*ಜನಾರ್ಧನ್ ರೆಡ್ಡಿ ಅವರ ಸಂಪತ್ತು ವಾಪಸ್ ಕೊಡಿ, ವಾಲ್ಮೀಕಿ ಜಾತಿಯ ಗೌರವ ಉಳಿಸಿ,ಜಾತಿ ರಾಜಕಾರಣ ಮಾಡಬೇಡಿ.ಇದು ಸಲ್ಲದು,ರೆಡ್ಡಿ ಆಪ್ತರ ಖಡಕ್ ಸಂದೇಶ.!!*
ಬಳ್ಳಾರಿ (25)ರಾಜಕೀಯ ಅಂತರ್ ಮದನ ದಲ್ಲಿ ನಡೆದ ವಿಚಾರ ವನ್ನು ಬೀದಿಯಲ್ಲಿ ಇಟ್ಟು ರಾಜಕೀಯ ಮಾಡಿದ್ದೂ ಶ್ರೀ ರಾಮುಲು ಎಂದು ಜಗತ್ ಜಾಹಿರಾತು ಆಗಿದೆ. ಅದೇ ಮೀಟಿಂಗ್ ನಲ್ಲಿ ಸಿಟಿ ರವಿ ಸೇರಿಕೊಂಡು ಇನ್ನೂ ಮುಂತಾದ ನಾಯಕರು ಗೆ ಪಕ್ಷ ಅಭಿವೃದ್ಧಿ ವಿಚಾರ ದಲ್ಲಿ ತುಂಬಾ ಕೆಲಸ ಮಾಡಬೇಕು ಅನ್ನವದು, ಹೇಳಲಾಗಿತ್ಹು, ಅದೇ ವಿಚಾರ ದಲ್ಲಿ ದಹಿಲಿ ನಾಯಕರು ಜನಾರ್ಧನ್ ರೆಡ್ಡಿ ಗೆ ಕೂಡ ಸಂಡೂರ್ ವಿಚಾರ ಕೇಳಲಾಗೆದೆ, ಅವರು ಪಕ್ಷದಲ್ಲಿ ಯಲ್ಲರು ಸರಿಯಾಗಿ ಕೆಲಸ ಮಾಡಿಲ್ಲ ಅನ್ನವದು, ಶ್ರೀ ರಾಮುಲು ಕೂಡ ನಿರ್ಲಕ್ಷ ಮಾಡಿದ್ದಾರೆ ಅನ್ನವದು ನಡೆದಿದೆ, ಅದನ್ನು ಶ್ರೀ ರಾಮುಲು ಬಹಿರಂಗ ವೇದಿಕೆ ಮಾಡುವ ಅವಶ್ಯಕತೆ ಇರಲ್ಲಿಲ ಎಂದು ಜನಾರ್ಧನ್ ರೆಡ್ಡಿ ವಾದ ಆಗಿತ್ತು.ಇದು ತಾರಕ್ಕೆ ಹೋಗಿದೆ. ಅಷ್ಟರಲ್ಲಿ ಪಕ್ಷ ಬದಲಾವಣೆ ಮುಂತಾದ, ವಿದ್ಯಾಮಾನಗಳು ಒಬ್ಬರು ಮೇಲೆ ಒಬ್ಬರು ಆರೋಪ ಗಳು ಗೆ ನಿಂತು ಬಿಟ್ಟರು. ಶ್ರೀರಾಮಲು ಪ್ಲಾನ್ ಪ್ರಕಾರ ಇದನ್ನು ಜಾತಿ ರಾಜಕಾರಣ ಮಾಡಲು ಆರಂಭ ಮಾಡಿದ್ದಾರೇ ಎಂದು ರೆಡ್ಡಿ ಆರೋಪ. ಈಗಾಗಲೇ ಕೆಲ ತಿಂಗಳಗಳು ದಿಂದ ಕೆಲ ಆಸ್ತಿ ವಿಚಾರ ಗಳು ಗಲಾಟೆ ಗಳು ಇಬ್ಬರ ಮಧ್ಯ ಹುಟ್ಟು ಕೊಂಡಿವೆ ಎಂದು ಬಹಿರಂಗ ವಾಗಿ ಜನರು ಮಾತನಾಡುತ ಇದ್ದರು.ಅಂದಹಾಗೆ ಅಸಲಿ ಕಥೆ ಹೊರೆ ಬಂತು. ಈ ಹಿನ್ನಲೆ ರಾಮುಲು ಪರವಾಗಿ ಕೆಲ ಹೊಸ, ಕೆಲ ಹಳೆ ಸಮಾಜದ ಮುಖಂಡರು, ಪ್ರೆಸ್ ಮೀಟ್ ಮಾಡಿ ದೂರು ಕೊಡುವ ವರೆಗೆ ಹೊಗೆದ್ದು ಅಚ್ಚರಿ ಮೂಡಿಸಿದೆ. ಅಲ್ಲಿಗೆ ಸರಿಪಡಿಸಲು ಹೋಗದೆ,ಉತ್ಸಹ ಮಾಡಿದ್ದರೆ. ಇದು ರೆಡ್ಡಿ ಗೆ ಕಾಸಿಬಿಸಿ ಮಾಡಿದೆ, ರೆಡ್ಡಿ ರಾಮುಲು ದಿಂದ ಬೆಳಿದಿದ್ದಾರೆ ಎಂದು ಹೇಳಿದ್ದು ಅಚ್ಚರಿ ಆಕ್ರೋಶ ಮಾಡಿದೆ ರೆಡ್ಡಿಗೆ. ಸಮಾಜದ ಮುಖಂಡರು ಮಾಧ್ಯಮ ಗಳು ಮುಂದೆ ಅಕ್ಷರಸ ಸುಳ್ಳು ಹೇಳಿದ್ದರೆ.ಇದನ್ನು ರೆಡ್ಡಿ ಯ ಆಪ್ತರು,ಮತ್ತು ರಾಮುಲು ಸಮುದಾಯದ ಸಂಬಂಧಿಗಳು ನೇರವಾಗಿ ಪತ್ರಿಕಾ ಗೋಷ್ಠಿ ಮಾಡಿ, ರಾಮುಲು ಗೆ ಖಡಕ್ ಸಂದೇಶ ರವನೆ ಮಾಡಿದ್ದರೆ. ಜಾತಿ ರಾಜಕಾರಣ ಬೇಡ, ರೆಡ್ಡಿ ಸಂಪತ್ತು ವಾಪಸ್ ಕೊಡಿ, ವಾಲ್ಮೀಕಿ ಸಮುದಾಯದ ಗೌರವ ಹುಳಿಸಿ. ರೆಡ್ಡಿ ವಾಲ್ಮೀಕಿ ಸಮುದಾಯ ಕ್ಕೆ ಸಾಕಷ್ಟು ಕೊಡಿಗೆ,ಸೇವೆ, ತುಂಬಾ ಎತ್ತುರ ಮಟ್ಟದಲ್ಲಿ ಬೆಳಿಸಿದ್ದಾರೆ ಎಂದು ಗೋಷ್ಠಿ ಯಲ್ಲಿ ಸಂದೇಶ ರವನೆ ಮಾಡಿದ್ದರೆ.
ಹೋಟೆಲ್ ನಲ್ಲಿ ಮಾಜಿ ಸಚಿವರು ಹಾಗೂ ಗಂಗಾವತಿಯ ಶಾಸಕರಾದ ಸನ್ಮಾನ್ಯ ಗಾಲಿ ಜನಾರ್ದನ ರೆಡ್ಡಿ ಅವರನ್ನು ಅವಹೇಳನ ಮಾಡಿದ ಶ್ರೀರಾಮುಲು ಹೇಳಿಕೆಯನ್ನು ಖಂಡಿಸಿ ಸುದ್ದಿಗೋಷ್ಠಿಯನ್ನು ಆಯೋಜಿಸಲಾಗಿತ್ತು.
ಗಾಲಿ ಜನಾರ್ದನ ರೆಡ್ಡಿ ಯವರ ಆಪ್ತ ಬೆಂಬಲಿಗ ದರಪ್ಪ ನಾಯಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಜನಪ್ರಿಯ ಶಾಸಕ ಜಾತ್ಯತೀತ ನಾಯಕರಾದ ಗಲಿ ಜನಾರ್ದನ್ ರೆಡ್ಡಿ ಅವರು ಯಾವುದೇ ಒಂದು ಜಾತಿಗೆ ಸೀಮಿತವಲ್ಲ ಎನ್ನುವುದಕ್ಕೆ ನಮ್ಮ ವೇದಿಕೆ ಸಾಕ್ಷಿ, ನಮ್ಮ ಈ ಸುದ್ದಿಗೋಷ್ಠಿಯ ವೇದಿಕೆಯಲ್ಲಿ ಅನೇಕ ಜಾತಿಯ ಮುಖಂಡರು ಉಪಸ್ಥಿತರಿದ್ದು, ಕಳೆದ ಬಾರಿ ಸಂಡೂರು ಉಪಚುನಾವಣೆ ಫಲಿತಾಂಶದ ಬಗ್ಗೆ, ಕೋರಕಮಟಿ ಸಭೆಯಲ್ಲಿನ ಸದಸ್ಯರು ಸೋಲಿನ ಬಗ್ಗೆ ಚರ್ಚಿಸಬೇಕಾದ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ಸಾಸ್ ಅಗರ್ವಾಲ್ ರವರು ಸಂಡೂರು ಸೋಲಿನ ಹೊಣೆಗಾರಿಕೆಯ ಬಗ್ಗೆ ಮಾತನಾಡಿದಾಗ ಗೌರವಾನ್ವಿತ ಮಾಜಿ ಸಚಿವರಾದ ಶ್ರೀರಾಮುಲು ಸರ್ ರವರು ತಕ್ಷಣದ ಅವರ ಹೇಳಿಕೆಗೆ ಪ್ರತ್ಯುತ್ತರವಾಗಿ ಗೌರವಾನ್ವಿತ ಜನಾರ್ದನ ರೆಡ್ಡಿ ಅವರ ಹೇಳಿಕೆಯಿಂದ ನೀವುಗಳು ನನ್ನ ಮೇಲೆ ಆಪಾದನೆ ಮಾಡುತ್ತಿದ್ದೀರ ಎಂದು ಹೇಳಿದ್ದು ನಾವುಗಳೆಲ್ಲ ದೃಶ್ಯ ಮಾಧ್ಯಮ ಹಾಗೂ ಮುದ್ರಣ ಮಾಧ್ಯಮದಲ್ಲಿ ಕೇಳಿದ್ದು, ಓದಿ ತಿಳಿದುಕೊಂಡಿದ್ದೇವೆ, ಮಾಜಿ ಸಚಿವರು ಹಾಗೂ ಗಂಗಾವತಿಯ ಜನಪ್ರಿಯ ಶಾಸಕರಾದ ಜನಾರ್ಧನ್ ರೆಡ್ಡಿ ಅವರು ಸಂಡೂರು ಉಪಚುನಾವಣೆಯಲ್ಲಿ ಶ್ರೀರಾಮುಲು ಹಾಗೂ ನಾವು ಜವಾಬ್ದಾರಿ ವಹಿಸಿಕೊಂಡು ಚುನಾವಣೆ ಚೆನ್ನಾಗಿ ಮಾಡಿದ್ದೇವೆ. ಅದರೆ ಮಾನ್ಯ ಮುಖ್ಯಮಂತ್ರಿಗಳು ಮೂರು ದಿನ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಚುನಾವಣೆ ಪ್ರಚಾರ ಮಾಡಿದರಿಂದ ಈ ಚುನಾವಣೆಯಲ್ಲಿ ಸೋಲಬೇಕಾಯಿತು ಎಂದು ಹೇಳಿದ್ದಾರೆ ಇದನ್ನು ಬೇರೆ ರೂಪದಲ್ಲಿ ಅರ್ಥ ಮಾಡಿಕೊಂಡ ಶ್ರೀರಾಮುಲು ಏನೇನೊ ಮಾತಾಡ್ತಾ ಇದ್ದಾರೆ, ಇದನ್ನು ಕೂಡಲೇ ನಿಲ್ಲಿಸಿ, ರಾಜಕೀಯ ವಿಷಯವನ್ನು ಜಾತಿ ವಿಷಯವನ್ನಾಗಿ ಮಾಡಿ ನಮ್ಮ ವಾಲ್ಮೀಕಿ ಸಮುದಾಯ ಬಂಧುಗಳಿಂದ ಈ ದಿನ ಜನಾರ್ದನ ರೆಡ್ಡಿ ಅವರ ವಿರುದ್ಧವಾಗಿ ನಮ್ಮನ್ನು ಎತ್ತಿ ಕಟ್ಟಿಲು ಸಮುದಾಯದಿಂದ ಪತ್ರಿಕಾಗೋಷ್ಠಿ ಮಾಡುತ್ತಿದ್ದಾರೆ ಇದನ್ನೆಲ್ಲಾ ಕೂಡಲೇ ನಿಲ್ಲಿಸ ಬೇಕೆಂದರು.
ಗಾಲಿ ಜನಾರ್ಧನ್ ಅವರು 2004 ರಲ್ಲಿ ಸಿರುಗುಪ್ಪ ದಲ್ಲಿ ಎಸ್ ಟಿ ಮೀಸಲಾತಿ ಇಲ್ಲದಿದ್ದರೂ ನಮ್ಮ ವಾಲ್ಮೀಕಿ ಸಮುದಾಯದ ಸೋಮಲಿಂಗಪ್ಪ ಅವರನ್ನು ಕಣಕ್ಕೆ ಇಳಿಸಿ ಗೆಲ್ಲಿಸಿದ್ದಾರೆ ಎನ್ನುವುದು ಗೊತ್ತಿದೆ ಆದುದರಿಂದ ಜಾತ್ಯಾತೀತ ನಾಯಕನ ಬೆನ್ನಿಗೆ ನಾವೆಲ್ಲ ನಿಂತಿದ್ದೇವೆ ಎಂದು ಹೇಳಿದರು.
ನಾನು ಒಬ್ಬ ವಾಲ್ಮೀಕಿ ಸಮುದಾಯದವನಾಗಿ ಜನಾರ್ದನ್ ರೆಡ್ಡಿ ಅವರನ್ನು ನೋಡಿದಾಗ ನಮ್ಮ
ಜಿಲ್ಲೆಯಲ್ಲಿ ನಮ್ಮ ಕರ್ನಾಟಕ ರಾಜ್ಯಾದ್ಯಂತ ಸಮುದಾಯದ ಯುವ ಮುಖಂಡರು ರಾಜ್ಯಮಟ್ಟದ ನಾಯಕರುಗಳಾಗಿ ಬೆಳೆಸಿದನ್ನು ನಾವು ನೋಡಿದ್ದೇವೇ ಸಾಮಾನ್ಯವಾಗಿ ನಗರಸಭೆ ಸದಸ್ಯರು ಜಿಲ್ಲಾ ಪಂಚಾಯತ್ ಸದಸ್ಯರು ಪಟ್ಟಣ ಪಂಚಾಯಿತಿ ಸದಸ್ಯರು ಶಾಸಕರು ಎಂಎಲ್‌ಎ,ಎಂಪಿ ಸಚಿವರಾಗಿ ಮಾಡಿರುವುದನ್ನು ನಾವು ನೋಡಿದ್ದೇವೆ ಎಂದು ದರಪ್ಪ ನಾಯಕ ಮಾತನಾಡಿದರು.
ನಮ್ಮ ವಾಲ್ಮೀಕಿ ಸಮುದಾಯದ ಗೌರವ ಘನತೆ ಮರ್ಯಾದೆ ಉಳಿಸಬೇಕಾದರೆ ದಯಮಾಡಿ ಜಾತಿ
ರಾಜಕಾರಣವನ್ನು ಮಾಡುವುದು ಬಿಟ್ಟು ರಾಜಕೀಯದಲ್ಲಿ ಗೆಲ್ಲಬೇಕಾದರೆ ಎಲ್ಲಾ ಸಮುದಾಯದವರ ಆಶೀರ್ವಾದ ಬೇಕಾಗುತ್ತದೆ.
ಆದ್ದರಿಂದ ಶ್ರೀರಾಮುಲು ರವರೇ ಜನಾರ್ದನರೆಡ್ಡಿ ಅವರು ತಮ್ಮೆಲ್ಲರಿಗೆ ಇಷ್ಟೆಲ್ಲ ಪದವಿಗಳನ್ನು ದೊರಕಿಸಿ ಕೊಟ್ಟಿದ್ದಾಗ ತಾವುಗಳು ದಯಮಾಡಿ ಜಾತಿ ರಾಜಕಾರಣ ಮಾಡದೆ ತುಂಬಾ ಸಂದಿಗ್ನ ಸಂಕಷ್ಟ ಪರಿಸ್ಥಿತಿಯಲ್ಲಿ ಅವರ ಆಸ್ತಿಗಳನ್ನು ಹಿಂದಿರುಗಿಸಿ ವಾಲ್ಮೀಕಿ ಸಮುದಾಯದ ಗೌರವ ಘನತೆ ಕಾಪಾಡಬೇಕಾಗಿ ನುಡಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಅಲ್ಪಸಂಖ್ಯಾತರ ಮುಖಂಡರು ಮುನ್ನಭಾಯ್, ವಾಲ್ಮೀಕಿ ಮುಖಂಡ ಉಮಾರಾಜ್, ಹುಂಡೇಕರ್ ರಾಜೇಶ್, ಅಸುಂಡಿ ಸೂರಿ, ಕೊಳಗಲ್ ಅಂಜಿನಿ, ಉಪ್ಪಾರ್ ಹನುಮೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.