ಸರಬರಾಜು,ಕೆ,ಎಂ,ಎಫ್ ,ಜವಾಬ್ದಾರಿ ಏನು.??.*ಬಳ್ಳಾರಿ(6)ಜಿಲ್ಲೆಯ ತಾಲೂಕಿನ ಶಾಲೆ ಗಳಿಗೆ 1.ರಿಂದ10 ತರಗತಿಯ ಮಕ್ಕಳಿಗೆ ಮಧ್ಯಾಹ್ನ ಉಪಹಾರ ಯೋಜನೆ ಅಡಿಯಲ್ಲಿ ಹಾಲು, ಪೌಡರ್ ರಾಗಿ ಪೌಡರ್ ಸರ್ಕಾರ ಸರಬರಾಜು ಮಾಡುತ್ತದೆ. ಆದರೆ ಗುರುವಾರ ನಗರದ ಬಂಡಿಹಟ್ಟಿ ಶಾಲೆಯಲ್ಲಿ ದಿನಾಂಕ ಹೆಚ್ಚು ಕಡಿಮೆ,ಇರುವ ಹಾಲಿನ ಪೌಡರ್, ಮತ್ತೊಂದು ಶಾಖೆಯಲ್ಲಿ ಅವಧಿ ಮುಗಿದ (Expire) ಆಗಿರುವ ರಾಗಿ ಪೌಡರ್ ಸರಬರಾಜು ಮಾಡಿದ್ದು ಬೆಳಕಿಗೆ ಬಂದಿದೆ. ಇದನ್ನು ಪರಿಶೀಲನೆ ಮಾಡಲಾಗಿ ತಾಲೂಕಿನ ಬಹುತೇಕ ಶಾಲೆ ಗಳಿಗೆ ಇಂತಹ ಪೌಡರ್ ಸರಬರಾಜು ಮಾಡಿದ್ದು ಬಹಿರಂಗ ವಾಗಿದೆ, ಶಿಕ್ಷಣ ಬಿಸಿ ಊಟದ ಅಧಿಕಾರಿಗಳು ನಾವು ಶಾಲೆ ಗಳಿಗೆ ಬೇಕಾಗುವ ಅಷ್ಟು ಇಂಡೆಂಟ್ ಕೊಡಲಾಗುತ್ತದೆ ಅನ್ನುತ್ತಾರೆ.
ಸರಬರಾಜು ಜವಾಬ್ದಾರಿ ಉತ್ತಮ ಗುಣಮಟ್ಟದ ಹಾಲಿನ ಪೌಡರ್ ರಾಗಿ ಪೌಡರ್ ನೀಡೋದು ಕೆ.ಎಂ.ಎಫ್ ಅವರದ್ದು ಅನ್ನುತ್ತಾರೆ,ಆದರೆ ಕೆ,ಎಂ,ಎಫ್ ,ನವರು ಮಾತ್ರ ಸರಿಯಾಗಿ ಉತ್ತರ ಕೊಡುತ್ತಾ ಇಲ್ಲ. ಹಾವೇರಿ ದಿಂದ ಈಬಾರಿ ಸಪ್ಲೈ ಆಗಿದೆ, ನಾವು ಯಾರು ಪೌಡರ್ ಚೀಲಗಳನ್ನು ಬಿಚ್ಚಿ ನೋಡುವುದು ಇಲ್ಲ,ತುಂಬಿದ ಚೀಲಗಳು ಮೇಲೆ ಯಾವುದೇ ದಿನಾಂಕ ಇರೋದು ಇಲ್ಲ ನಮಗೆ ಗೊತ್ತುಆಗೋದು ಇಲ್ಲ,ಹಾಲಿನ ಪೌಡರ್ ಮಾತ್ರ ದಿನಾಂಕ ಗಳು ತಪ್ಪಾಗಿ ಮುದ್ರಣ ಆಗಿದೆ, ಅನ್ನುವ ನಿರ್ಲಕ್ಷ್ಯದ ಉತ್ತರ ನೀಡುತ್ತಾರೆ.
ಕೆ.ಎಂ.ಎಫ್ ಈ ಶಾಖೆಯ ಮುಖ್ಯಸ್ಥರು ಆಗಿರುವ ಅವರು ಉಡಾಫೆ ಉತ್ತರ ಕೊಡುತ್ತಾರೆ, ನಾವು ಚೆನ್ನಾಗಿ ಇರುವ ಪೌಡರ್ ಸರಬರಾಜು ಮಾಡಲಾಗಿದೆ ಆದರೆ ಶಾಲೆ ಯಲ್ಲಿ ಮಕ್ಕಳಿಗೆ ಕೊಡದೇ ಉಳಿಸಿಕೊಂಡು ತುಂಬಾ ದಿನಗಳು ಇಟ್ಟುಕೊಂಡು ತದನಂತರ ಈ ರೀತಿ ಮಾಡುತ್ತ ಇರಬಹುದು ಅನ್ನುವ ಆರೋಪವನ್ನು ಮಾಡಿದ್ದಾರೆ!! ಬಿಸಿ ಉಟದ ಅಧಿಕಾರಿಗಳು ಮಾತ್ರ ಅದು ಸಾಧ್ಯವಿಲ್ಲ ಒಂದು ಕಡೆ ಆದರೆ ಇರಬಹುದು ಎಂದು ಭಾವನೆ ಮಾಡಬಹುದು ಆದರೆ ತಾಲೂಕಿನ ಪ್ರತಿ ಶಾಲೆ ಯಲ್ಲಿ ಇಂತಹ ಪೌಡರ್ ಸರಬರಾಜು ಆಗಿದೆ, ಇದು ಕೆ.ಎಂ.ಎಫ್ ಅವರ ನಿರ್ಲಕ್ಷ್ಯ ಅನ್ನುತ್ತಾರೆ. ಕೆ.ಎಂ.ಎಫ್ ಅವರು ಏನೊ ಲಾಭಕ್ಕೆ ಮಕ್ಕಳ ಜೊತೆಯಲ್ಲಿ ಚೆಲ್ಲಾಟ ಮಾಡುತ್ತಾರೆ, ಇದು ಸಂಪೂರ್ಣವಾಗಿ ಕಳಪೆ ಆಗಿದೆ ಟೆಂಡರ್ ದಾರರರು ಮತ್ತು ಕೆ.ಎಂ.ಎಫ್. ಅಧಿಕಾರಿಗಳು ಇದಕ್ಕೆ ಜವಾಬ್ದಾರಿ ಎಂದು ಶಾಲೆಯ ಮುಖ್ಯಸ್ಥರು ಆಗಿರುವ ಬಂಡಿ ಹಟ್ಟಿ ಮಹೇಶ್ ಆರೋಪ ಮಾಡಿದ್ದಾರೆ. ಇದರ ಹಾಳು ತುಂಬಾ ದೊಡ್ಡ ಮಟ್ಟದಲ್ಲಿ ಇದೆ, ಕೆ.ಎಂ.ಎಫ್ ಕೇಲ ಅಧಿಕಾರಿಗಳ ಹೇಳಿಕೆ ತುಂಬಾ ಗೊಂದಲ ವಾತಾವರಣ ಸೃಷ್ಟಿ ಆಗಿದೆ.
ಸರಬರಾಜು ಆಗಿರುವ ಪೌಡರ್ ಗಳನ್ನು ಕೆಲ ಪ್ರದೇಶ ಗಳ ದಿಂದ ವಾಪಸ್ಸು ಪಡೆದಿದ್ದಾರೆ.
ಇಷ್ಟು ಆದರು ಜಿ.ಪಂ ಸಿಇಓ ಗೆ ತಕ್ಷಣದ ಮಾಹಿತಿ ಇಲ್ಲ, ಸಾಯಂಕಾಲ ವರೆಗೆ ಕೂಡ ಗೊತ್ತಿಲ್ಲ ಕೊನೆಗೆ ವರದಿಗಾರರು ಮಾಹಿತಿ ಕೇಳಿದರೆ ನಾವು ಸಂಡೂರು ನಲ್ಲಿ ಇದ್ದಿವಿ. ಐ.ವಿಲ್ ಚೆಕ್ ಇಟ್, ಎಂದರು. ತದನಂತರ ಮತ್ತೆ ಯಾವುದೇ ಮಾಹಿತಿ ಕೊಡಲಿಲ್ಲ,ಜವಾಬ್ದಾರಿ ಅಧಿಕಾರಿಗಳು ಆಗಿದ್ದು ಮಕ್ಕಳ ಸೂಕ್ಷ್ಮ ದ ವಿಚಾರ,ಸಿರಿಯಸ್ ಇಲ್ಲದೆ ಆಂಗ್ಲ ಭಾಷೆಯಲ್ಲಿ ಉತ್ತರ ಕೊಟ್ಟರೆ ಸರ್ಕಾರ ನಿದ್ದೆ ವ್ಯವಸ್ಥೆ ಯಲ್ಲಿ ಇದಿಯಾ ಅಥವಾ ಗ್ರಹಣ ಮುಚ್ಚಿಕೊಂಡಿದಿಯಾ ಎಂದು ಸಾರ್ವಜನಿಕರ ಪ್ರಶ್ನೆ ಆಗಿದೆ.