ಜಿಂಕಲ ವೆಂಕಟೇಶ ನಿಧನ ರಾಗಿದ್ದಾರೆ. ಬಳ್ಳಾರಿ24) ಲೋಕೋಪಯೋಗಿ ಇಲಾಖೆಯಲ್ಲಿ(pwd) ಇಂಜಿನಿಯರ್ ಅಗಿ ಸೇವೆ ಸಲ್ಲಿಸಿ ಎರಡು ವರ್ಷಗಳ ಹಿಂದೆ ನಿವೃತ್ತಿ ಹೊಂದಿದ್ದ ಜಿಂಕಲ ವೆಂಕಟೇಶ(62) ಶುಕ್ರವಾರ ಬೆಳಿಗಿನಜಾವ ನಿಧನ ರಾಗಿದ್ದಾರೆ. ಮನೆಯಲ್ಲಿ ಬಾತ್ ರೂಂ ಯಲ್ಲಿ ಕಾಲು ಜಾರಿದ್ದು ತಕ್ಷಣವೇ ಆಸ್ಪತ್ರೆ ಗೆ ದಾಖಲೆ ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿ ಆಗಿಲ್ಲ. ತಾಳುರು ರಸ್ತೆ ಗಂಗೋತ್ರಿ ಶಾಲೆ ಹತ್ತಿರ ಇರುವ ಅವರ ಮನೆಯಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕ ವಾಗಿ ನೀಡಲಾಗಿದೆ. ನಾಳೆ ಆಂಧ್ರಪ್ರದೇಶದ ಗುಂತಕಲ್ಲ್ ನಲ್ಲಿ ಮಣ್ಣು ಮಾಡಲಾಗುತ್ತದೆ ಎಂದು ಸಂಬಂದಿ ಗಳು ಮೂಲಕ ತಿಳಿದು ಬಂದಿದೆ. ವೃತ್ತಿ ಯಲ್ಲಿ ಇರುವ ಸಮಯದಲ್ಲಿ ಸಾರ್ವಜನಿಕ ವಾಗಿ,ಸಹಪಾಠಿಗಳು ಜೊತೆಯಲ್ಲಿ ನಗು ನಗುತ್ತಾ ಇರುವ ಉತ್ತಮ ಗುಣಗಳನ್ನು ಹೊಂದಿರುವ ದೊಡ್ಡ ವ್ಯಕ್ತಿ ಎಂದರು ತಪ್ಪು ಅಗೆದು. ಲೋಕೋಪಯೋಗಿ ಇಲಾಖೆಯಲ್ಲಿ ಹಲವಾರು ಕಡೆಗೆ ಸೇವೆ ಸಲ್ಲಿಸಿದ್ದಾರೆ. ಮೂರು ಮಕ್ಕಳ ಕುಟುಂಬದ ಜೊತೆಯಲ್ಲಿ ಇದ್ದರು. ಸಾದಾರಣ ವಾಗಿ ಜಿಂಕಲ ವೆಂಕಟೇಶ ಏಂದು ಸರ್ಕಾರದ ಉದ್ಯೋಗಿ ಅನ್ನುವ ಅಹಂಕಾರ ತೋರಿಸಲಿಲ್ಲ.ವೃತ್ತಿ ಯಲ್ಲಿ ತುಂಬಾ ಪ್ರಮಾಣಿಕ ವಾಗಿ ಇರುವ ಅಧಿಕಾರಿಗಳು ಆಗಿದ್ದರು. ಲೋಕೋಪಯೋಗಿ ಇಲಾಖೆಯಲ್ಲಿ ಬಹುತೇಕ ಇಂಜಿನಿಯರ್ ಗಳು ಸಾರ್ವಜನಿಕ ಸಂಪರ್ಕ ದಲ್ಲಿ ವಿಭಿನ್ನ ರೀತಿಯಲ್ಲಿ ಇರುತ್ತಾರೆ ಕೆಲವರು ಜನರ ಜೊತೆಯಲ್ಲಿ ಉತ್ತಮ ಸಂಬಂಧ ಗಳನ್ನು ಹೊಂದಿರುತ್ತಾರೆ. ವೆಂಕಟೇಶ ಅವರು ಕೂಡ ಉತ್ತಮ ಸಂಬಂದ ಗಳು ಹೊಂದಿರುವ ವ್ಯಕ್ತಿ.(ಕೆ.ಬಜಾರಪ್ಪ ವರದಿಗಾರರು ಕಲ್ಯಾಣ.)