10 ಸಾವಿರ sqf ಭೂಮಿ ದಾನ ಮಾಡಿದ ಕಾಂಗ್ರೆಸ್ ಮುಖಂಡ ಮುರಳಿ ಕೃಷ್ಣ.
ಬಳ್ಳಾರಿ (25 )ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ.ಕೆ.ಶಿವಕುಮಾರ ಅವರ ನಿರ್ದೇಶನದ ಮೇರೆಗೆ *ಕಾಂಗ್ರೆಸ್ ಭವನ ಟ್ರಸ್ಟ್* ನಿರ್ಮಾಣಕ್ಕಾಗಿ ಬಳ್ಳಾರಿ ನಗರ ಉಪ ನೋಂದಣಿ ಕಚೇರಿಯಲ್ಲಿ *ಕಾಂಗ್ರೆಸ್ ಭವನ ಟ್ರಸ್ಟ್* ನಿವೇಶನದ ನೋಂದಾವಣೆ ಮಾಡಲಾಯಿತು. ಸಂಗನಕಲ್ಲು ಗ್ರಾಮದ ಬೈಪಾಸ್ ಬಳಿ ಇರುವ ಸ್ಥಳ.
ಮಾಜಿ ಸಚಿವ ಗ್ರಾಮೀಣ ಶಾಸಕರು ಆಗಿರಿವ ನಾಗೇಂದ್ರ ಅಳಿಯ, ಮುರಳಿ ಕೃಷ್ಣ 10.ಸಾವಿರ sqf ದಾನಮಾಡಿದ್ದಾರೆ. ಸಿರಿಗುಪ್ಪ ಕ್ಷೇತ್ರ ಕ್ಕೆ ಪಕ್ಷದ ಪ್ರಬಲ ಅಭ್ಯರ್ಥಿ ಆಗಿದ್ದರು.
ಈ ಸಂದರ್ಭದಲ್ಲಿ *ಕಾಂಗ್ರೆಸ್ ಭವನ ಟ್ರಸ್ಟಿ* ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿಜಯ್ ಮುಳಗುಂದ್, ಕಾಂಗ್ರೆಸ್ ಭವನ ಟ್ರಸ್ಟ್ ಕಾರ್ಯದರ್ಶಿ ಎಲ್. ನಾರಾಯಣ್,ಬಳ್ಳಾರಿ ನಗರ ಶಾಸಕರು ನಾರಾ ಭಾರತ್ ರೆಡ್ಡಿ, ಬುಡಾ ಅಧ್ಯಕ್ಷರು ಜೆ,ಎಸ್ ಆಂಜನೇಯಲು,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು ಮುರಳಿ ಕೃಷ್ಣ,ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಅಲ್ಲಮ್ ಪ್ರಶಾಂತ್, ಬಳ್ಳಾರಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ಮಂಜುಳಾ, ಹಿರಿಯ ಮುಖಂಡರು, ಮಹಾನಗರ ಪಾಲಿಕೆ ಸದ್ಯಸರು, ಕಾರ್ಯಕರ್ತರು ಉಪಸ್ಥಿತರಿದ್ದರು