ಬಳ್ಳಾರಿ (21) ನಗರ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಿರಿಯ ಪವರ್ ಮ್ಯಾನ್ ಹಾಗೂ ಸಹಾಯಕ ಪವರ್ ಮ್ಯಾನ್ ಗಳಿಗೆ ಬಡ್ತಿಯಲ್ಲಿ ವಂಚನೆ.!!
ನಗರ ವಿಭಾಗ ಬಳ್ಳಾರಿಯಲ್ಲಿ ಅಧಿಕೃತ ಘಟಕ -1,2,3,4,5,6 ಶಾಖೆ ಗಳು ಕಾಲಕ್ಕೆ ತಕ್ಕಂತೆ,ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸಲು ಶಾಖಾಧಿಕಾರಿಗಳನ್ನು ಒಳಗೊಂಡಂತೆ ಘಟಕ 7,8,9,10ಗಳನ್ನು ಸೃಷ್ಟಿಸಿ ಇಲ್ಲಿಯವರೆಗೆ ಆಯಲ್ಲಾ ಶಾಖೆ ಗಳು ಕಾರ್ಯ ನಿರ್ವಹಿಸುತ್ತಿರುತ್ತವೆ.
ಆದರೇ ನಮ್ಮ ನಗರ ವಿಭಾಗ ದಲ್ಲಿ ಕಾರ್ಯ ಕಾರ್ಯನಿರ್ವಹಿಸುತ್ತಿರುವ ಕಿರಿಯ ಪವರ್ ಮ್ಯಾನ್, ಸಹಾಯಕ ಪವರ್ ಮ್ಯಾನ್, ಮೆಕಾನಿಕ್ ಹುದ್ದೆಗಳು ಈ ಹಿಂದೆ ಇದ್ದ ಅದೇ ಶಾಶ್ವತ ಶಾಖೆಗಳಿಗೆ ಇರುವ ಮಂಜೂರಾತಿ ಹುದ್ದೆಗಳು ಇಂದಿಗೂ ಅಷ್ಟೇ ಇದೆ.
ಇದರಿಂದ ನಮ್ಮ ನಗರ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಮ್ಮ ನೌಕರರಿಗೆ ಪದೊನ್ನತಿ ಎನ್ನುವುದು ಒಂದು ಮರೀಚಿಕೆಯಾಗಿದೆ.
ಕಂಪನಿ ಹಿತದೃಷ್ಟಿಯಿಂದ ನಮ್ಮ ನಗರ ವಿಭಾಗದಲ್ಲಿ ಕಂದಾಯ ವಸೂಲಾತಿ ಹಾಗೂ ವಿದ್ಯುತ್ ಮಾರ್ಗ ನಿರ್ವಹಣೆ, ಗ್ರಾಹಕರ ವಿದ್ಯುತ್ ಸಮಸ್ಯೆಗಳ ನಿರ್ವಹಣೆಯ ಹೊರೆಯು ನಮ್ಮ ಎಲ್ಲರ ಮೇಲೆ ಇದ್ದು ಅದನ್ನು ನಾವು ನಮ್ಮ ಜವಾಬ್ದಾರಿ ಎಂದು ಭಾವಿಸಿ, ಅಧಿಕ ಒತ್ತಡವಿದ್ದರೂ ಕಷ್ಟದ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವು ದು
ದಯಪರರಾದ ತಮಗೆ ತಿಳಿದ ವಿಷಯವಾಗಿದೆ.
ಇಂತಹ ಸಂದರ್ಭದಲ್ಲಿ ನಗರ ವಿಭಾಗದಲ್ಲಿ ಖಾಲಿಯಾಗುವ ಒಂದು ಎರಡು ಹುದ್ದೆಗಳಿಗೆ ಗ್ರಾಮೀಣ ವಿಭಾಗದಲ್ಲಿ ಲೆಕ್ಕಿಕರಿಸಿ ನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪವರ್ ಮ್ಯಾನ್ ಅನ್ನು ಪ್ರಸ್ತುತ ನಗರ ವಿಭಾಗದಲ್ಲಿ ಖಾಲಿ ಇರುವ ಹುದ್ದೆಗೆ ಭರ್ತಿ ಮಾಡಿಕೊಂಡಿರುವುದು ಖಂಡನೀಯವಾಗಿದ್ದು, ಇದರಿಂದ ನಗರ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಿರಿಯ ಪವರ್ ಮ್ಯಾನ್ ಸಹಾಯಕ ಪವರ್ ಮ್ಯಾನ್ ಗಳಿಗೆ ತುಂಬಲಾರದ ನಷ್ಟ ಆಗುತ್ತೆ.
ಈ ವಿಷಯವಾಗಿ ಲೆಕ್ಕಾಧಿಕಾರಿಗಳು ಜಗದೀಶ್ ಹತ್ತಿರ ನಮ್ಮ ಅಳಲನ್ನು ತೋಡಿಕೊಂಡರು ಯಾವುದೇ ಪ್ರಯೋಜನವಾಗಿರುವುದಿಲ್ಲ.
ಹಾರಿಕೆ ಉತ್ತರ ಕೊಟ್ಟು ವಂಚನೆ ಮಾಡುತ್ತಾ ಇದ್ದಾರೆ, ಹಣ ಕೊಟ್ಟರೆ ಏನಾದರು ಆಗುತ್ತೆ ಅನ್ನುವುದಕ್ಕೆ ಇದೇ ಸಾಕ್ಷಿ ಇರಬಹುದು ಎಂದು
ವಂಚಿತ ನೌಕರರು ಮನವಿ ಮಾಡಿಕೊಂಡಿದ್ದಾರೆ.
ನಗರ ವಿಭಾಗದಲ್ಲಿ ಖಾಲಿ ಇದ್ದ ಪವರ್ ಮ್ಯಾನ್ ಹುದ್ದೆಗೆ ಗ್ರಾಮೀಣ ವಿಭಾಗದಲ್ಲಿ ಲೆಕ್ಕಿ ಕರಿಸಿ ನಗರ ವಿಭಾಗದ ಘಟಕ-6 ರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಿ.ಗಾದೇಶ್ ಪವರ್ ಮ್ಯಾನ್ ಅವರನ್ನು ನಗರ ವಿಭಾಗಕ್ಕೆ ಸಕ್ರಿಯಗೊಳಿಸಿರುತ್ತಾರೆ,
ಆದಷ್ಟು ಬೇಗ ನೌಕರರ ಒಳಿತಿಗಾಗಿ ಸಕ್ರಿಯ ಗೊಳಿಸಿರುವ ಪವರ್ ಮ್ಯಾನ್ ಹುದ್ದೆಯನ್ನು ಹಿಂಪಡೆದು ನಗರ ವಿಭಾಗದಲ್ಲಿ ಕಳೆದ ಬಹು ವರ್ಷಗಳಿಂದ ಬಡ್ತಿ ಯಲ್ಲಿ ವಂಚನೆಗೊಂಡಿರುವ ಅರ್ಹ ನೌಕರರಿಗೆ ಮುಂಬಡ್ತಿ ನೀಡಬೇಕೆಂದು, ಮನವಿಪತ್ರ ಮೂಲಕ ಒತ್ತಾಯ ಮಾಡಿದ್ದಾರೆ.
ಒಂದು ವೇಳೆ ನಮ್ಮ ನ್ಯಾಯ ಯುತವಾದ ಈ ಬೇಡಿಕೆಯನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ನಾವೆಲ್ಲರೂ ನಮಗಾದ ಅನ್ಯಾಯದ ಗುರುತಾಗಿ ಹಾಗೂ ನ್ಯಾಯಕ್ಕಾಗಿ ಕಪ್ಪು ಪಟ್ಟಿಯನ್ನು ಧರಿಸಿ ನಮಗೆ ನ್ಯಾಯ ಸಿಗುವವರೆಗೂ ನಮ್ಮ ನ್ಯಾಯ ಯುತವಾದ ಹೋರಾಟವನ್ನು ಮಾಡುತ್ತೇವೆ ಎಂದು ಮನವಿ ಮಾಡಿದ್ದಾರೆ.
ವಂಚಿತ ನೌಕರರು ಮುಖ್ಯ ಕಾರ್ಯ ನಿರ್ವಾಹಕ ಅಭಿಯತ್ರರರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.