ಶುಭ ವಿವಾಹ ಕಲ್ಯಾಣ ಮಂಟಪ, ಗಳಲ್ಲಿ ತುಂಡು ಗುಂಡು ಗಲಾಟೆ.!!
ಬಳ್ಳಾರಿ(11) ನಗರದ ತಾಳುರು ರಸ್ತೆಯಾ ನಾರಾಯಣಮ್ಮ ಕಲ್ಯಾಣ ಮಂಟಪ ದಲ್ಲಿ, ಮಂಗಳವಾರ ರಾತ್ರಿ, ಒಂದು ಚುನಾವಣೆ ನಿಮಿತ್ತ, ದೊಡ್ಡ ಮಟ್ಟದಲ್ಲಿ ತುಂಡು,ಗುಂಡು ವ್ಯವಸ್ಥೆ ಮಾಡಿದ್ದಾರೆ. ಅಂದಾಜು ನೂರು ಮಂದಿ ಭಾಗವಹಿಸಿದ್ದು, ಪ್ರಮುಖ ಬಿಜೆಪಿ ಪಕ್ಷದ ಕೆಲ ಮುಖಂಡರು, ಗಳು ಇದ್ದರು. ಪಾಲಿಕೆ ವಾರ್ಡ್ ಸದಸ್ಯ ಪತಿ, ವೇಮಣ್ಣ, ಸೋಮಶೇಖರ್ ರೆಡ್ಡಿ ಆಪ್ತ ಖಾಜಾ, ಸ್ವಾತಿ ಗೋವಿಂದ, ಕೆಲ ವ್ಯಾಪಾರಸ್ಥರು. ಕೆಲ ವಕೀಲರು ದೊಡ್ಡ ಮಟ್ಟದಲ್ಲಿ ಸೇರಿದ್ದರು ಎಂದು, ಎಣ್ಣೆ ಪಾರ್ಟಿ ಯಲ್ಲಿ ಗಲಾಟೆ ಅಗಿದ್ದು ಒಬ್ಬರ ಮೇಲೆ ಹಲ್ಲೆ ಆಗಿದೆ ಎಂದು, ಮಾಹಿತಿ ಪಡೆದ ಗಾಂಧಿ ನಗರ ಪೊಲೀಸ್ ರು ಸ್ಥಳ ಕ್ಕೆ ಭೇಟಿ ಕೊಟ್ಟು ಪರಿಶೀಲನೆ ಮಾಡಿದ್ದು, ತಿಳಿದು ಬಂದಿದೆ.
ಎಣ್ಣೆ ಪಾರ್ಟಿ ಯಾರು ಆಯೋಜನೆ ಮಾಡಿದ್ದರೂ , ಯಾರದ್ದು ಚುನಾವಣೆ ಅದು, ಶುಭ ವಿವಾಹ ಕಲ್ಯಾಣ ಮಂಟಪ ಗಳಲ್ಲಿ ಇದು ಎಷ್ಟು ಸರಿ ಎಂದು ಸಾರ್ವಜನಿಕರ ಪ್ರಶ್ನೆ ಆಗಿದೆ.ಗಲಾಟೆ ಅಲ್ಲಿಯಾ ಸಾರ್ವಜನಿಕರಗೆ ತಿಳಿದು ಹೊರಗೆ ಬಂದಿದೆ.