ಬಡಜ್ಜೆಟ್ ಬಗ್ಗೆ ನಿಪುಣರ ಮನದಾಳೆ ಮಾತು. ಪನ್ನರಾರಾಜ್ ಅವರ ಸ್ಪಷ್ಟ ನೇ,ನೋಡಿ.
ಬಳ್ಳಾರಿ (7)ಇಂದು ದಾಖಲೆಯ 16ನೇ ರಾಜ್ಯ ಮುಂಗಡಪತ್ರ ಮಂಡಿಸಿದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರಿಗೆ ಅಭಿನಂದನೆಗಳು.
ರಾಜ್ಯ ಬಜೆಟ್ ಮೊದಲ ಬಾರಿಗೆ 4,00,000 ಕೋಟಿಗಳ ಗಡಿ ದಾಟಿದ್ದು ಸಂತಸದ ವಿಷಯ, ಬಹುತೇಕ ಎಲ್ಲ ಕ್ಷೇತ್ರಗಳಿಗೆ ನ್ಯಾಯ ಒದಗಿಸುವ ಪ್ರಯತ್ನವನ್ನು ಮಾನ್ಯ ಮುಖ್ಯಮಂತ್ರಿಗಳು ಮಾಡಿರುವುದು ಸ್ವಾಗತಾರ್ಹ.
ಆದರೆ ಕಲ್ಯಾಣ ಕರ್ನಾಟಕ ಭಾಗಕ್ಕೆ 2024-25ನೇ ಸಾಲಿನಲ್ಲಿ ಘೋಷಿಸಲಾದ ರೂ 5,000 ಕೋಟಿಗಳಲ್ಲಿ ಎಷ್ಟು ಬಿಡುಗಡೆಯಾಗಿದೆ ಎಂಬುದನ್ನು ಸ್ಪಷ್ಟಪಡಿಸಲಿಲ್ಲ; ಮಾಧ್ಯಮ ವರದಿಗಳ ಪ್ರಕಾರ 2023-24ನೇ ಸಾಲಿನ ಬಜೆಟ್ ಹಣವನ್ನು ವ್ಯಯಿಸದೆ ಇರುವುದರಿಂದ 2024-25ನೇ ಸಾಲಿನಲ್ಲಿ ಘೋಷಿಸಲಾದ ಹಣ ಬಿಡುಗಡೆಯಾಗಿಲ್ಲ ಎಂದು ತಿಳಿದು ಬರುತ್ತದೆ. ಇದು ವಿಷಾದನೀಯ ಸಂಗತಿ.
ಆದರೂ 2025-26ನೇ ಸಾಲಿನ ಬಜೆಟ್ ನಲ್ಲಿ ರೂ 5,000 ಘೋಷಿಸಿರುವುದನ್ನು ಸ್ವಾಗತಿಸುತ್ತೇನೆ ಹಾಗೂ 5,000 ಶಿಕ್ಷಕರ ನೇಮಕಾತಿ ಸಂತಸ ತಂದಿದೆ.
ಕಲ್ಯಾಣ ಕರ್ನಾಟಕ ಭಾಗದ ಒಂಬತ್ತು (9) ತಾಲೂಕುಗಳಲ್ಲಿ 100 ಹಾಸಿಗೆಗಳ ಆಸ್ಪತ್ರೆಗಳನ್ನು 150 ಹಾಸಿಗೆಗಳ ಆಸ್ಪತ್ರೆಗಳನ್ನಾಗಿ ಮತ್ತು ಇತರೆ 7 ಕೇಂದ್ರಗಳಲ್ಲಿ 100 ಹಾಸಿಗೆಗಳಿಗೆ ಆಸ್ಪತ್ರೆಗಳ ಉನ್ನತೀಕರಣವನ್ನು ಸ್ವಾಗತಿಸುತ್ತೇನೆ.
ಬಳ್ಳಾರಿ ಜಿಲ್ಲೆಯ ಬಹುನಿರೀಕ್ಷಿತ ಜೀನ್ಸ್ ಪಾರ್ಕ್ ಸ್ಥಾಪನೆ ಬಗ್ಗೆ ಪ್ರಸ್ತಾವನೆ ಇರದೆ ಇರುವುದು, ಒಣಮೆಣಸಿನಕಾಯಿ ಮಾರುಕಟ್ಟೆ ಘೋಷಣೆ ಆಗದಿರುವುದು ಮತ್ತು ವಿಮಾನ ನಿಲ್ದಾಣಕ್ಕೆ ಯಾವುದೇ ಪ್ರಯತ್ನ ಕಾಣದಿರುವುದು ಜಿಲ್ಲೆಯ ಜನರಿಗೆ ನಿರಾಸೆ ತಂದಿದೆ.
ಬಹು ಮುಖ್ಯವಾಗಿ ರಾಜ್ಯಮಟ್ಟದಲ್ಲಿ ಸಣ್ಣ ಕೈಗಾರಿಕೆಗಳ MSME ನೀತಿ ಮಾಡುವುದಾಗಿ ಘೋಷಿಸಿರುವುದು ಪ್ರಾದೇಶಿಕ ಅಸಮಾನತೆ ತಗ್ಗಿಸುವ ಮತ್ತು ರಾಜ್ಯದ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಪ್ರೋತ್ಸಾಹ ನೀಡಲಿದ್ದು, ಅಲ್ಲದೆ ಹೊಸ ತಂತ್ರಜ್ಞಾನ (IT) ನೀತಿ ಘೋಷಣೆ ಉದ್ಯೋಗ ಸೃಷ್ಟಿಯಲ್ಲಿ ಸಹಾಯಕವಾಗುತ್ತದೆ.