457.59 ಲಕ್ಷ ಅನುದಾನದ ಬಜೆಟ್ ಮಂಡಿಸಿದ ಮೇಯರ್ ಗಾದೆಪ್ಪ
ಬಳ್ಳಾರಿ:ಫೆ,23; ಪಾಲಿಕೆಯ ಬಜೆಟ್ ನಲ್ಲಿ ವಿವಿಧ ಮಹನೀಯರ ಜಯಂತಿಗಳಿಗೆ ಸಹಾಯಧನ ತಲಾ ರೂ 50,000/- ಗಳಂತೆ ಒಟ್ಟು ರೂ. 12.00 ಲಕ್ಷಗಳ ಅನುದಾನ,
ಮಕ್ಕಳ ಪ್ರತಿಭಾ ಕಾರಂಜಿಗೆ ಸರ್ಕಾರಿ ಶಾಲೆಗಳಲ್ಲಿ ಆಯೋಜಿಸಲಾಗುವ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳಿಗೆ ರೂ. 5.00 ಲಕ್ಷಗಳ ಅನುದಾನ,
ಮಾಧ್ಯಮ ಪ್ರತಿನಿಧಿಗಳಿಗೆ ಯೋಗಕ್ಷೇಮ ನಿಧಿಯಡಿ ಪಾಲಿಕೆಯ ವ್ಯಾಪ್ತಿಯಡಿ
ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವ ನೋಂದಾಯಿತ ಮಾಧ್ಯಮ ಪ್ರತಿನಿಧಿಗಳ ಆರೋಗ್ಯದ ಚಿಕಿತ್ಸೆಗೆ ಅಗತ್ಯ ನೆರವು ಕಲ್ಪಿಸುವುದಕ್ಕೆ ರೂ. 25.00 ಲಕ್ಷಗಳ ಅನುದಾನ,
ಮಹಾನಗರ ಪಾಲಿಕೆಯ ಚುನಾಯಿತ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿಯಡಿ, ಪಾಲಿಕೆಯ ವ್ಯಾಪ್ತಿಯಲ್ಲಿರುವ 39 ವಾರ್ಡ್‌ಗಳ ಸದಸ್ಯರಿಗೆ ಕುಡಿಯುವ ನೀರಿನ ತುರ್ತು ಸಂದರ್ಭಗಳಿಗೆ ರೂ. 3.00 ಲಕ್ಷಗಳಂತೆ ಒಟ್ಟು ರೂ. 20.00 ಲಕ್ಷಗಳ ಅನುದಾನ,
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಂತಿಕೆಯ ರೂಪದಲ್ಲಿ ಬಳ್ಳಾರಿ ನಗರದಲ್ಲಿ ಜರಗಲಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪಾಲಿಕೆ ವಂತಿಕೆಯಾಗಿ ರೂ. 100.00 ಲಕ್ಷಗಳ ಅನುದಾನ,
ಬಳ್ಳಾರಿ ನಗರದಲ್ಲಿ ಜರಗಲಿರುವ ಉತ್ಸವ ಕಾರ್ಯಕ್ರಮಕ್ಕೆ ಪಾಲಿಕೆ ವಂತಿಕೆಯಾಗಿ ರೂ. 200.00 ಲಕ್ಷಗಳ ಅನುದಾನ, ಪಾಲಿಕೆಯ ನೌಕರರ ಸಂಘದ ಭವನ ನಿರ್ವಹಣೆಕ್ಕೆ ರೂ. 25.00 ಲಕ್ಷಗಳ ಅನುದಾನ,
ಬೀದಿ ನಾಯಿಗಳ ಆಶ್ರಯತಾಣ ನಿರ್ಮಾಣಕ್ಕೆ ಪಾಲಿಕೆಯ ವ್ಯಾಪ್ತಿಯ ಆಲದಹಳ್ಳಿ
ಗ್ರಾಮದಲ್ಲಿ ಬೀದಿ ನಾಯಿಗಳ ಆಶ್ರಯ ತಾಣ ನಿರ್ಮಾಣಕ್ಕಾಗಿ 15ನೇ ಹಣಕಾಸು ಯೋಜನೆಯಡಿಯಲ್ಲಿ ರೂ. 155.00 ಲಕ್ಷಗಳ ಅನುದಾನ,
ಬಿಡಾಡಿ ದನಗಳನ್ನು ಸ್ಥಳಾಂತರಿಸಲು ಮಹಾನಗರ ಪಾಲಿಕೆಯ ವಿವಿಧ ವಾರ್ಡ್‌ಗಳಲ್ಲಿರುವ ಬಿಡಾಡಿ ದನಗಳನ್ನು ಗೋಶಾಲೆಗಳಿಗೆ ಸ್ಥಳಾಂತರಿಸಲು ರೂ. 15.00 ಲಕ್ಷಗಳ ಅನುದಾನ,
ಉದ್ಯಾನವನಗಳ ನಿರ್ಮಾಣ ಮತ್ತು ಅಭಿವೃದ್ಧಿಗೆ ರೂ. 25.00 ಲಕ್ಷಗಳ ಅನುದಾನ,
ಯು.ಜಿ.ಡಿ ಬಳಕೆದಾರರ ಶುಲ್ಕದ ಸಂಗ್ರಹಣೆ ಹೆಚ್ಚಿಸಲು ಹಾಗೂ ಪಾಲಿಕೆಯ ಆದಾಯದ ಮೂಲವನ್ನು ದ್ವಿಗುಣಗೊಳಿಸಲು ಅಮೃತ ಮಿತ್ರ ಯೋಜನೆಯಡಿ ಸ್ವಸಹಾಯ ಗುರಿ ಆಧಾರದ ಮೇಲೆ ನೇಮಿಸಿಕೊಂಡು ರೂ. 358.00 ಲಕ್ಷಗಳ ಗುರಿಯನ್ನು ಮುಟ್ಟಲು ಯೋಜಿಸಲಾಗಿದೆ.
ಡೊನ್‌ಗಳ ಮೂಲಕ ಆಸ್ತಿ ಸರ್ವೇ:
ಪ್ರಾಥಮಿಕ ಹಂತವಾಗಿ ಮಹಾನಗರ ಪಾಲಿಕೆಯ ವಲಯ-01 ರಡಿ ಬರುವ ಎಲ್ಲಾ ಆಸ್ತಿಗಳ ನಿಖರವಾದ ಮಾಹಿತಿ ಪಡೆಯಲು, ಕೆ.ಎಂ.ಎಫ್-24 ತಂತ್ರಾಂಶದಲ್ಲಿ ಮಾಹಿತಿಯನ್ನು ಜಿ.ಪಿ.ಎಸ್ ಛಾಯಾ ಚಿತ್ರದೊಂದಿಗೆ ಇಂದೀಕರಿಸಲು, ಭೌತಿಕ ಆಸ್ತಿಗಳ ನಿಖರವಾದ ಮಾಹಿತಿ ಪಡೆಯಲು ಡೊನ್ ಸರ್ವೇ ಕೈಗೊಳ್ಳಲು ರೂ. 150.00 ಲಕ್ಷಗಳ ಅನುದಾನ,
ರಸ್ತೆ ಮತ್ತು ಚರಂಡಿಗಳ ಅಭಿವೃದ್ಧಿ ಕಾಮಗಾರಿಗಳ ನಿರ್ವಹಣೆ ಹಾಗೂ ದುರಸ್ಥಿಗಾಗಿ:
> ಮಹಾನಗರ ಪಾಲಿಕೆಯ ವ್ಯಾಪ್ತಿಯ ರಸ್ತೆಗಳನ್ನು ಗುಂಡಿ ಮುಕ್ತವಾಗಿರಿಸಲು ತುರ್ತಾಗಿ ಬಳಸಿಕೊಳ್ಳಲು ಒಟ್ಟು ರೂ.50.00 ಲಕ್ಷಗಳನ್ನು ಸಾಮಾನ್ಯ ನಿಧಿಯಲ್ಲಿ ಕಾಯ್ದಿರಿಸಲಾಗಿದೆ. ಈ ಯೋಜನೆಯಿಂದ ಬಳ್ಳಾರಿ ಜನತೆಗೆ ಗುಂಡಿ ಮುಕ್ತ ರಸ್ತೆಗಳನ್ನು ಅಭಿವೃದ್ಧಿಪಡಿಸುವುದರಿಂದ ಸುಗಮ ಸಂಚಾರಕ್ಕೆ ಅನುಕೂಲವಾಗುವುದು.
> ನಗರದಲ್ಲಿ ರಸ್ತೆ ನಿರ್ಮಾಣ, ಪಾದಚಾರಿ ರಸ್ತೆ ಅಭಿವೃದ್ಧಿಗಾಗಿ ರೂ. 75.00 ಲಕ್ಷಗಳ ಕಾಯ್ದಿರಿಸಲಾಗಿದೆ. ಮುಂದುವರೆದು, ಈಗಾಗಲೇ ಅನುಮೋದನೆಗೊಂಡ ರಸ್ತೆ ಕಾಮಗಾರಿಗಳನ್ನು ಸಹ ಆದ್ಯತೆಯಲ್ಲಿ ಮುಕ್ತಾಯಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
> ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆ ಬದಿ ಚರಂಡಿಗಳ ದುರಸ್ಥಿ, ನಿರ್ವಹಣೆಗೆ ಮತ್ತು ಅಭಿವೃದ್ಧಿಪಡಿಸಲು ಒಟ್ಟು ರೂ. 50.00 ಲಕ್ಷಗಳನ್ನು ಕಾಯ್ದಿರಿಸಲಾಗಿದೆ.
ಪೌರ ಕಾರ್ಮಿಕರಿಗೆ ಉದ್ದೇಶಿಸಲಾಗಿರುವ ಕಾರ್ಯಕ್ರಮಗಳು:
> ಪಾಲಿಕೆಯ ಪೌರ ಕಾರ್ಮಿಕರು ಡ್ರೈವರ್ಸ್ ಮತ್ತು ಕ್ಲೀನರ್, ನೀರು ಸರಬರಾಜು ಹಾಗೂ UGD ಸಿಬ್ಬಂದಿಗಳಿಗೆ ಬೆಳಗಿನ ಉಪಹಾರಕ್ಕಾಗಿ ರೂ.150.00 ಲಕ್ಷಗಳನ್ನು ಕಾಯ್ದಿರಿಸಲಾಗಿದೆ. ಇದರಿಂದ ಸ್ವಚ್ಛತೆ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಗೆ ಹೆಚ್ಚಿನ ಅನುಕೂಲವಾಗುತ್ತದೆ.
> ಪಾಲಿಕೆಯ ಪೌರ ಕಾರ್ಮಿಕರ ಸುರಕ್ಷಾ ಸಾಧನಗಳ, ಆರೋಗ್ಯ ತಪಾಸಣೆ ಇತರೆ ಸಲಕರಣೆಗಳಿಗಾಗಿ ರೂ. 80.00 ಲಕ್ಷಗಳನ್ನು ಕಾಯ್ದಿರಿಸಲಾಗಿದೆ. ಇದರಿಂದ ಪೌರ ಕಾರ್ಮಿಕರ ಆರೋಗ್ಯ ಭದ್ರತೆಯನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ.
> ರಜಾ ದಿನಗಳಲ್ಲಿಯೂ ಸಹ ಕಾರ್ಯನಿರ್ವಹಿಸುವಂತಹ ಪೌರ ಕಾರ್ಮಿಕರಿಗೆ 21 ದಿನಗಳ ವಿಶೇಷ ರಜಾ ವೇತನಕ್ಕೆ ಒಟ್ಟು ರೂ.150.00 ಲಕ್ಷಗಳನ್ನು ಕಾಯ್ದಿರಿಸಲಾಗಿದೆ. ಇದರಿಂದ ಪೌರ ಕಾರ್ಮಿಕರಿಗೆ ಹೆಚ್ಚುವರಿಯಾಗಿ ಆರ್ಥಿಕವಾಗಿ ಲಾಭವಾಗುತ್ತದೆ.
ತುರ್ತು ಸಂಧರ್ಭಗಳಿಗಾಗಿ ಮೀಸಲಿಟ್ಟ ಅನುದಾನ:
> ಪಾಲಿಕೆಯ ವ್ಯಾಪ್ತಿಯಲ್ಲಿ ಯಾವುದೇ ಪ್ರಕೃತಿ ವಿಕೋಪಗಳಾದ ಅಗ್ನಿ ಮತ್ತು ಮಳೆ ಹಾನಿ ಸಂಧರ್ಭಗಳಲ್ಲಿ ಭಾಧಿತರಿಗೆ ಪರಿಹಾರವನ್ನು ನೀಡಲು ಒಟ್ಟು ರೂ. 25.00 ಲಕ್ಷಗಳನ್ನು ಕಾಯ್ದಿರಿಸಲಾಗಿದೆ. ಇದರಿಂದ ಭಾಧಿತರಿಗೆ ಪಾಲಿಕೆ ವತಿಯಿಂದ ತಕ್ಷಣ ಸಹಾಯವನ್ನು ನೀಡುವುದರಿಂದ ಭಾಧಿತರಿಗೆ ಸಹಕಾರಿಯಾಗಲಿದೆ.
> ಅತಿವೃಷ್ಟಿ ಸಂಧರ್ಭಗಳಲ್ಲಿ ತುರ್ತಾಗಿ ಕೈಗೊಳ್ಳಬಹುದಾದಂತಹ ಪಾದಚಾರಿ ರಸ್ತೆಗಳ ಹಾಗೂ ಇತರೆ ರಸ್ತೆಗಳ ದುರಸ್ಥಿಗಳ ಕಾಮಗಾರಿಗಳಿಗೆ ಒಟ್ಟು ರೂ. 25.00 ಲಕ್ಷಗಳನ್ನು ಕಾಯ್ದಿರಿಸಲಾಗಿದೆ.
ನೀರು ಸರಬರಾಜು ಮತ್ತು ಒಳಚರಂಡಿ ಸಂಪರ್ಕಗಳ ವ್ಯವಸ್ಥೆ:
ಪಾಲಿಕೆಯ ವತಿಯಿಂದ ನೀರು ಸರಬರಾಜಿಗೆ ಬಳಕೆ ಮಾಡುತ್ತಿರುವ ಓ.ಹೆಚ್.ಟಿ ಟ್ಯಾಂಕ್‌ಗಳ ನಿರ್ವಹಣೆಗಾಗಿ ರೂ. 25.00 ಲಕ್ಷಗಳನ್ನು ಕಾಯ್ದಿರಿಸಲಾಗಿದೆ. ಇದರಿಂದ ಸುಗಮ ನೀರು ಸರಬರಾಜನ್ನು ಅಡಚರಣೆಯಿಲ್ಲದೇ ಮಾಡುವುದಕ್ಕೆ ಸಾಧ್ಯವಾಗಲಿದೆ.
> ಜನರಿಗೆ ಕುಡಿಯುವ ನೀರು ಸರಬರಾಜು ಮಾಡುವ ನೀರಿನ ಶುದ್ದೀಕರಣ ಹಾಗೂ ಗುಣಮಟ್ಟವನ್ನು ಕಾಯ್ದಿರಿಸಿಕೊಳ್ಳಲು ಅವಶ್ಯಕತೆಯಿರುವ ಕೆಮಿಕಲ್ಸ್‌ಗಾಗಿ ರೂ. 100.00 ಲಕ್ಷಗಳನ್ನು ಕಾಯ್ದಿರಿಸಲಾಗಿದೆ. ಇದರಿಂದ ನಗರದ ಜನತೆಗೆ ಗುಣಮಟ್ಟ ನೀರು ಸರಬರಾಜು ಮಾಡಲು ಸಾಧ್ಯವಾಗಲಿದೆ.
> ನಗರದಲ್ಲಿ ಇರುವ ಬೋರ್‌ವೆಲ್‌ಗಳನ್ನು ಪುನಶ್ಚತನ ಮಾಡಲು ಮತ್ತು ದುರಸ್ಥಿಗಾಗಿ ರೂ. 28.00 ಲಕ್ಷಗಳನ್ನು ಕಾಯ್ದಿರಿಸಲಾಗಿದೆ. ಈ ಯೋಜನೆಯಿಂದ ಮುಂದಿನ ದಿನಗಳಲ್ಲಿ ಜನತೆಗೆ ನೀರಿನ ಲಭ್ಯತೆಯನ್ನು ಹೆಚ್ಚಿಸಲು ಸಾಧ್ಯವಾಗಲಿದೆ.
ಕುಡಿಯುವ ನೀರಿನ ಸರಬರಾಜಿಗಾಗಿ ನೂತನ ಪೈಪ್‌ಲೈನ್ ಅಳವಡಿಕೆಗೆ ರೂ. 50.00 ಲಕ್ಷಗಳನ್ನು ನಿಗದಿಪಡಿಸಲಾಗಿದೆ ಹಾಗೂ ಪ್ರಸ್ತುತ ಇರುವ ಆರ್.ಓ ಪ್ಲಾಂಟ್‌ಗಳ ನಿರ್ವಹಣೆ ಮತ್ತು ದುರಸ್ಥಿಗಾಗಿ ರೂ. 20.00 ಲಕ್ಷಗಳನ್ನು ಕಾಯ್ದಿರಿಸಲಾಗಿದೆ.
ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ:
ಮಹಾನಗರ ಪಾಲಿಕೆಯ ಸಿಬ್ಬಂದಿ / ನೌಕರರ / ಚುನಾಯಿತ ಪ್ರತಿನಿಧಿಗಳಿಗೆ ಕ್ರೀಡೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರೋತ್ಸಾಹಕ್ಕಾಗಿ ರೂ.25.00 ಲಕ್ಷಗಳನ್ನು ಮೀಸಲಿಡಲಾಗಿದೆ. ಈ ಅನುದಾನದಡಿ ಬೇಸಿಗೆ ಕ್ರೀಡಾಕೂಟವನ್ನು ಆಯೋಜಿಸಲಾಗುವುದು.
ಶೌಚಾಲಯಗಳ ನಿರ್ವಹಣೆ:
ನಗರದಲ್ಲಿ ಸಾರ್ವಜನಿಕರ ಬಳಕೆಗಾಗಿ ಇರುವ ಶೌಚಾಲಯಗಳ ದುರಸ್ಥಿ ಕೈಗೊಂಡು ಮತ್ತು ನಿರ್ವಹಣೆಗೆ ಸ್ವ-ಸಹಾಯ ಗುಂಪುಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಸದಲ ನಿರ್ವಹಣೆಗೆ ಒಟ್ಟು ರೂ.50.00 ಲಕ್ಷಗಳ ಅನುದಾನವನ್ನು ಕಾಯ್ದಿರಿಸಲಾಗಿದೆ.
ಸ್ಮಶಾನಗಳ ಅಭಿವೃದ್ಧಿ:
ಸ್ಮಶಾನಗಳ ಅಭಿವೃದ್ಧಿಗಾಗಿ ಕಾಯ್ದಿರಿಸಿದ ಜಾಗದಲ್ಲಿ ಮೂಲ-ಸೌಕರ್ಯಗಳೊಂದಿಗೆ ಅಭಿವೃದ್ಧಿ ಪಡಿಸಲು ಪ್ರಸ್ತುತ ಸಾಲಿನಲ್ಲಿ ಸುಮಾರು ರೂ.100.00 ಲಕ್ಷಗಳ ಅನುದಾನವನ್ನು ಕಾಯ್ದಿರಿಸಲಾಗಿದೆ.
ಸಾರ್ವಜನಿಕರಿಗೆ ಅನುಕೂಲವಾಗುವಂತೆ ಶವಗಳ ಅಂತ್ಯಕ್ರಿಯೆ ಮಾಡಲು ಅನಿಲ ಚಿತಾಗಾರವನ್ನು ನಿರ್ಮಿಸಲು ಸುಮಾರು ರೂ. 400.00 ಲಕ್ಷಗಳ ಯು.ಐ.ಡಿ.ಎಫ್.ಸಿ. ಅನುದಾನದಲ್ಲಿ ಕಾಯ್ದಿರಿಸಲಾಗಿದೆ.
ಪುನರ್ವಸತಿ ಕೇಂದ್ರಗಳ ನಿರ್ವಹಣೆ:
2025-26ನೇ ಸಾಲಿಗೆ ಪುನರ್ವಸತಿ ಕೇಂದ್ರಗಳ ನಿರ್ವಹಣೆಗೆ ರೂ. 38.00 ಲಕ್ಷಗಳ ಅನುದಾನವನ್ನು ಮೀಸಲಿಟ್ಟಿದೆ.
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಕಲ್ಯಾಣಕ್ಕಾಗಿ, ವಿಕಲಚೇತನರ ಇತರೆ ಬಡಜನರ ಯೋಜನೆ:
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಕಲ್ಯಾಣಕ್ಕಾಗಿ, ವಿಕಲಚೇತನರ, ನಗರ ಇತರೆ ಬಡಜನರ ಯೋಜನೆಗಾಗಿ ತರಬೇತಿ, ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಣೆ, ಲ್ಯಾಪ್ ಟ್ಯಾಪ್ ವಿತರಣೆ, ಚರಂಡಿ ನಿರ್ಮಾಣ, ರಸ್ತೆ ನಿರ್ಮಾಣ, ನೀರಿನ ವ್ಯವಸ್ಥೆ, ಶೌಚಾಲಯಗಳ ನಿರ್ಮಾಣ, ಇತರೆ ಅಭಿವೃದ್ಧಿ ಕಾರ್ಯಗಳಿಗಾಗಿ 2026-27ನೇ ಸಾಲಿಗೆ ರೂ.242.05 ಲಕ್ಷಗಳನ್ನು ಕಾಯ್ದಿರಿಸಲಾಗಿದೆ.
ಪಾಲಿಕೆಯ ವತಿಯಿಂದ ಉದ್ದೇಶಿಸಲಾಗಿರುವ ಹೊಸ ಯೋಜನೆಗಳು:
ಪಾಲಿಕೆಯ ವ್ಯಾಪ್ತಿಯಲ್ಲಿ ಇರುವಂತಹ ಪ್ರಮುಖ ರಸ್ತೆಗಳಿಗೆ ಹಾಗೂ ಉಪ-ರಸ್ತೆಗಳಿಗೆ ನಾಮಫಲಕಗಳನ್ನು ಅಳವಡಿಸಲು ರೂ. 25.00 ಲಕ್ಷಗಳನ್ನು ಕಾಯ್ದಿರಿಸಲಾಗಿದೆ. ಈ ಯೋಜನೆಯಿಂದ ನಗರದ ಜನತೆಯ ಮಾಹಿತಿಗಾಗಿ ಹಾಗೂ ಸಂಚಾರಕ್ಕೆ ಅನುಕೂಲವಾಗಲಿದೆ.
2028-27 ನೇ ಸಾಲಿನಲ್ಲಿ ಬಳ್ಳಾರಿ ನಗರದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಂಡು ಸರ್ವತೋಮುಖ ಅಭಿವೃದ್ಧಿ ಸಾಧಿಸಲು ರಾಜ್ಯ ಮತ್ತು ಕೇಂದ್ರ ಅನುದಾನಗಳಾದ ಎಸ್.ಎಫ್.ಸಿ. ಯೋಜನೆಯಲ್ಲಿ ರೂ. 365.00 ಲಕ್ಷಗಳನ್ನು ಕಾಯ್ದಿರಿಸಲಾಗಿದೆ. ಮತ್ತು 16ನೇ ಹಣಕಾಸು ಯೋಜನೆಯಡಿಯಲ್ಲಿ ರೂ. 22.00 ಕೋಟಿಗಳ ಅನುದಾನವನ್ನು, ಅಮೃತ್ 2.0 ರಲ್ಲಿ ರೂ. 8.93 ಕೋಟಿಗಳಷ್ಟು ಅನುದಾನವನ್ನು ನಿರೀಕ್ಷಿಸಲಾಗಿದೆ.
ಒಟ್ಟಾರೆಯಾಗಿ 2028-27 ನೇ ಸಾಲಿಗೆ ರೂ.457.59 ಲಕ್ಷಗಳ ಕೊರತೆ ಆಯ-ವ್ಯಯ ಬಜೆಟ್ ಅನ್ನು ಪಾಲಿಕೆಯ ಮೇಯರ್ ಮಂಡಿಸಿದರು.