Web Stories
News 9 Today
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಿದ್ಯುತ್ ಅಪಘಾತದಲ್ಲಿ ಮೃತ ಪಟ್ಟ ಹಳ್ಳಿ ನಾಗರಾಜ್ ವಿಚಾರದಲ್ಲಿ ಜೆಸ್ಕಾಂ ನೌಕರರ ಯೂನಿಯನ್ ಗಳ ಬಲ ಪ್ರದರ್ಶನ!! ಕುಟುಂಬಕ್ಕೆ ಪರಿಹಾರ ವಿಳಂಬ ಆಗುವ ಸಾಧ್ಯತೆ...... ಅನುಭವಿಗಳ ಮಾತು

ವಿದ್ಯುತ್ ಅಪಘಾತದಲ್ಲಿ ಮೃತ ಪಟ್ಟ ಹಳ್ಳಿ ನಾಗರಾಜ್ ವಿಚಾರದಲ್ಲಿ ಜೆಸ್ಕಾಂ ನೌಕರರ ಯೂನಿಯನ್ ಗಳ ಬಲ ಪ್ರದರ್ಶನ!!
ಕುಟುಂಬಕ್ಕೆ ಪರಿಹಾರ ವಿಳಂಬ ಆಗುವ ಸಾಧ್ಯತೆ...... ಅನುಭವಿಗಳ ಮಾತು.

ಬಳ್ಳಾರಿ(8)
•ಜೆಸ್ಕಾಂ ಇಲಾಖೆಯ ದೌರ್ಬಲ್ಯ.
ಇಲಾಖೆಯ ಲೋಪ ದೋಷಗಳು ಬಹಿರಂಗ ಮಾಡಿದ ಜೆಸ್ಕಾಂ ಉದೋಗಿ ಜೆ.ಇ ತಿಪ್ಪೇಸ್ವಾಮಿ ನಾಯಕ್,
ಮೇಲಿನ ಅಧಿಕಾರಿಗಳ ಅನುಮತಿ ಇಲ್ಲದೆ, ಹೇಳಿಕೆ!!.
•ಗರಂ ಆಗಿರವ ಅಧಿಕಾರಿಗಳು. ಸಿ.ಡಿ.ಸಿ.ಎ. ರೂಲ್ಸ್ ಗಳನ್ನು ಗಾಳಿಗೆ ತೂರಿ ಬಿಟ್ಟ ನೌಕರ.
ವಿದ್ಯುತ್ ಇಲಾಖೆಯ ಕರ್ತವ್ಯ ನಿರ್ವಹಿಸುವಾಗ ತೆಗೆದುಕೊಳ್ಳಬೇಕಾದ ಸೇಫ್ಟಿ ಕ್ರಮಗಳ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟ ಇವರು ಈ ಅಪಘಾತಕ್ಕೆ ಕಾರಣವಾದ ಸಹಜ ಮಾತುಗಳನ್ನು ಯಾರ ಮುಂದೆ ಬಹಿರಂಗಪಡಿಸಿರುವುದಿಲ್ಲ?
ಬಳ್ಳಾರಿಯ ಖ್ಯಾತಿ ಹೊಂದಿರುವ ಬಿ.ಕೆ ಶ್ರೀನಿವಾಸ್ ಮೂರ್ತಿ ನೂತನ ಆಸ್ಪತ್ರೆಗೆ ವಿದ್ಯುತ್ ಸಂಪರ್ಕ ನೀಡುವ ವಿಚಾರವಾಗಿ ಜೆಸ್ಕಾಂ ಅನುಮತಿಯನ್ನು ಸುಭಾಷ್ ಅನ್ನುವ ವಿದ್ಯುತ್ ಗುತ್ತಿಗೆದಾರರು ಪಡೆದಿದ್ದರು.

ಅವರು SO.5 ವ್ಯಾಪ್ತಿಯ ಪ್ರಭಾರಿ ಸೆಕ್ಷನ್ ಆಫೀಸರ್ ಆಗಿರುವ ಕೆ.ಎಂ ವೀರೇಶ ಅವರ ಗಮನಕ್ಕೆ ತಂದು ವಿದ್ಯುತ್ ಸಂಪರ್ಕ ಕೊಡಿಸಲು ಕೇಳಿದ್ದರು.

ಸೆಕ್ಷನ್ ಆಫೀಸರ್ ಎ,ಇ,ಇ ನವೀನ್ ಕುಮಾರ್ ಅವರ ಅನುಮತಿ ಪಡೆದು ಜೆಸ್ಕಾಂ ಲೈನ್ ಮ್ಯಾನ್ ಆಗಿರವ ಸಂದೀಪ್ ಪರಸಪ್ಪ ಹಾಗೂ ಹಳ್ಳಿ ನಾಗರಾಜ್ ಮತ್ತು ಇತರರು ಕಾಮಗಾರಿ ಮಾಡುವಂತೆ ಸೂಚಿಸಿದ್ದಾರೆ.

ಕಾಮಗಾರಿ ಮಾಡುವ ಸಂದರ್ಭದಲ್ಲಿ ವಿದ್ಯುತ್ ಅಪಘಾತ ಸಂಭವಿಸಿ ಹಳ್ಳಿ ನಾಗರಾಜು, ಮೃತಪಡುತ್ತಾರೆ.

ಈ ಅಪಘಾತಕ್ಕೆ ಇಲಾಖೆಗೆ ಸಂಬಂದಿಸಿದ ವಿದ್ಯುತ್ ಅಲ್ಲ,ಇದು ವಿದ್ಯುತ್ ಜನರೇಟರ್ ನಿಂದ ಬಂದ ರಿಟನ್ ಸಪ್ಲೈ ಬ್ಯಾಕ್ ಫಿಡಿಂಗ್ ಇದರ ಬಗ್ಗೆ ಸಾರ್ವಜನಿಕರಿಗೆ ಮನದಟ್ಟು ಮಾಡಲು ಅಧಿಕಾರಿಗಳ ಹಿಂಜರಿಕೆ.

ಕಾರಣ ಕೇಳಲು ಬಳ್ಳಾರಿ ನಗರ ಹಾಗೂ ಕೈಗಾರಿಕಾ ವಲಯಗಳಿಗೆ ಜನರೇಟರ್ ಪರ್ಮಿಷನ್ ಕೊಡುವಂತಹ ಅಧಿಕಾರಿಗಳು ಈ ಜನರೇಟರ್ ಗಳಿಂದ ರಿಟರ್ನ್ ಸಪ್ಲೈ ಬರುವುದರ ಬಗ್ಗೆ ಖಾತ್ರಿ ಗೊಳಿಸಿ ಕನೆಕ್ಷನ್ ಕೊಡಿಸಬೇಕು ಆದರೆ ಬಳ್ಳಾರಿಯ ಜೆಸ್ಕಾಂ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಲೈನ್ ಮ್ಯಾನ್ ಗಳಿಗೆ ಇಂತಹ ಘಟನೆಗಳು ಐದನೇ ಬಾರಿ ವಿದ್ಯುತ್ ಅಪಘಾತ ಆಗುತ್ತಿರುವುದು ಇದರಲ್ಲಿ ಒಬ್ಬ ಮೃತಪಟ್ಟು ಒಬ್ಬನಿಗೆ ಕಾಲು ಕೈಯಲಾಗಿದೆ ಇನ್ನು ಮೂವರಿಗೆ ಸಾಮಾನ್ಯವಾಗಿ ಗಾಯಗಳಾಗಿದ್ದು ಸೂತಕದ ಛಾಯದ ಅಡಿಯಲ್ಲಿ ಲೈನ್ ಮ್ಯಾನ್ ಗಳು ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ.

ಇಂತಹ ಜನರೇಟರ್ ಗಳಿಗೆ ಪರವಾನಿಗೆ ಕೊಡುವುದು ಕರ್ನಾಟಕ ಸರ್ಕಾರದ ವಿದ್ಯುತ್ ಪರಿವೀಕ್ಷಕರು ಇಂತಹ ಜನರೇಟರ್ ಗಳನ್ನು ಪರವಾನಿಗೆ ಕೊಟ್ಟಿರುವುದು ದುರದೃಷ್ಟಕರ ಈಗಲಾದರೂ ಇಂತಹ ಜನರೇಟರ್ ಗಳನ್ನು ಚೆಕ್ ಮಾಡಿ ಸುಸೂತ್ರವಾಗಿ ಕೆಲಸ ಮಾಡಲು ನೌಕರಿಗೆ ಅನುಕೂಲ ಮಾಡಿಕೊಡುವಂತೆ ವಿದ್ಯುತ್ ವ ನೌಕರರ ವಿನಂತಿ ಆಗಿದೆ.

ಹಳ್ಳಿ ನಾಗರಾಜುಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಅವರ ಕುಟುಂಬ ಕಷ್ಟಕ್ಕೆ ಗುರಿಯಾಗಿದೆ.

ಆದರೆ ಮೃತಪಟ್ಟ ಹಳ್ಳಿ ನಾಗರಾಜ್ ಪರವಾಗಿ ತಮ್ಮ ಸ್ವಗ್ರಾಮದ ನೂರಾರು ಮಂದಿ ವಿಮ್ಸ್ ಆಸ್ಪತ್ರೆಗೆ ಆಗಮಿಸಿದ್ದರು, ಅಧಿಕಾರಿಗಳ ನಿರ್ಲಕ್ಷದಿಂದ ಅಪಘಾತ ಸಂಭವಿಸಿದೆ ಎಂದು ಕುಟುಂಬಕ್ಕೆ ನ್ಯಾಯ ಒದಗಿಸಿ ಎಂದು ಕೆಲ ಗಂಟೆಗಳ ಕಾಲ ಹೋರಾಟ, ವಾಗ್ವಾದ, ಕಚೇರಿ ಮುತ್ತಿಗೆ ವರಿಗೆ ನಡೆದು ಹೋಗಿತ್ತು, ಕೊನೆಗೆ ಜೆಸ್ಕಾಂ ಪ್ರಭಾರಿ ಮುಖ್ಯ ಅಭಿಯಂತರರು ಆಗಿರುವ ತೇಜ ನಾಯಕ್ ಡಿ.ಸಿ.ಎ. ಆನಂದ ಮತ್ತು ಕಾರ್ಯನಿರ್ವಾಹಕ ಅಭಿಯಂತರರು ಆದ ಅಸ್ಮಾಖಾತುನ್ ಮುಂತಾದ ಅಧಿಕಾರಿಗಳು ಬಂದು ಹಳ್ಳಿ ನಾಗರಾಜ ಕುಟುಂಬದ ಜೊತೆಗೆ ಮಾತುಕಥೆ ಮಾಡಿ ಸರ್ಕಾರದ ಸೌಲಭ್ಯಗಳನ್ನು ಒದಗಿಸಿಕೊಡಲು ಅವರಿಗೆ ಬರುವ ಪರಿಹಾರವನ್ನು ಒದಗಿಸಿಕೊಳ್ಳಲು ಭರವಸೆ ನೀಡಿ ಹಳ್ಳಿ ನಾಗರಾಜ್ ಮೃತ ದೇಹವನ್ನು ತೆಗೆದುಕೊಂಡು ಹೋಗಿ ಸಮಸ್ಕಾರ ಮಾಡಲು ಮನವೊಲಿಸಿದ್ದರು.

ಇಷ್ಟರಲ್ಲಿ ಹಳ್ಳಿ ನಾಗರಾಜನ ಸಂಬಂಧಿಕರು ಸೆಕ್ಷನ್ ಆಫೀಸರ್ ಮತ್ತು ಎ.ಇ.ಇ. ನವೀನ್ ಕುಮಾರ್ ಅವರನ್ನು ಅಮಾನತ್ ಮಾಡುವಂತೆ ಒತ್ತಾಯಿಸಿದರು.

ತಕ್ಷಣವೇ ಪ್ರಭಾರಿ ಶಾಖಾಧಿಕಾರಿ ವೀರೇಶ್ ಅವರನ್ನು ಅಮಾನತು ಮಾಡಲಾಗಿತ್ತು ನವೀನ್ ಅವರನ್ನು ಅಮಾನತು ಮಾಡಲು ಅವರ ಮೇಲೆ ಅಧಿಕಾರಿಗಳಿಗೆ ಶಿಫಾರಸ್ಸು ಮಾಡುವುದಾಗಿ ಹೇಳಿದರು.

ಇಲ್ಲಿಗೆ ಎಲ್ಲವೂ ಸುಸೂತ್ರವಾಗಿ ನಡೆದು ಹೋಗಿದ್ದು ಅಷ್ಟರಲ್ಲಿ ಜೆಸ್ಕಾಂ ಇಲಾಖೆಯ ನೌಕರರ ಒಂದು ಬಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡುವಂತೆ ಕುಟುಂಬಸ್ಥರಿಗೆ ಪ್ರಚೋದನೆ ಮಾಡಿದ್ದರು ಎನ್ನುವುದು ಕೇಳಿಬಂದಿದೆ.

ಬಳ್ಳಾರಿ ಕೆಪಿಟಿಸಿಎಲ್ ನೌಕರರ ಸಂಘದಲ್ಲಿ ಎರಡು ಬಣಗಳಿದ್ದು ಎಲೆಕ್ಷನ್ ನಲ್ಲಿ ಒಂದು ಬಣ ಸೋತಿದ್ದು, ಇನ್ನೊಂದು ಬಣದ ಕೆ.ಎಂ.ವೀರೇಶ್ ಗೆದ್ದು ಸಂಘಟನಾ ಕಾರ್ಯದರ್ಶಿಯಾಗಿದ್ದರು.

ಇದನ್ನು ಸಹಿಸಿಕೊಳ್ಳದೆ, ಸೋತಿದ್ದ ಬಣ ಗಾಂಧಿನಗರ ಪೊಲೀಸ್ ಠಾಣೆ ವರೆಗೆ ಹೋಗಿ ತಮ್ಮ ಸಹ ಪಾಟಿಗಳ ಮೇಲೆ ದೂರು ಕೊಡಿಸಲು ಸ್ವತಹ ಅವರೇ ಈ ವಿಚಾರದಲ್ಲಿ ಕೆಲಸ ಮಾಡಿದ್ದಾರೆ ಎಂದು ನೌಕರರ ಒಂದು ಗುಂಪುದಲ್ಲಿ ಬಹಿರಂಗವಾಗಿ ಕೇಳಿಬರುತ್ತದೆ.

ಈ ಹಿಂದೆ ನಡೆದ ಕೆಪಿಟಿಸಿಎಲ್ ನೌಕರರ ಚುನಾವಣೆಯಲ್ಲಿ ಸೋಲಾಗಿರುವ ಹಿನ್ನಲೆ ಯಲ್ಲಿ,ಗೆದ್ದು ಬಂದ ಅವರ ಮೇಲೆ ಹಿಡಿತ ಸಾಧಿಸಬೇಕು ಎನ್ನುವ ಇದೊಂದು ಕುತಂತ್ರ ಎನ್ನುವುದು ಬಹಿರಂಗವಾಗಿ ಕೇಳಿ ಬರುತ್ತದೆ.

ಅದು ಏನೇ ಇರಲಿ ಯಾರೇ ಆಗಲಿ ವಿದ್ಯುತ್ ಅಪಘಾತದಲ್ಲಿ ಮೃತಪಟ್ಟ ಅವರ ಕುಟುಂಬ ಆಕ್ರೋಶವಾಗಿ ಇರುವುದು ಸಾದಾರಣ.

ಅದನ್ನು ನಿಭಾಯಿಸಲು ಮೇಲಿನ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವುದು ಸಾಧಾರಣವಾಗಿ ಇರುತ್ತದೆ.

ಆದರೆ ಮೃತ ಹಳ್ಳಿ ನಾಗರಾಜು ಅವರಿಗೆ ನ್ಯಾಯ ಕೊಡಿಸುವುದು ಎಲ್ಲರ ಧರ್ಮವೂ ಆಗಿದೆ.

ಆದರೆ ಪ್ರಕರಣಗಳು ದಾಖಲೆ ಮಾಡಿಕೊಂಡು ಸಹಿ ಪಾಟಿಗಳ ಮೇಲೆ ಸೇಡು ತೀರಿಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ನೌಕರರ ಪ್ರಶ್ನೆ ಆಗಿದೆ.

ಇಂತಹ ವಿದ್ಯುತ್ ಅಪಘಾತಗಳು ಈ ಹಿಂದೆ ತುಂಬಾ ನಡೆದು ಹೋಗಿರುತ್ತವೆ ,
ಉದಾಹರಣೆಗೆ ಕೆಲ ತಿಂಗಳು ಗಳ ಹಿಂದೆ ಇದೇ ಘಟಕ 5. ಸೆಕ್ಷನ್ ನಲ್ಲಿ ನಾಗರಾಜ್ ನಾಯಕ್. ಎ.ಇ. ಶಾಖಾಧಿಕಾರಿಯಾಗಿ ಇದ್ದಾಗ ನಂಜುಂಡ ಅನ್ನುವ ಲೈನ್ ಮ್ಯಾನ್ ಅವರು ಕೂಡ ವಿದ್ಯುತ್ ಅಪಘಾತದಲ್ಲಿ ಮೃತ ಪಟ್ಟಿದ್ದರು.

ಆ ಸಂದರ್ಭದಲ್ಲಿ ಯಾರು ಸಹ ತಮ್ಮ ಸಹಪಾಠಿಯ ಮೇಲೆ ದೂರು ದಾಖಲಿಸುವ ಪ್ರಯತ್ನಗಳು ನಡಿಯಲಿಲ್ಲ, ಯಾರು ಅಮಾನತು ಆಗಲಿಲ್ಲ, ಇಲಾಖೆ ಹಂತದಲ್ಲಿ ವಿಚಾರಣೆ ನಡೆಸಿ ಮೃತಪಟ್ಟ ನಂಜುಂಡ ಇವರಿಗೆ ಸರ್ಕಾರದ ಸೌಲತ್ತುಗಳನ್ನು ಸೌಲಭ್ಯಗಳು ಸಿಗುವಂತೆ ಮಾಡಿದ್ದರು.

ತಮ್ಮ ಇಲಾಖೆ ಅಧಿಕಾರಿಗಳ ವಿರುದ್ಧವೇ ಹೇಳಿಕೆ ನೀಡಿರುವ ತಿಪ್ಪೇಸ್ವಾಮಿ ನಾಯಕ್ ಇವರು ಶಾಖಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಇದೇ ರೀತಿಯ ಪ್ರಕರಣ ಒಂದರಲ್ಲಿ ಅಸುಂಡಿಯ ಗಂಗಪ್ಪ ಎನ್ನುವ ವಿದ್ಯುತ್ ಗುತ್ತಿಗೆ ಕೆಲಸ ಮಾಡುವ ನೌಕರನಿಗೆ ವಿದ್ಯುತ್ ಅಪಘಾತವಾಗಿ ಸಂಪೂರ್ಣ ಬಲಗಾಲನ್ನು ತೆಗೆಯಲಾಯಿತು.
ಈ ಸಂದರ್ಭದಲ್ಲಿ ಇವರನ್ನು ಸಸ್ಪೆಂಡ್ ಮಾಡದೆ ಬೇರೆಡೆಗೆ ವರ್ಗಾಯಿಸಲಾಗಿತ್ತು ಇದರಲ್ಲೂ ಸಹ ಇಲಾಖೆಯ ಸಹಪಾಠಿಗಳು ಯಾವುದೇ ಪೊಲೀಸ್ ದೂರು ನೀಡಿರುವುದಿಲ್ಲ.

ಆದರೆ ಹಳ್ಳಿ ನಾಗರಾಜನ ಅಪಘಾತದ ವಿಚಾರದಲ್ಲಿ ಬಲಪ್ರದರ್ಶನವನ್ನು ತೋರಿಸುವ ಮಟ್ಟಕ್ಕೆ ಹೋಗಿದೆ.

ಮೇಲಿನ ಅಧಿಕಾರಿಗಳ ಆದೇಶವಿಲ್ಲದೆ ಇಲಾಖೆಯ ಲೋಪ ದೋಷಗಳನ್ನು ಕೆಳ ಹಂತದ ಸಿಬ್ಬಂದಿ ಬಹಿರಂಗ ಪಡಿಸುವಂತಿಲ್ಲ, ಅದು ಒಂದು ಕಡೆ,
ಸಿಡಿಸಿಎ. ಮಾನದಂಡಗಳನ್ನು ಗಾಳಿಗೆ ತೂರಿದಂತೆ ಆಗುತ್ತದೆ ಎಂದು ಮೇಲಿನ ಅಧಿಕಾರಗಳು ಗರಂ ಆಗಿದ್ದಾರೆ.

ಇಲಾಖೆಯಲ್ಲಿ ನಡೆದಿರುವಂತ ಘಟನೆಯನ್ನು ಸರಿಪಡಿಸಿ , ಮೃತ ಕುಟುಂಬಕ್ಕೆ ನ್ಯಾಯ ಒದಗಿಸುವುದು ಎಲ್ಲರ ಕರ್ತವ್ಯ ಆಗಿರುತ್ತದೆ.

ಅದನ್ನು ಹೊರತುಪಡಿಸಿ ಒಬ್ಬರ ಮೇಲೆ ಒಬ್ಬರು ಪ್ರಕರಣಗಳು ಮಾಡಿಕೊಂಡು ಇಲಾಖೆಯ ಗೌರವವನ್ನು ಬೀದಿಗೆ ತಂದರೆ ಮುಂಬರುವ ದಿನಗಳಲ್ಲಿ ಸಣ್ಣ ನೌಕರ ಕೂಡ ಎಂ,ಡಿ ಹಂತದವರಿಗೆ ಬಹಿರಂಗ ಹೇಳಿಕೆಯನ್ನು ಕೊಡುವ ಸಂಪ್ರದಾಯ ಇವರಿಂದಲೇ ಆರಂಭವಾಗಬಹುದು ಅನ್ನುವ ಸತ್ಯ ಬಹಿರಂಗ ಗೊಂಡಿದೆ.

ಮೃತ ಹಳ್ಳಿ ನಾಗರಾಜ್ ಅವರ ಕುಟುಂಬಕ್ಕೆ ಪ್ರಚೋದನೆ ಮಾಡಿ ಪ್ರಕರಣ ದಾಖಲೆ ಮಾಡಿದ್ದು, ಅವರ ಕುಟುಂಬಕ್ಕೆ ಬರುವ ಸೌಲಭ್ಯ ಗಳು, ನ್ಯಾಯಾಲಯದ ಮಟ್ಟದಲ್ಲಿ ಪರಿಹರ ತದನಂತರ ಸಿಗುತ್ತವೇ ವಿಳಂಬ ಆಗುತ್ತೆ ಎಂದು ಅನುಭವಿ ಗಳ ಮಾತು ಆಗಿದೆ.

ನೊಂದ ಕುಟುಂಬ ನ್ಯಾಯಾಲಯ ಸುತ್ತ ಅಲೆದಾಡುವಾ ವಾತಾವರಣ ಸೃಷ್ಟಿ ಆಗಿದೆ. ತಿಪ್ಪೇಸಾಮಿ ಗೆ, ಈ ಘಟನೆ ಗೆ ಏನು ಸಂಭಂದ ಇಲ್ಲ. ಇವರು S.E.ಅಲ್ಲ ಚೀಫ್ ಅಲ್ಲ, ಇವರು ಯಾಕೆ ಅವರನ್ನು ದಾರಿ ತಪ್ಪಸಿದ್ರು. ಕುಟುಂಬ ಕ್ಕೆ ನ್ಯಾಯ ಮಾಡಲು ಸ್ಥಳದಲ್ಲಿ ನೂರಾರು ಅವಕಾಶ ಇದ್ದವು, ಗುತ್ತೆ ದಾರರು, ಎ ಇ ಇ, SO. ಮೂಲಕ ಅಸುಪತ್ರಿ ಮೂಲಕ ಏನಾದ್ರು ಮಾಡಬಹುದು ಆಗಿತ್ತು ಅನ್ನುವ ಮಾತು ಸಾರ್ವಜನಿಕ ವಾಗಿ ಕೇಳಿ ಬಂದಿದೆ.

[video width="720" height="1280" mp4="https://news9today.in/wp-content/uploads/2025/06/VN20250608_125018.mp4"][/video]

 

Author
News 9 Today
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಚೇರಿ ಗಳು ವೀಕ್ಷಣೆ ಮಾಡಿದ, ಜಿಲ್ಲಾಧಿಕಾರಿ. ಬೇಸಿಗೆ,ಸಂದರ್ಭದಲ್ಲಿ ಜನರು ಕಚೇರಿಗಳು ಸುತ್ತ ಬಾರದು, ನಿರ್ಲಕ್ಷ ಮಾಡಿದರೆ,ಕ್ರಮ.ಬಡವರಿಗೆ ಸಮಯ ನೀಡಬೇಕಿತ್ತು: ಶ್ರೀರಾಮುಲುಮಹಿಳಾ ಮೀಸಲು ಮಸೂದೆ ಸ್ವಾಗತಾರ್ಹ; ಆದರೆ ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ: ನಾರಾ ವೈಜಯಂತಿ ರೆಡ್ಡಿ ಅಂಬೇಡ್ಕರ್ ಜಯಂತಿ ಆಚರಣೆ.ಅಂಬೇಡ್ಕರ್ ಜಯಂತಿ ಆಚರಣೆ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.