ಪಾಲಿಕೆಯ ಚುನಾವಣೆ ನ್ಯಾಯಾಲಯದ ಅಂಗಳದಲ್ಲಿ.!! ಬಳ್ಳಾರಿ(29) ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ ಎರಡು ಬಾರಿ ಮುಂದೂಡಿದ ಹಿನ್ನೆಲೆಯಲ್ಲಿ ಇಂಡಿಪೆಂಡೆಂಟ್ ಅಭ್ಯರ್ಥಿ ನಗರ ಶಾಸಕರ ಆಪ್ತ ಪಾಲಿಕೆ ಮೇಯರ್ ಆಗುವ ಕನಸನ್ನು ಕಟ್ಟಿಕೊಂಡ ಮಿಂಚು ಶ್ರೀನಿವಾಸ್ ಹೈಕೋರ್ಟ್ ಮೊರೆ ಹೋಗಿದ್ದು ತಡವಾಗಿ ಬಹಿರಂಗ ವಾಗಿದೆ.
ನ್ಯಾಯಾಲಯವು ಜನವರಿ 4 ರೊಳಗೆ ಪಾಲಿಕೆ ಚುನಾವಣೆ ಮುಂದೂಡಲ್ಪಟ್ಟ ಮಾಹಿತಿ ಯನ್ನು ತಿಳುಸುವಂತೆ,ರಾಜ್ಯದ ಸೆಕ್ರೆಟರಿ ,ಡಿ.ಸಿ ,ಆರ್,ಸಿ ಗೆ ಕಾರಣ ಕೇಳುವ ನೋಟೀಸ್ ನೀಡಿದ್ದು ಅಪಾರ ಜಿಲ್ಲಾಧಿಕಾರಿ ದೂರವಾಣಿ ಮೂಲಕ ತಿಳಿಸಿದ್ದಾರೆ,ನ್ಯಾಯಾಲಯಕ್ಕೆ ಉತ್ತರ ಕೊಡಲು ಸಿದ್ದತೆ ಮಾಡಿಕೊಳ್ಳಲಾಗುತ್ತದೆ ಎಂದು ನ್ಯೂಸ9 ಟುಡೇ ಗೆ ತಿಳಿಸಿದ್ದಾರೆ.
ಈಗಾಗಲೇ ಪಾಲಿಕೆ ಚುನಾವಣೆ ಯನ್ನು ಸಚಿವರ, ಶಾಸಕರ ನಡುವೆ ಪ್ರತಿಷ್ಠಿತ ಗೆ ತೆಗೆದುಕೊಂಡು ಹೋರಾಟ ಮಾಡುತ್ತ ಇದ್ದಾರೆ.
ಈಗಾಗಲೇ ಈಹಿಂದೆ ಕಾಂಗ್ರೆಸ್ ಹೈಕಮಾಂಡ್ ಕುಬೇರ ಅವರ ಗೆ ಮಾತು ಕೊಟ್ಟಿದ್ದು ಅದಕ್ಕೆ ಎಲ್ಲರು ಒಪ್ಪಂದ ಕೂಡ ಮಾಡಿಕೊಂಡಿದ್ದರು ಅನ್ನುವುದು ಕೇಳಿ ಬರುತ್ತಾ ಇದೆ.
ಇದರ ಮದ್ಯದಲ್ಲಿ ಮಿಂಚು ಶ್ರೀನಿವಾಸ್ (ಇಂಡಿಪೆಂಡೆಂಟ್ ಪ್ರಸ್ತುತ ಕಾಂಗ್ರೆಸ್ ಬೆಂಬಲ ಅಭ್ಯರ್ಥಿ) ಪ್ರವೇಶ ಮಾಡಿದ್ದಾರೆ,ಶಾಸಕರ ಬೆಂಬಲ ಇದೆ ಅನ್ನುವುದು ಕೇಳಿ ಬರುತ್ತಿದೆ.
ಉಸ್ತುವಾರಿ ಸಚಿವರ ಗಮನಕ್ಕೆ ಇಲ್ಲದೆ,ಒಮ್ಮತದ ಅಭಿಪ್ರಾಯ ಇಲ್ಲದೆ,ಕೇಲ ಪಾಲಿಕೆ ಸದಸ್ಯರು ಸೇರಿಕೊಂಡು, ಮಿಂಚು ಶ್ರೀ ನಿವಾಸ್ ಅವರನ್ನು ಮೇಯರ್ ಮಾಡಲು ಪ್ಲಾನ್ ಮಾಡಿದ್ದರು, ಇದಕ್ಕೆ ಬಿಜೆಪಿ ಸದಸ್ಯರು ಕೂಡ ಬೆಂಬಲ ನೀಡಲಾಗಿತ್ತು.
ಬೆಳಗಾವಿ ಯಲ್ಲಿ ಅಸೆಂಬ್ಲಿ ನಡೆಯುವ ಸಮಯದಲ್ಲಿ ಪಾಲಿಕೆ ಚುನಾವಣೆ ಕಥೆ ಆರಂಭವಾಗಿತ್ತು.
ಇದು ಸಚಿವರ ಗಮನಕ್ಕೆ ಬಂದಿರಬಹುದು,ತಕ್ಷಣವೇ ಚುನಾವಣೆ ಮುಂದೂಡಲಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿತ್ತು.
ಚುನಾವಣೆ ಅಧಿಕಾರಿ ಮೇಲೆ ಆರೋಪಗಳು ಕೂಡ ಕೇಳಿ ಬಂದಿದ್ದುವು.
ಒಂದು ಬಾರಿ ಆರ್. ಸಿ ಆರೋಗ್ಯ, ಮತ್ತೊಂದು ಬಾರಿ,NIA ವಿಚಾರ ನಿಮಿತ್ತ.ಇಂದು ಗುರುವಾರ ಪಾಲಿಕೆ ಸದಸ್ಯರನ್ನು ಹೈಕಮಾಂಡ್ ಬೆಂಗಳೂರು ಗೆ ಬರಲು ಸೂಚನೆ ಮಾಡಿದೆ ಎಂದು ತಿಳಿದು ಬಂದಿದೆ. ಬಳ್ಳಾರಿ ಪಾಲಿಕೆ ಚುನಾವಣೆ ಯಲ್ಲಿ ಸಚಿವರ ಗೌರವ ಪ್ರತಿಷ್ಠಿತೆ ಇದೆ. ಹೊಸದಾಗಿ ಆಯ್ಕೆ ಆಗಿರುವ ಶಾಸಕರು ಅಭಿವೃದ್ಧಿ ವಿಚಾರ ದಲ್ಲಿ ಸಚಿವರು ಪರವಾಗಿ ಇರಬೇಕು ಆಗಿದೆ,ಸಚಿವರು ದೊಡ್ಡ ಸ್ಥಾನ ದಲ್ಲಿ ಇರುವವರು, ಇಲ್ಲಿ ಶಾಸಕರ ಹಸ್ತಕ್ಷೇಪ ಮಾಡಲು ಅವಕಾಶ ಇಲ್ಲ ಅನ್ನುವುದು ಹಿರಿಯರ ಪಕ್ಷದ ಮುಖಂಡರ ಮಾತು ಆಗಿದೆ. ಇದನ್ನು ಹೊರತುಪಡಿಸಿ ಶಾಸಕರು ಮುಂದುವರೆದರೆ, ಮತ್ತೊಂದು ರೀತಿಯ ಸಂದೇಶ ಜನರ ಮದ್ಯದಲ್ಲಿ ಹೋಗುತ್ತದೆ ಅನ್ನುತ್ತಾರೆ, ಸಾರ್ವಜನಿಕರು. ಇಬ್ಬರ ಮದ್ಯದಲ್ಲಿ ಮತ್ತೊಂದು ಮಹಿಳೆಯನ್ನು ಮೇಯರ್ ಮಾಡುವ ಸಾಧ್ಯತೆ ಕಾಣುತ್ತದೆ. ಪಾಲಿಕೆ ಚುನಾವಣೆಯಲ್ಲಿ ಒಬ್ಬ ಪಾಲಿಕೆ ಸದಸ್ಯ ಇಲ್ಲ ಸಲ್ಲದ ರಾಜಕೀಯ ಮಾಡುತ್ತ ಇದ್ದಾರೆ ಅವರಿಂದ ಸಚಿವರು ಗೆ ತಲೆ ನೋವು ಅಗಿದೆ ಅವರ ಮೇಲೆ ಶಿಸ್ತು ಕ್ರಮವನ್ನು ಮಾಡುವ ಸಾಧ್ಯತೆ ಇದೆ ಎಂದು ಬಲ್ಲ ಮೂಲಗಳ ಮಾಹಿತಿ..!!??.
•ಕೇಲ ರಾಜಕಾರಣಿಗಳು.!! ಬಳ್ಳಾರಿ ರಾಜಕೀಯ ವನ್ನು ಕಡಿಮೆ ಅವದಿಯಲ್ಲಿ, ಸಿದ್ದಾಂತ ಗಳನ್ನು ದಾರಿ ತಪ್ಪಿಸಿ,ಬಂಡವಾಳ ವಾಗಿ ಪರಿವರ್ತನೆ ಮಾಡಿದ್ದಾರೆ ಅನ್ನುವ ಆರೋಪ ಕೇಳಿ ಬರುತ್ತಾ ಇದೆ ಸಾರ್ವಜನಿಕ ವಲಯದಲ್ಲಿ.