ಅವಹೇಳನ ಕಾರಿ ಭಾಷೆ ನಿಲ್ಲಿಸಿ ಜಿಲ್ಲಾ ವಾಲ್ಮೀಕಿ ಸಮುದಾಯ ಓತ್ತಾಯ.
ಬಳ್ಳಾರಿ (25)ವಾಲ್ಮೀಕಿ ಸಮಾಜದ ಹಿರಿಯ ನಾಯಕರು ಮಾನ್ಯ ಬಿ ಶ್ರೀರಾಮುಲು ರವರ ಕುರಿತು ಅವಹೇಳನಕಾರಿಯಾಗಿ ಮತ್ತು ಕೊಲೆ ಕೇಸ್ ನಲ್ಲಿ ಸಿಲುಕಿ ಕೊಂಡಿದ್ದ, ಹಾದಿ ಬೀದಿಯಲ್ಲಿ ತಿರುಗಾಡುತ್ತಿದ್ದ ರಾಮುಲು ರವರನ್ನು ನಾನು ಬೆಳೆಸಿದ್ದೇನೆಂದು...
ಕುಡುಗೋಲು, ಕೊಡಲಿ, ಕತ್ತಿ ಹಿಡುಕೊಂಡು ತಿರುಗಾಡುತ್ತಿದ್ದ ಎಂದು
ಅನೇಕ ರೀತಿಯಲ್ಲಿ ಅವರು ದಿನಾಂಕ 23/01/2025 ರಂದು ಪತ್ರಿಕಾಗೋಷ್ಠಿಯಲ್ಲಿ ಮಾನ್ಯ ಜನಾರ್ಧನ ರೆಡ್ಡಿ ಅವರು ಆಪಾದನೆ ಮಾಡಿರುವುದನ್ನು ಈ ಕುರಿತಾಗಿ ಅವರ ಹೇಳಿಕೆಯನ್ನು ಖಂಡ ತುಂಡವಾಗಿ ಖಂಡಿಸುತ್ತಿದ್ದೇವೆ. ವಿರೋಧಿಸುತ್ತಿದ್ದೇವೆ,ಎಂದು ವಾಲ್ಮೀಕಿ ಕೆಲ ಮುಖಂಡರು ನಗರದ ಕಾಸಿಗೆ ಹೋಟೆಲ್ ನಲ್ಲಿ ಪತ್ರಿಕಾ ಗೋಷ್ಠಿ ಮುಖಾಂತರ, ಒತ್ತಾಯ ಮಾಡಿದ್ದಾರೆ.
ಅಸಂಘಟಿತ ಸಮುದಾಯದ ಒಬ್ಬ ನಾಯಕನನ್ನ, ಅವರ ಬೆಳವಣಿಗೆಯನ್ನು, ವಾಲ್ಮೀಕಿ ಸಮುದಾಯದ ಮತ್ತು ಬಡಜನರ ಜೋಷಿತರ ಬಗ್ಗೆ ಕಾಳಜಿ ವಹಿಸಿದ ಹೋರಾಟಗಾರ ನಾಯಕನನ್ನು ಈ ರೀತಿ ಕೀಳಾಗಿ ಮಾತನಾಡುವುದು ಸರಿಯಲ್ಲ.
ಇದನ್ನು ನಮ್ಮ ಸಮಾಜ ಮತ್ತು ಕರ್ನಾಟಕ ರಾಜ್ಯದ ಜನರೆಲ್ಲರೂ ವಿರೋಧಿಸುತ್ತಿದ್ದೇವೆ.
ಶ್ರೀರಾಮುಲು ರವರನ್ನು ನಾನೇ ಬೆಳೆಸಿದ್ದೇನೆ ಎಂಬ ಮಾತನ್ನು ಖಂಡಿಸಿ ವಿರೋಧಿಸುತ್ತಿದ್ದೇವೆ..
ಪ್ರತಿಯೊಂದು ಸಮುದಾಯದವರ ಪ್ರೀತಿಗೆ ಪಾತ್ರರಾಗಿ, ಹಗಲಿರುಳು ಶ್ರಮಿಸಿ ರಾಜಕೀಯ ನೆಲೆಯನ್ನು ಕಂಡುಕೊಂಡು ರಾಜ್ಯಮಟ್ಟದ ನಾಯಕರಾಗಿ, ರಾಷ್ಟ್ರಮಟ್ಟದ ರಾಜಕಾರಣಿಗಳು ಗುರುತಿಸುವಂತಹ ವ್ಯಕ್ತಿತ್ವವನ್ನು ಶ್ರೀರಾಮುಲು ಅವರು ಬೆಳೆಸಿಕೊಂಡಿದ್ದಾರೆ.
ಅಂತಹ ವ್ಯಕ್ತಿ ನಮ್ಮ ವಾಲ್ಮೀಕಿ ಸಮುದಾಯದವರು ಎಂಬುದು ಹೆಮ್ಮೆಯ ವಿಷಯ. ನಮ್ಮ ಸಮುದಾಯ ಗರ್ವಿಸುತ್ತದೆ
ಸುದೀರ್ಭವಾದ ಅವರ ಜೀವನದಲ್ಲಿ ಒಳ್ಳೆಯ ಹೆಸರು ಗಳಿಸಲು ಅವರ ಶ್ರಮ ಅಪಾರವಾಗಿದೆ.
ಇತ್ತೀಚೆಗೆ ನಡೆದ ಸಂಡೂರು ವಿಧಾನಸಭಾ ಚುನಾವಣೆಯಲ್ಲಿ ಮಾನ್ಯ ಶ್ರೀರಾಮುಲು ರವರಿಂದ ನಮ್ಮ ಜನಾಂಗದ ಯುವ ನಾಯಕ ಬಂಗಾರು ಹನುಮಂತ ಸೋತಿದ್ದಾರೆ.. ಸೋಲಿಗೆ ರಾಮುಲುರವರೇ ಕಾರಣ ಎಂದು ನಮ್ಮ ಸಮುದಾಯದ ಮನೆ ಬಂಗಾರು ಹನುಮಂತ ರವರನ್ನು ಬಳಿಸಿಕೊಂಡು, ಸಮಾಜದ ಒಗ್ಗಟ್ಟನ್ನು ಹೊಡೆಯಲು ಪ್ರಯತ್ನ ಮಾಡಿರುವುದು ನಾವು ಖಂಡಿಸುತ್ತೇವೆ.
ಸಂಡೂರಿನಲ್ಲಿ ಬಂಗಾರ ಹನುಮಂತು ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಟಿಕೆಟ್ ಕೊಡಿಸಿದ್ದು ಮಾನ್ಯ ಜನಾರ್ಧನ್ ರೆಡ್ಡಿಯವರು. ...ಹಾಗಾದರೆ ಸೋಲಿಸಿದ್ದು ಜನಾರ್ಧನ ಆಗಿರುತ್ತದೆ.
ಸಂಡೂರು ಚುನಾವಣೆ ಉಸ್ತುವಾರಿ ತಾವು ವಹಿಸಿದ್ದು ಗೆಲ್ಲಿಸಿ ಕೊಂಡು ಬರುತ್ತೇನೆ ಎಂಬ ಮಾತು ನಿಮ್ಮದು.
ಈಗ ಶ್ರೀರಾಮುಲು ರವರ ಆಸೋಲಿಗೆ ಕಾರಣ ಎಂದು ಗೂಬೆ ಕೂರಿಸುತ್ತಿದ್ದೀರಿ.... ಏಕೆ.??
ಬಂಗಾರು ಹನುಮಂತ ರವರನ್ನು ಗೆಲ್ಲಿಸುವ ತಾಕತ್ತು ನಿಮಗೆ ಇಲ್ಲವಾಯಿತೇ...
ಬಂಗಾರು ಹನುಮಂತ ಅವರು ಸೋಲಿಯ ಕಾರಣ ನೀವೇ ಎಂಬುದು ಮನಗಾಣಲಿಲ್ಲವೇ...?
ಸಂಡೂರು ಭಾಗದ ಮತದಾರರು ಮಾನ್ಯ ಜನಾರ್ಧನ ರೆಡ್ಡಿ ಅವರಿಂದಲೇ ಮೈನಿಂಗ್ ಚಟುವಟಿಕೆ ನಿಂತು ಹೋಯಿತು.
ನಮ್ಮ ಉಪಜೀವನ ಹಾಳಾಯಿತು ಎಂದು ಅವರು ಬಿಜೆಪಿಗೆ ಮತ ಹಾಕಲಿಲ್ಲ ಎಂಬುದು ನಿಮಗೆ ಅರಿವು ಆಗಲಿಲ್ಲವೇ. ?ಮಾನ್ಯ ದಿವಾಕರ ರವರಿಗೆ ನೀವೇ ಟಿಕೆಟ್ ತಪ್ಪಿಸಿದ್ದು ಎಂಬುದು ನಿಮಗೆ ಅರಿವಿಲ್ಲವೇ...?
ಬಂಗಾರ ಹನುಮಂತ, ದಿವಾಕರ್, ಅರುಣ ಲಕ್ಷ್ಮಿ ಎಲ್ಲರೂ ಶಾಸಕರು ಆಗುತ್ತಾರೆ ಎಂದು ಒಂದು ಕಡೆ ನೀವೇ ಹೇಳಿಕೆ ಕೊಡುತ್ತಾ ಇದ್ದೀರಿ....
ಅಂದರೆ ರಾಜ್ಯದ ಮತದಾರರು ನಿಮ್ಮ ಜೋಲಿಯಲ್ಲಿ ಇದ್ದಾರೆಯೇ...?
ನೀವಿಬ್ಬರೂ ಒಂದಾಗಿ ಇದ್ದಾಗ ಒಳ್ಳೆಯ ಕೆಟ್ಟ ವಿಚಾರಗಳನ್ನ ನೀವುಗಳು ಸ್ನೇಹಿತರಾಗಿ ಹಂಚಿಕೊಂಡಿರುತ್ತೀರಿ ಆಗ ಅದರ ಲಾಭವನ್ನು ಪಡೆದಿರುವ ಬಹುದು.
ಈ ಸಂದರ್ಭದಲ್ಲಿ ಮಾನ್ಯ ಸೂರ್ಯನಾರಾಯಣ ರೆಡ್ಡಿಯವರ ಮತ್ತು ಮಾನ್ಯ ದಿವಾಕರ ಬಾಬು ರವರ ಹೆಸರು ಏಕೆ ತಂದಿದ್ದೀರಿ...
ಸೂರ್ಯನಾರಾಯಣ ರೆಡ್ಡಿಯವರು ಕೊಲೆ ಸುಪಾರಿ ಕೊಟ್ಟಿದ್ದಾರೆ ಎಂದು ಹೇಳಿಕೆ ನೀಡಿದ್ದೀರಿ ಅಂದರೆ ಅಂದು ನೀವು ದುಡ್ಡಿನ ನೋಟನ್ನು ಎಣಿಸಿಕೊಟ್ಟಿದ್ದೀರಾ....?
ಶ್ರೀರಾಮುಲು ರವರು ಮತ್ತು ಸೂರ್ಯನಾರಾಯಣ ರೆಡ್ಡಿ ಒಂದಾಗಿ ಬಿಟ್ಟರೆ ನನಗೆ ಸಮಸ್ಯೆ ಆಗುತ್ತದೆ ಎಂದು ನಿಮ್ಮ ಅಭಿಪ್ರಾಯವೇ... ನಿಮಗೆ ಭಯವೇ
ಶ್ರೀರಾಮುಲುವನ್ನ ರಾಜಕೀಯವಾಗಿ ತುಳಿಯಬೇಕೆಂಬ ಕೆಟ್ಟಚಟ ನಿಮಗೆ ಏಕೆ ಬಂತು.
ಕೊಲೆಗಡುಕ ಎನ್ನುವ ಮಾತು ಏಕೆ ಬಂತು? ಕೊಲೆ ಪ್ರಯತ್ನ ಮಾಡಿದ್ದಾನೆ ಏಕೆ ಬಂತು ಹಾಗಾದರೆ ನೀನು ಕೂಡ ಪಾಲ್ಗೊಂಡಿದ್ದೀರಾ ಕೃತ್ಯದಲ್ಲಿ ನೀವು ಪಾಲ್ಗೊಂಡಿರಿ ಎಂದು ಹೇಳಬಹುದೇ ಏಕೆಂದರೆ ನೀವು ಶ್ರೀರಾಮುಲು ಜೊತೆ ಸಾಗಿದಿರಲ್ಲ.
ಮಹಾನಗರ ಪಾಲಿಕೆ ಮಾಜಿ ಸದಸ್ಯ ಶ್ರೀಮತಿ ಪದ್ಮಾವತಿಯವರ ಕೊಲೆ ಪ್ರಕರಣ ಕೂಡ ಮತ್ತೊಮ್ಮೆ ತನಿಖೆ ಅಗಬೇಕು ಎನ್ನುವ ವಿಚಾರವನ್ನು ನಾವು ಮುಂದೆ ಇದ್ದೀವಿ.
ನಮ್ಮ ಸಮುದಾಯದ ಬಂಗಾರು ಹನುಮಂತನನನ್ನು ಕೂಡ ನೀವು ಬಲಿ ತೆಗೆದುಕೊಳ್ಳುವುದಕ್ಕೆ ಆಲೋಚನೆ ಮಾಡಿರಬಹುದು ನಮ್ಮ
ಸಮಾಜದ ಬಂಗಾರ ಹನುಮಂತ ರವರನ್ನು ನಾವು ಮತ್ತು ಜನರು ಸೇರಿ ಬೆಳೆಸುತ್ತೇವೆ.
ನಾಗೇಂದ್ರ ರವರನ್ನು ರಾಜಕೀಯವಾಗಿ ನಿರ್ನಾಮ ಮಾಡುತ್ತೇನೆ ಎಂದು... ನಿನ್ನನ್ನು ಟಿಶು ಪೇಪರ್ ನಂತೆ ಬಿಸಾಡುತ್ತೇವೆ ಎಂದು ಹೇಳಿದ್ರಿ.
ನಮ್ಮ ಸಮಾಜದ ವ್ಯಕ್ತಿಗಳನ್ನು ಟಿಶು ಪೇಪರ್ ನಂತೆ ಬಳಸಿಕೊಂಡು ಬಿಸಾಡುವುದು ನಿಮ್ಮ ವ್ಯಕ್ತಿತ್ವವೇ...
ಕೆ.ಸಿ.ಕೊಂಡಯ್ಯ ರವರನ್ನು ಅವರ ವಯಸ್ಸನ್ನು ಪ್ರಶ್ನೆ ಮಾಡಿದ್ದೀರಿ ಅವರು ಸಾಯಲಿಕ್ಕೆ ಹೊರಟಿದ್ದಾರೆ ಎಂದು ಹೇಳಿದ್ದೀರಿ ಮತ್ತು ಪಕ್ಕದ ರಾಜ್ಯದ ಮಾನ್ಯ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಿರುದ್ಧವು ಮಾತನಾಡಿದ್ದೀರಿ.
ಸತ್ತ ಹೆಣದ ಮೇಲೆ ಪೈಸೆಯನ್ನು, ನಾಣ್ಯವನ್ನು ಆಯ್ದುಕೊಳ್ಳುವವರು ಎಂದು ಹೇಳಿದ್ದೀರಿ... ಇದೇ ನಿಮ್ಮ ಸಂಸ್ಕೃತಿಯೇ, ರಾಜಕೀಯವಾಗಿ ಬೆಳೆಯುವ ನಿಮ್ಮ ಉದ್ದೇಶವಿದೆ ಎಂದರೆ ಇದು ಸರಿಯೇ??.
ಈ ರೀತಿ ವರ್ತನೆಯಿಂದ ನೀವು ರಾಜಕೀಯವಾಗಿ ಬೆಳೆಯಲು ಸಾಧ್ಯವೇ.. ?ನಮ್ಮ ವಾಲ್ಮೀಕಿ ಸಮಾಜ ಈ ಎಲ್ಲಾ ಜಾತಿಯ ಸಮುದಾಯದವರನ್ನು ವರನ್ನು ನಂಬಿಕೊಂಡಿದೆ ಅವರ ಜೊತೆ ನಾವು ಕೂಡಿಕೊಂಡು ರಾಜಕಾರಣ ಮಾಡುತ್ತಿದ್ದೇವೆ. ಸೂರ್ಯ ನಾರಾಯಣ ರೆಡ್ಡಿಯವರು, ಅಲ್ಲಂ ವೀರಭದ್ರಪ್ಪ ರವರು, ದಿವಾಕರ್ ಬಾಬು ರವರು,ಕೆ ಸಿ ಕೊಂಡಯ್ಯ ರವರು,ಅನಂದ ಸಿಂಗ್ ರವರು, ಬಿ ಎಂ ನಾಗರಾಜ್ ರವರು, ಗಣೇಶ ರವರು, ಸುರೇಶ್ ಬಾಬುರವರು, ತಾಯಣ್ಣನವರು, ನಾಗೇಂದ್ರರವರು, ನಾರಾ ಪ್ರತಾಪ್ ರೆಡ್ಡಿಯವರು ಎಲ್ಲರ ಜೊತೆನೂ ನಮ್ಮ ವಾಲ್ಮೀಕಿ ಸಮುದಾಯ ಇದೆ...
ಅವರು ಕೂಡ ನಮ್ಮ ಪರ ನಮ್ಮ ಸಮುದಾಯಕ್ಕೆ ಒಳಿತನ್ನು ಮಾಡಿದ್ದಾರೆ. ನೀವು ಏಕೆ ನಮ್ಮ ಸಮುದಾಯದ ಮೇಲೆ ನಮ್ಮ ಸಮುದಾಯದ ನಾಯಕನ ಮೇಲೆ ಕೀಳಾಗಿ ವರ್ತಿಸುತ್ತೀರಿ....?ನಮ್ಮ ಸಮಾಜ ಮತ್ತು ರಾಜ್ಯದ ಎಲ್ಲ ಸಮುದಾಯಗಳು, ಲಿಂಗಾಯತ ಸಮುದಾಯ, ರೆಡ್ಡಿ ಸಮುದಾಯ, ಕಮ್ಮ ಸಮುದಾಯ, ಹಾಲುಮತ ಸಮುದಾಯ, ಎಸ್ ಸಿ ಸಮುದಾಯ, ವೈಕ್ಯಾ ಸಮುದಾಯ ಎಲ್ಲರೂ ನಮ್ಮ ಶ್ರೀರಾಮುಲುರವರ ಜೊತೆ ಇದ್ದಾರೆ. ಅವರೆಲ್ಲರೂ ಶ್ರೀರಾಮುಲುವನ್ನು ಬೆಳೆಸಿದ್ದಾರೆ.
ಸ್ನೇಹಕ್ಕಾಗಿ ಸುಧೀರ್ಘ ಮೂರ್ನಾಲ್ಕು ದಶಕಗಳ ಕಾಲ ನಿಮ್ಮ ಜೊತೆ ಇದ್ದುದ್ದಕ್ಕಾಗಿ ನೀವು ರಾಮಲುವರಿಗೆ ಬಹಳ ದುಃಖವನ್ನು ಮಾಡಿದ್ದೀರಿ... ಅವರ ಮನಸ್ಸಿಗೆ, ಅವರ ವ್ಯಕ್ತಿತ್ವಕ್ಕೆ ಹಾನಿ ಮಾಡಿದ್ದೀರಿ...
ಇಂತಹ ಸಮಯದಲ್ಲಿ ನಾವು ಶ್ರೀರಾಮುಲು ಅವರ ಜೊತೆ ನಮ್ಮ ವಾಲ್ಮೀಕಿ ಸಮಾಜ ಮತ್ತು ಸರ್ವ ಸಮಾಜ ಜೊತೆಯಲ್ಲಿ ಇರುತ್ತೇವೆ.
ಈ ಸಂದರ್ಭದಲ್ಲಿ ಶಿವಾನಂದ, ಗಡ್ಡಮ್ ತಿಮ್ಮಪ್ಪ, ಹನುಮಂತ, ಗವಿಸಿದ್ದಪ್ಪ, ರೂಪನಗುಡಿ ಗೋವಿಂದಪ್ಪ, ಬಿ. ರುದ್ರಪ್ಪ, ವೀರೇಶ್ ರಾಣಿತೋಟ, ಬಾದಾಮಿ ಶಿವಲಿಂಗ, ಧನುನ್ಜಯ್ಯ, ಏನ್. ಸತ್ಯ ನಾರಾಯಣ ಹಾಗೂ ಮತ್ತಿತರರು ಉಪಸ್ಥಿತರಿದ್ದರು.