ಕುರುಬ ಸಂಘ ದಲ್ಲಿ ಯಾವದೇ ಭ್ರಷ್ಟಾಚಾರ ನಡೆದಿಲ್ಲ.ಗೌರವ ಹಾಳು ಮಾಡಲು ಕೆಲ ಮಂದಿ ಇದ್ದಾರೆ.ರಾಜಕಾರಣಿ ಗಳ ಹತ್ತಿರ ಹಣವನ್ನು ಕೊಳ್ಳೆ ಹೊಡೆಯಲು ಪ್ಲಾನ್. ಕೆರ ಕೊಡಪ್ಪ,ಸಿದ್ದನಗೌಡ, ಮಹಾಲಿಂಗನಗೌಡ, ಕುತಂತ್ರರೀ ಗಳು. ಅಧ್ಯಕ್ಷ ಗಾದಿಲಿಂಗನಗೌಡ ಸ್ಪಷ್ಟೇನೆ.
ಬಳ್ಳಾರಿ (5)ಜಿಲ್ಲಾ ಕುರುಬರ ಸಂಘ (ರಿ) ಪ್ರಸ್ತುತ ಪಧಾಧಿಕಾರಿಗಳ ಆಧಿಕಾರ ಅವಧಿಯು 2023 ರ ನವೆಂಬರ್ ಮಾಹೆಯಿಂದ 2026 ರ ನವೆಂಬರ್ ಮಾಹೆಯ ವರೆಗೆ ಇರುತ್ತದೆ.
ಬಳ್ಳಾರಿ ಜಿಲ್ಲಾ ಕುರುಬರ ಸಂಘ (ರಿ)ದ ಈ ಹಿಂದಿನ ಅಧ್ಯಕ್ಷರು ಕಾನೂನು ಬಾಹಿರವಾಗಿ ತಮ್ಮ ಆಧಿಕಾರ ಅವಧಿಯನ್ನು ಇನ್ನೂ 3 ವರ್ಷಗಳ ವರೆಗೆ ವಿಸ್ತರಿಸಿಕೊಂಡಿದ್ದು ಕಾನೂನು ಬಾಹಿರ ಕೃತ್ಯವನ್ನು ಪರಿಗಣನೆಗೆ ತೆಗೆದುಕೊಂಡು ಮಾನ್ಯ ಕರ್ನಾಟಕ ಸರ್ಕಾರವು ನಮ್ಮ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಕ ಮಾಡಿದ್ದು, ಸದರಿ ಆಡಳಿತಾಧಿಕಾರಿಗಳು ಕರ್ನಾಟಕ ಸಂಘಗಳ ಅಧಿನಯಮ-1960 ರ ಅಡಿಯಲ್ಲಿ ಚುನಾವಣ ಅಧೀಕಾರಿಯನ್ನು ನೇಮಕ ಮಾಡಿ ಸದರಿ ಕಾನೂನಿನ ನಿಯಮಗಳ ಅನುಸಾರ ಸಂಘದ ಅಜೀವ ಸದಸ್ಯರ ಮತದಾರರ ಪಟ್ಟಿಯನ್ನು ಸಿದ್ದಪಡಿಸಿ, ನಮ್ಮ ಸಂಘಕ್ಕೆ ಚುನಾವಣೆಯನ್ನು ಘೋಷಣೆ ಮಾಡಿ, ಚುನಾವಣಾ ವೇಳಾ ಪಟ್ಟಿಯನ್ನು (Calendar of Events) ತಯಾರಿಸಿ ನಮ್ಮ ಸಂಘದ ನಿದೇರ್ಶಕರ ಸ್ಥಾನಕ್ಕಾಗಿ 2023 ರ ಅಕ್ಟೋಬರ್-ನವೆಂಬರ್ ಮಾಹೆಯಲ್ಲಿ ಚುನಾವಣೆಯನ್ನು ನಡೆಸಿದ್ದು, ಸದರಿ ಚುನಾವಣೆಯಲ್ಲಿ ಚುನಾಯಿತರಾದಂತಹ ನಿದೇರ್ಶಕರಲ್ಲಿ, ಸಂಘದ ಪಧಾದಿಕಾರಿಗಳ ಸ್ಥಾನಕ್ಕಾಗಿ ಮತ್ತೊಮ್ಮೆ ಚುನಾವಣೆಯನ್ನು ನಡೆಸಿದ್ದು, ಸದರಿ ಚುನಾವಣೆಯಲ್ಲಿ ಪಿ.ಎಲ್ ಗಾದಿಲಿಂಗನಗೌಡ ಅಧ್ಯಕ್ಷರಾಗಿ, ಕೆ.ನಾಗರಾಜ ಉಪಾಧ್ಯಕ್ಷರಾಗಿ, ಕೆ.ಮೋಹನ್. ಮಹಾಪ್ರಧಾನ ಕಾರ್ಯದರ್ಶಿಗಳಾಗಿ ಮತ್ತಿತರು ಇನ್ನಿತರ ಸ್ಥಾನಗಳಿಗೆ ಪಧಾಧಿಕಾರಿಗಳಾಗಿ ಆಯ್ಕೆಯಾಗಿದ್ದು, ಪಧಾಧಿಕಾರಿಗಳ ಕಾರ್ಯಾವಧಿ 2026 ರ ನವೆಂಬರ್ ವರೆಗೆ ಇರುತ್ತೆ.
ಬಳ್ಳಾರಿ ಜಿಲ್ಲಾ ಕುರುಬರ ಸಂಘ (ರಿ)ದ ನಿದೇರ್ಶಕರ ಚುನಾವಣೆಯಲ್ಲಿ ಹಾಗೂ ಪಧಾಧಿಕಾರಿಗಳ ಆಯ್ಕೆಯ ಚುನಾವಣೆಯಲ್ಲಿ ಪರಾಜಿತರಾದಂತಹ ಅಭ್ಯರ್ಥಿಗಳು ಮತ್ತು ಕೆಲವು ದಶಕಗಳಿಂದ ಸಂಘದ ಹೆಸರನ್ನು ಹೇಳಿಕೊಂಡು ರಾಜಕೀಯ ಪಕ್ಷಗಳಲ್ಲಿ ಮತ್ತು ರಾಜಕೀಯ ಮುಖಂಡರಿಂದ ಹಲವಾರು ಸವಲತ್ತಗಳನ್ನು ಪಡೆದಿರುವ ಪಟ್ಟಭದ್ರ ಹಿತಾಸಕ್ತಿ ಹೊಂದಿರುವ ವ್ಯಕ್ತಿಗಳಾದ, ಕೆ.ಮಹಾಲಿಂಗನಗೌಡ, ಎಸ್.ಸಿದ್ದನಗೌಡ, ಕೆರಕೋಡಪ್ಪ ಮತ್ತಿತರು, ಪ್ರಸ್ತುತ ಸಂಘದ ಅಧ್ಯಕ್ಷರಾದ ಪಿ.ಎಲ್ ಗಾದಿಲಿಂಗನಗೌಡರು ಹಾಗೂ ಸಂಘದ ಮಹಾ ಪ್ರಧಾನ ಕಾರ್ಯದರ್ಶಿಗಳಾದ ಕೆ.ಮೋಹನ್ ರವರು ಸಂಘದ ಇತರ ಪದಾಧಿಕಾರಿಗಳನ್ನು ಮತ್ತು ನಿದೇರ್ಶಕರುಗಳನ್ನು ಒಳಗೊಂಡಂತೆ ಹಾಗೂ ಸಂಘದ ಅಜೀವ ಸದಸ್ಯರು ಮತ್ತು ಕುರುಬ ಸಮಾಜದ ಸರ್ವಾಂಗೀಣ ಅಭಿವೃದ್ಧಿಯನ್ನು ಬಯಸುತ್ತಿರುವ ಹಲವಾರು ಮುಖಂಡರನ್ನು ಮತ್ತು ಯುವ ಪೀಳಿಗೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸಂಘವನ್ನು ಅಭಿವೃದ್ಧಿ ಮಾಡುತ್ತಿರುವುದನ್ನು ತಾಳಲಾರದೇ ಹೊಟ್ಟೆ ಕಿಚ್ಚುನಿಂದ ಈ ಮೇಲೆ ತಿಳಿಸಿದ ಕೆ.ಮಹಾಲಿಂಗನಗೌಡ ಎಸ್.ಸಿದ್ದನಗೌಡ ಕೆರಕೋಡಪ್ಪ ಮತ್ತಿತರು *ಇನ್ನು ಮುಂದೆ ತಮ್ಮ ಬೇಳೆ ಕುದಿಯುವುದಿಲ್ಲವೆಂದು ಸಂಘದ ಸರ್ವತ್ತೋಮುಖ ಅಭಿವೃದ್ದಿಗಾಗಿ ಹಗಲು ಇರುಳು ತಮ್ಮ ತನು, ಮನ, ಧನವನ್ನು ಸಂಘದ ಅಭಿವೃದ್ದಿಗಾಗಿ ಶ್ರಮಿಸುತ್ತಿರುವುದನ್ನು ನೋಡಿ ಇನ್ನೂ ಮುಂದೆ ತಮ್ಮ "ಊಸರವಳ್ಳಿ" ನಡೆಯುವುದಿಲ್ಲವೆಂದು ಮನದಟ್ಟಾಗಿ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಾ,
ಕುರುಬ ಸಮಾಜದಲ್ಲಿ ಆಶಾಂತಿಯನ್ನು ಉಂಟು ಮಾಡಲು ವಿಫಲ ಪ್ರಯತ್ನ ಮಾಡುತ್ತಿದ್ದಾರೆ.
ಈ ಮೇಲೆ ತಿಳಿಸಿದ ಪಟ್ಟಭದ್ರ ಹಿತಾಸಕ್ತಿಗಳು ಕುರುಬ ಸಮಾಜವು ಜಾಗೃತಗೊಂಡರೆ ತಮಗೆ ಉಳಿಗಾಲವಿಲ್ಲವೆಂದು ಮನಗಂಡು ಕುರುಬ ಸಮಾಜವನ್ನು ಸರ್ವಾಂಗೀಣ ಅಭಿವೃದ್ಧಿಯ ಪಥದತ್ತ ಸಾಗಿಸುವಲ್ಲಿ ದೃಢ ನಿಶ್ಚಯದೊಂದಿಗೆ ಮುನ್ನುಗುತ್ತಿರುವ ಇಳಿ ವಯಸ್ಸಿನ ಯುವ ಮನಸ್ಸಿನ ಅಧ್ಯಕ್ಷರಾದ ಪಿ.ಎಲ್.ಗಾದಿಲಿಂಗನಗೌಡರು ಹಾಗೂ ಕುರುಬ ಸಮಾಜದ ಯಾವುದೇ ವ್ಯಕ್ತಿಗೆ ಅನ್ಯಾಯವಾದರು ನಿರ್ಭಯವಾಗಿ ಯಾವುದೇ ಸಮಯದಲ್ಲಾಗಲಿ, ಕುರುಬ ಸಮಾಜ ಅನ್ಯಾಯವಾಗಿದೆಯೆಂದು ತಿಳುದುಬಂದಲ್ಲಿ ಸ್ವಯಂಪ್ರೇರಿತವಾಗಿ ಅನ್ಯಾಯವನ್ನು ಎಸಗಿದ ವ್ಯಕ್ತಿಗಳು ಎಷ್ಟೇ ಬಾಲ್ಯಡ್ಡ
ಸಮಾಜದ, ರಾಜಕೀಯ ಹಣಬಲ, ತೋಳ್ಬಲ ಹೊಂದಿದ ಸಮಾಜಘಾತುಕ ವ್ಯಕ್ತಿಗಳನ್ನು ಎದುರು ಹಾಕಿಕೊಂಡು ನಮ್ಮ ಕುರುಬ ಸಮಾಜದ ಜನರನ್ನು ಕಾಯುತ್ತಿರುವ ಮತ್ತು ಸಂಘದ ಅಭಿವೃದ್ಧಿಗೆ ಹಗಲು- ಇರುಳು ಶ್ರಮಿಸುತ್ತಿರುವ ಮತ್ತು ಪಾದರಸದಂತೆ ಪ್ರತಿಕ್ರಿಯೆ ನೀಡುತ್ತಿರುವುದನ್ನು ಸಹಿಸದೆ ಈ ಮೇಲೆ ತಿಳಿಸಿದ ವ್ಯಕ್ತಿಗಳು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ, ಸಮಾಜದಲ್ಲಿ ಗೊಂದಲ ಉಂಟುಮಾಡುತ್ತಿದ್ದಾರೆ.
"ಈಗಾಗಲೇ ಸದಸ್ಯದಲ್ಲಿ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಗ್ರಾಮ ಪಂಚಾಯತ್ ಚುನಾವಣೆಗಳು ಘೋಷಣೆಯಾಗಲಿದ್ದು ಸದರಿ ಚುನಾವಣೆಗಳಲ್ಲಿ ವಿವಿಧ ರಾಜಕೀಯ ಪಕ್ಷಗಳಿಂದ ಟಿಕೆಟ್ ಗಿಟ್ಟಿಸಿಕೊಳ್ಳಲು ಹಾಗೂ ಸಂಘದ
ಹೆಸರನ್ನು ದುರ್ಬಳಕೆ ಮಾಡಿಕೊಂಡು ವಿವಿಧ ರಾಜಕೀಯ ಪಕ್ಷಗಳ ಮುಖಂಡಾರಲ್ಲಿ ಹಣವನ್ನು ಕೊಳ್ಳೆ-ಹೊಡೆಯಲು ಸಂಚುಮಾಡಿ, ಬಳ್ಳಾರಿ ಜಿಲ್ಲಾ ಕುರುಬ ಸಂಘ (ರಿ)ಕ್ಕೆ ತಾವುಗಳೇ ಪದಾಧಿಕಾರಿಗಳೆಂದು ಬಿಂಬಿಸಿಕೊಂಡು ತಮ್ಮ ಪೀತೂರಿಯನ್ನು ಸಾಕಾರಗೊಳ್ಳಿಸಿಕೊಳ್ಳಲು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವ ಇವರುಗಳು ವ್ಯರ್ಥ ಪ್ರಯತ್ನವನ್ನು ಕುರುಬ ಸಮೂದಾಯದ ಮುಂದೆ ಸಾಬಿತುಪಡೆಸಿ, ಇವರುಗಳ ಮೇಲೆ ಸೂಕ್ತ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲು ಸಮಜದ ಕಾನೂನು ಸಲಹೆಗಾರರೊಂದಿಗೆ ಸಮಾಲೋಚನೆ ನಡೆಸಿ ಅತಿ ಶೀಘ್ರದಲ್ಲಿ ನಿರ್ಣಯ ಕೈಗೊಳ್ಳಲಾಗುವುದು.
ಈ ಎಲ್ಲಾ ಘಟನೆಗಳಿಗೆ ಮೂಲ ಕಾರಣೀಭೂತರಾದಂತಹ "ಈ ಹಿಂದಿನ ಅಧ್ಯಕ್ಷರು ತಮ್ಮ ಬ್ರಷ್ಟಚಾರಗಳು ಹೊರಗೆ ಬಾರದಂತೆ ಈ ಮೇಲೆ ತಿಳಿಸಿದ ವ್ಯಕ್ತಿಗಳನ್ನು ಬಳಸಿಕೊಂಡು ಕೆಲ ದಿನಗಳಿಂದ ಈ ಎಲ್ಲಾ ದೃಷ್ಟಕೃತ್ಯಗಳನ್ನು ಮಾಡಿಸುತ್ತಾರೆಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದ್ದು ಸ್ವಯಂ ಘೋಷಿತ ಕಾನೂನು ಪಂಡಿತರಾದ ಈ ಹಿಂದಿನ ಅಧ್ಯಕ್ಷರು ಮಾಡಿರುವ ಎಲ್ಲಾ ಬ್ರಷ್ಟಚಾರವನ್ನು ಸದ್ಯದಲ್ಲೇ ಸಭ್ಯಸಮಾಜಕ್ಕೆ ಸಾಕ್ಷಿ ಆಧಾರಗಳ ಸಮೇತ ಪ್ರಸ್ತುತ ಪಡೆಸಲಾಗುತ್ತದೆ" ಎಂದು ಪತ್ರಿಕಾ ಮಾಧ್ಯಮದ ಮೂಲಕ ಸವಿನಯವಾಗಿ ಮನವಿಯನ್ನು ಸಲ್ಲಿಸುತ್ತಿದ್ದೇವೆ,ಎಂದು ಅಧ್ಯಕ್ಷರು, ಗಾದಿಲಿಂಗನಗೌಡ,ಕೆ ಮೋಹನ್,ಕಾಮರಾಜ ಕೊಳಗಲ್ ಅಂಜನಿ ಜೋಗಿ ಚಂದ್ರಪ್ಪ ಮುಂತಾದವರು ಸಂಘದ ಕಚೇರಿ ಯಲ್ಲಿ ಮಂಗಳವಾರ ಕುರುಬ ಸಂಘದ ಕಚೇರಿ ಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
[video width="960" height="540" mp4="https://news9today.in/wp-content/uploads/2025/03/VN20250305_070337.mp4"][/video]