ಪೆಹಲಗಾಮ್ ವಿಧ್ವಂಸಕ ಕೃತ್ಯ; ಉಗ್ರವಾದಿಗಳಿಗೆ ಕಂಡಲ್ಲೇ ಗುಂಡು ಹಾಕಬೇಕು: ಶಾಸಕ ನಾರಾ ಭರತ್ ರೆಡ್ಡಿ
ಬಳ್ಳಾರಿ, ಏ.25: ಜಮ್ಮು ಕಾಶ್ಮೀರದ ಪೆಹಲಗಾಮ್'ಗೆ ಪ್ರವಾಸಕ್ಕೆ ತೆರಳಿದ್ದ ಭಾರತೀಯರ ಮೇಲೆ ಅಮಾನುಷ ದಾಳಿ ಮಾಡಿ ಹತ್ಯೆಗೈದ ಉಗ್ರವಾದಿಗಳು ಎಲ್ಲಿ ಕಾಣುತ್ತಾರೋ ಅಲ್ಲೇ ಗುಂಡು ಹೊಡೆಯುವ ಮೂಲಕ ಶಿಕ್ಷೆ ನೀಡಬೇಕೆಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಪೆಹಲಗಾಮಿನ ಉಗ್ರರ ದಾಳಿಯಲ್ಲಿ ಹತರಾದವರ ಆತ್ಮಕ್ಕೆ ಶಾಂತಿ ಕೋರಿ, ಉಗ್ರವಾದ ವಿರೋಧಿಸಿ - ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಸಮಿತಿ (ನಗರ) ವತಿಯಿಂದ ಮಹಾತ್ಮ ಗಾಂಧಿಯವರ ಪುತ್ಥಳಿಯಿಂದ ಗಡಿಗಿ ಚೆನ್ನಪ್ಪ ವೃತ್ತದವರೆಗೆ ಏರ್ಪಡಿಸಿದ್ದ ಆತ್ಮಜ್ಯೋತಿ ಮೆರಣಿಗೆಗೆ ಚಾಲನೆ ನೀಡಿ ಮಾತನಾಡಿದರು.
ಪ್ರವಾಸಕ್ಕೆ ತೆರಳಿದ್ದವರು ಕುಟುಂಬಸ್ಥರು, ಯುವಕರು, ಮವ ವಿವಾಹಿತರು, ಅವರು ತಮ್ಮ ಬದುಕಿನ ಸುಂದರ ಕ್ಷಣ ಕಟ್ಟಿಕೊಳ್ಳುವ ಸಂದರ್ಭದಲ್ಲಿ ಅವರನ್ನು ಹತ್ಯೆಗೈದ ಉಗ್ರರ ಕೃತ್ಯ ಅತ್ಯಂತ ಅಮಾನವೀಯ ಎಂದರು.
ಉಗ್ರರ ಈ ದಾಳಿಗೆ ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯಗಳೇ ಕಾರಣ, ಆಗಿರುವ ತಪ್ಪುಗಳನ್ನು ಸರ್ಕಾರ ಒಪ್ಪಿಕೊಳ್ಳಲಿ, ಮುಂದೆ ತಪ್ಪಾಗದಂತೆ ಕ್ರಮ ವಹಿಸಲಿ ಎಂದ ಅವರು, ಕಾಂಗ್ರೆಸ್ ಪಕ್ಷ ಭಾರತ ಸರ್ಕಾರದ ಜೊತೆಗಿದೆ, ಕೇಂದ್ರ ಸರ್ಕಾರಕ್ಕೆ ಎಲ್ಲ ಸಹಕಾರ ಕೊಡುವುದಾಗಿ ನಮ್ಮ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ ಎಂದರು.
ಈಗ ಆಗಿರುವ ದಾಳಿಯಲ್ಲಿ ಭಾಗಿಯಾಗಿರುವ ಉಗ್ರರಿಗೆ, ಆ ಉಗ್ರರ ಗುಂಪಿಗೆ ಹೇಗೆ ಶಿಕ್ಷೆ ಕಲಿಸಬೇಕೆಂದರೆ ಮುಂಬರುವ ದಿನಗಳಲ್ಲಿ ಭಾರತದ ಮೇಲೆ ದಾಳಿ ಮಾಡಲು ಭಯ ಬೀಳಬೇಕು, ನಿದ್ದೆಯಲ್ಲೂ ಭಾರತ ನನೆಪಿಸಿಕೊಂಡರೆ ನಡುಗುವ ಹಾಗೆ ಶಿಕ್ಷೆ ನೀಡಬೇಕು ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ರಾಜತಾಂತ್ರಿಕ ವಿಷಯಗಳ ಮೂಲಕ ಪಾಕಿಸ್ತಾನದ ಮೇಲೆ ಒತ್ತಡ ಹಾಕಿದರೆ ಸಾಲದು, ಈ ರೀತಿಯ ಘಟನೆಗಳು ಮಾಡುವವರನ್ನು ಅತ್ಯುಗ್ರ ಶಿಕ್ಷೆಗೆ ಒಳಪಡಿಸುವಂತಹ ಕಾನೂನು ಜಾರಿಗೆ ತರಬೇಕು ಎಂದರು.
ಉಗ್ರರ ದಾಳಿಗೆ ಪ್ರತಿಯಾಗಿ ಶತ್ರು ರಾಷ್ಟ್ರದ ಮೇಲೆ ಯುದ್ಧ ಸಾರಿದರೆ ಪರಿಹಾರ ಸಿಗುವುವುದಿಲ್ಲ, ಯಾರು ತಪ್ಪು ಮಾಡಿದ್ದಾರೋ ಅವರನ್ನು ಹುಡುಕಿ ಕಠಿಣ ಶಿಕ್ಷೆ ನೀಡಬೇಕು ಎಂದರು.
ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ್, ಮೇಯರ್ ಹುಮಾಯೂನ್ ಖಾನ್, ಎ.ಮಾನಯ್ಯ, ಕಲ್ಲುಕಂಭ ಪಂಪಾಪತಿ, ಎರುಕುಲಸ್ವಾಮಿ, ಎಂ.ರಾಜೇಶ್ವರಿ, ನೂರ್ ಮೊಹಮ್ಮದ್, ವಿವೇಕ್ ಪೇರಂ, ಮಿಂಚು ಸೀನಾ, ವಿ.ಕುಬೇರ, ಎಂ.ಪ್ರಭಂಜನಕುಮಾರ್, ಗಾದೆಪ್ಪ, ರಾಜಶೇಖರ್, ಆಸಿಫ್, ನಾಜು, ಜಬ್ಬಾರ್, ರಾಮಾಂಜನೇಯ, ಕಾಂಗ್ರೆಸ್ ವಕ್ತಾರ ವೆಂಕಟೇಶ ಹೆಗಡೆ, ಸರಗೂ ನಾಗು, ವಿಷ್ಣು ಬೋಯಪಾಟಿ, ನಾಗಭೂಷಣಗೌಡ, ಅಲ್ಲಾಭಕಷ, ಹುಸೇನ್ ಪೀರಾಂ, ಕೆಎನ್ಎಂ ಅಭಿಲಾಷ್, ಶಿವರಾಜ್, ಗುಡ್ಲೂರು ರವಿ, ಪಿ.ಜಗನ್, ಶಿವರಾಜ್, ಡಿ.ಸೂರಿ, ಚಾನಾಳ್ ಶೇಖರ್, ಯರಗುಡಿ ಸೋಮಣ್ಣ, ಕಣೇಕಲ್ ಮೆಹಬೂಬಸಾಬ, ರಾಕಿ, ಶಿವು, ಸಮೀರ್, ಸಿದ್ಧೇಶ್, ಶಂಕರ್, ವೆಂಕಟ ನಾಯ್ಡು, ಲೋಕೇಶ್, ಭತ್ರಿ ವಾಸು, ಶಾಂತಮ್ಮ, ಯಶೋಧಾ, ವಿಜಯಲಕ್ಷ್ಮೀ, ಅಸುಂಡಿ ನಾಗರಾಜ ಸೇರಿದಂತೆ ಹಲವರು ಭಾಗಿಯಾಗಿದ್ದರು.