Web Stories
News 9 Today
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಾಣೆಯಾದವರ ಪತ್ತೆಯಲ್ಲಿ ಸಾಧನೆ: ಪೊಲೀಸ್ ಸಿಬ್ಬಂದಿಗೆ ಪ್ರಶಂಸನಾ ಪತ್ರ

ಕಾಣೆಯಾದವರ ಪತ್ತೆಯಲ್ಲಿ ಸಾಧನೆ: ಪೊಲೀಸ್ ಸಿಬ್ಬಂದಿಗೆ ಪ್ರಶಂಸನಾ ಪತ್ರ
ಬಳ್ಳಾರಿ, ಮಾ.6: ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕಾಣೆಯಾದವರ ಪ್ರಕರಣಗಳನ್ನು ಯಶಸ್ವಿಯಾಗಿ ಪತ್ತೆಹಚ್ಚಿದ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿ ಗೋಣೆಪ್ಪ ಬಣಕಾರ್ ಅವರಿಗೆ ಪೊಲೀಸ್ ಮಹಾ ನಿರೀಕ್ಷಕರು ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ.
2025ನೇ ಸಾಲಿನಲ್ಲಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಒಟ್ಟು 57 ಕಾಣೆಯಾದವರ ಪ್ರಕರಣಗಳಲ್ಲಿ ಸಂಬಂಧಿಕರಿಂದ ಮಾಹಿತಿ ಸಂಗ್ರಹಿಸಿ, ಕಾಣೆಯಾದವರ ಮೊಬೈಲ್ ಸಂಖ್ಯೆ, ಐಪಿ ಅಡ್ರಸ್, ವಾಟ್ಸಾಪ್, ಫೇಸ್‌ಬುಕ್, ಟ್ವಿಟರ್ ಸೇರಿದಂತೆ ಇಂಟರ್‌ನೆಟ್ ಬ್ರೌಸಿಂಗ್ ಮತ್ತು ಇತರ ಆಧುನಿಕ ತಂತ್ರಾಂಶಗಳ ನೆರವಿನಿಂದ ಪರಿಶೀಲನೆ ನಡೆಸಿ 55 ಪ್ರಕರಣಗಳನ್ನು ಚಾಣಾಕ್ಷತನದಿಂದ ಪತ್ತೆಹಚ್ಚುವಲ್ಲಿ ಗೋಣೆಪ್ಪ ಬಣಕಾರ್ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
ಅವರ ಕರ್ತವ್ಯನಿಷ್ಠೆ, ಪ್ರಾಮಾಣಿಕತೆ ಹಾಗೂ ಶ್ರದ್ದೆಯ ಸೇವೆಯನ್ನು ಮೆಚ್ಚಿ ಬಳ್ಳಾರಿ ವಲಯದ ಪೊಲೀಸ್ ಮಹಾ ನಿರೀಕ್ಷಕರಾದ ಡಾ. ಪಿ.ಎಸ್. ಹರ್ಷ, ಐಪಿಎಸ್ ಅವರು ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದ್ದಾರೆ.
ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಕರ್ತವ್ಯನಿಷ್ಠೆಯೊಂದಿಗೆ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಅವರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

Author
News 9 Today
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಚೇರಿ ಗಳು ವೀಕ್ಷಣೆ ಮಾಡಿದ, ಜಿಲ್ಲಾಧಿಕಾರಿ. ಬೇಸಿಗೆ,ಸಂದರ್ಭದಲ್ಲಿ ಜನರು ಕಚೇರಿಗಳು ಸುತ್ತ ಬಾರದು, ನಿರ್ಲಕ್ಷ ಮಾಡಿದರೆ,ಕ್ರಮ.ಬಡವರಿಗೆ ಸಮಯ ನೀಡಬೇಕಿತ್ತು: ಶ್ರೀರಾಮುಲುಮಹಿಳಾ ಮೀಸಲು ಮಸೂದೆ ಸ್ವಾಗತಾರ್ಹ; ಆದರೆ ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ: ನಾರಾ ವೈಜಯಂತಿ ರೆಡ್ಡಿ ಅಂಬೇಡ್ಕರ್ ಜಯಂತಿ ಆಚರಣೆ.ಅಂಬೇಡ್ಕರ್ ಜಯಂತಿ ಆಚರಣೆ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.