಲಾಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕರು ಸೋಮಶೇಖರ್ ರೆಡ್ಡಿ, ಅಧ್ಯಕ್ಷ ಅನಿಲ್ ನಾಯ್ಡು, ಇನ್ನುಪಕ್ಷದ ಮುಖಂಡರು ಉಪಸ್ಥಿತರಿದ್ದರು.

[video width="1280" height="720" mp4="https://news9today.in/wp-content/uploads/2025/05/VN20250521_095416.mp4"][/video]

Author
News 9 Today
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಚೇರಿ ಗಳು ವೀಕ್ಷಣೆ ಮಾಡಿದ, ಜಿಲ್ಲಾಧಿಕಾರಿ. ಬೇಸಿಗೆ,ಸಂದರ್ಭದಲ್ಲಿ ಜನರು ಕಚೇರಿಗಳು ಸುತ್ತ ಬಾರದು, ನಿರ್ಲಕ್ಷ ಮಾಡಿದರೆ,ಕ್ರಮ.ಬಡವರಿಗೆ ಸಮಯ ನೀಡಬೇಕಿತ್ತು: ಶ್ರೀರಾಮುಲುಮಹಿಳಾ ಮೀಸಲು ಮಸೂದೆ ಸ್ವಾಗತಾರ್ಹ; ಆದರೆ ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ: ನಾರಾ ವೈಜಯಂತಿ ರೆಡ್ಡಿ ಅಂಬೇಡ್ಕರ್ ಜಯಂತಿ ಆಚರಣೆ.ಅಂಬೇಡ್ಕರ್ ಜಯಂತಿ ಆಚರಣೆ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.