JDS.ಮಾಜಿ ಮುಖ್ಯಮಂತ್ರಿ ಗಳು 10.ರಂದು ಬಳ್ಳಾರಿ ಜಿಲ್ಲೆಗೆ
*ಜನತಾದಳ ನಗರ ಅಭ್ಯರ್ಥಿ ಇತರೆ ಪಕ್ಷಗಳ ಜೊತೆಯಲ್ಲಿ ಹೊಂದಾಣಿಕೆ ಇಲ್ಲ*
ಬಳ್ಳಾರಿ(7) ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಜನತಾದಳ ಮುಖಂಡರು ಹೆಚ್.ಡಿ.ಕುಮಾರ್ ಸ್ವಾಮಿ ಇದೇ ತಿಂಗಳು 10.ಬಳ್ಳಾರಿ ನಗರಕ್ಕೆ ಮತ್ತು ಕಂಪ್ಲಿ ತಾಲ್ಲೂಕಿನ ಕುರುಗೊಡು ಗೆ ಬರಲಿದ್ದಾರೆ.
ಬಳ್ಳಾರಿ ಯಲ್ಲಿ10 ರಂದು ಸಾಯಂಕಾಲ 2.ರಿಂದ3ಗಂಟೆ ಸಮಯದಲ್ಲಿ ಗುಗ್ಗಿರಹಟ್ಟಿ ಪ್ರದೇಶದಲ್ಲಿ, ಸಾಯಂಕಾಲ5 .ಗಂಟೆಗೆ ಕುರುಗೊಡು ಬಹಿರಂಗ ಸಭೆ ಯಲ್ಲಿ ಪಾಲ್ಗೊಳ್ಳುತ್ತಾರೆ ಏಂದು ಪಕ್ಷದ ಕಚೇರಿ ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಅಧ್ಯಕ್ಷ ಸೋಮನ ಗೌಡ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಬಳ್ಳಾರಿ ನಗರದ ಅಭ್ಯರ್ಥಿ ಮುನ್ನಾಭಾಯಿ ಇತರೆ ಪಕ್ಷದ ಯೊಂದಿಗೆ ಒಪ್ಪಂದ ಮಾಡಿಕೊಂಡು ಒಂದು ಸಮಾಜದ ಮತಗಳನ್ನು ಸೆಳೆಯುವ ತಂತ್ರಗಾರಿಕೆಯನ್ನು ಮಾಡಿಕೊಂಡು,ಜನತಾದಳ ಗೆ ನಗರದಲ್ಲಿ ಶಕ್ತಿ ಇಲ್ಲದಿದ್ದರೂ ಕೂಡ ಒಪ್ಪಂದದಿಂದ ಅಭ್ಯರ್ಥಿ ಯಾಗಿದ್ದಾರೆ ಅನ್ನುವ ಮಾತುಗಳು ಕೇಳಿ ಬಂದಿವೆ ಅನ್ನುವ ಪ್ರಶ್ನೆ ಗೆ,ಉತ್ತರ ಕೊಟ್ಟ ಮೀನ ಹಳ್ಳಿ ತಾಯಣ್ಣJDS ಪಕ್ಷ ಇತರೆ ಪಕ್ಷದ ಅವರ ಹೊಂದಿಗೆ ಯಾವುದೇ ಹೊಂದಾಣಿಕೆ ಮಾಡಿಕೊಂಡ ಇಲ್ಲ ಏಂದರು.
ಈಗಾಗಲೇ ನಗರ ಅಭ್ಯರ್ಥಿ ಒಂದು ನೂತನ ಪಕ್ಷದ ಜೋತಯಲ್ಲಿ ಸಂಪರ್ಕ ಮಾಡಿದ್ದು,ಏನಾದರೂ ಮಾಡಿ ಕಾಂಗ್ರೆಸ್ ಮತಗಳುಗೆ ಕನ್ನಹಾಕಿ ಎಷ್ಟು ಸಾಧ್ಯವಾದರೆ ಅಷ್ಟು ಮತಗಳು ಕಿತ್ತುಕೊಂಡು ಬನ್ನಿ ಅನ್ನುವ ಸಂದೇಶ, ನೀಡಿದ್ದಾರೆ ಏಂದು ಅದಕ್ಕೆ ನಮ್ಮ ಸಹಕಾರ ಇರುತ್ತದೆ ಏಂದು ಮಾತುಕತೆ ನಡೆದಿದೆ ಅನ್ನುವ ಗುಸು ಗುಸು ಕೇಳಿಬರುತ್ತದೆ.
ಗೆಲ್ಲುವ ಕ್ಷೇತ್ರಗಳಲ್ಲಿ JDS ಗಟ್ಟಿ ಫೈಟ್ ಮಾಡಲು ಹೆಚ್ಚು ಕಡಿಮೆ ಇದೇ.
ಅಂತಹ ಸಂದರ್ಭದಲ್ಲಿ ಹೈ ವೊಲ್ಟೇಜ್ ಕ್ಷೇತ್ರದಲ್ಲಿ ಕುಮಾರ್ ಸ್ವಾಮಿ ಅಭ್ಯರ್ಥಿ ಯನ್ನು ಕಣಕ್ಕೆ ಇಳಿಸಲು ಸಾಧ್ಯವಿಲ್ಲ.
ಪ್ರಸ್ತುತ ಮುನ್ನಾ ಭಾಯ್ ಹಿಂದೆ ಮತ್ತೊಂದು ಭಡಾಬಾಯ್ ಸೂತ್ರ ಇದೇ ಏಂದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತದೆ.(ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ ಚೀಫ್ ಬ್ಯೂರೋ.)